ಕೊರಟಗೆರೆ:

      ಸರ್ಕಾರ ಆಟೋ ಚಾಲಕರಿಗೆ ಸರ್ಕಾರ ಘೋಷಿಸಿರುವಂತಹ 5 ಸಾವಿರ ಹಣ ಹಲವರಿಗೆ ನಾನಾ ತಾಂತ್ರಿಕ ಕಾರಣಗಳಿಂದ ಅರ್ಹರಿಗೆ ತಲುಪಿಲ್ಲ ಸರ್ಕಾದೊಂದಿಗೆ ಚರ್ಚಿಸಿ ಎಲ್ಲರಿಗೂ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತೇನೆ ಹಾಗೂ ಮುಖಂಡ ಮುನಿಯಪ್ಪ ಚಾಲಕರಿಗೆ ಸಮವಸ್ತ್ರ ನೀಡುತ್ತಿರುವು ಶ್ಲಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ತಿಳಿಸಿದರು.

      ತಾಲ್ಲೂಕಿನಲ್ಲಿನ ಹಿರಿಯ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಮುಖಂಡ ಮುನಿಯಪ್ಪ ನೇತೃತ್ವದಲ್ಲಿ ಸನ್ಮಾನ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವೆಲ್ಲರೂ ಸ್ವತಂತ್ರ ಭಾರದಲ್ಲಿ ಇದ್ದೇವೆ ಅಂಬೇಡ್ಕರ್ ಕಂಡ ಕನಸ್ಸನ್ನು ನನಸು ಮಾಡುವಂತಹ ಹೊಣೆ ನಮ್ಮೆಲ್ಲರದೂ ಹಿಂದುಳಿದ ವರ್ಗಗಳು ಕೇವಲ ರಾಜಕಾರಣದಲ್ಲಿ ಮುಂದೆ ಬಂದಿದ್ದಾರೆ ಆದರೆ ಇನ್ನೂ ಶೈಕ್ಷಣಿಕಾಗಿ, ಆರ್ಥಿಕವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಲುಪುವಂತಾಗಬೇಕು ಎಂದರು.

ಧರ್ಮದ ಆಧಾರ ವಿಭಜನೆ:

      ದೇಶಕ್ಕೆ ಸ್ವತಂತ್ರ ನೀಡುವಂತಹ ಸಂದಭದಲ್ಲಿ ಧರ್ಮದ ಆಧಾರದ ಮೇಲೆ ನೀಡಲಾಯಿತು ಬ್ರಿಟೀಷರ ಕಪಿಮುಷ್ಠಿಯಿಂದ ದೇಶವನ್ನು ಬಿಡಿಕೊಳ್ಳಲು ಎಲ್ಲಾ ಧರ್ಮಿಯರೂ ಜಾತ್ಯಾತೀತವಾಗಿ ಹೋರಾಟ ಮಾಡಿದ್ದಾರೆ ಆದರೆ ಇಂದು ದೇಶದಲ್ಲಿ ಕೋಮು ದಳ್ಳುಳಿಗಳು ಹೆಚ್ಚಾಗುತ್ತಿದ್ದು ಇದಕ್ಕೆ ಬ್ರೇಕ್ ಬೀಳಬೇಕು ಅಂಬೇಡ್ಕರ್ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

      ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಸ್.ಪವನ್ ಕುಮಾರ್ ಮಾತನಾಡಿ ಕೋವಿಡ್ ಎಲ್ಲರ ಬದುಕನ್ನು ಕೆಡಿಸಿದ ಪಕ್ಷಾತೀತವಾಗಿ ಪ್ರತಿಯೊಂದು ಪಕ್ಷವೂ ಸಂಕಷ್ಟದಲ್ಲಿರುವ ಜನರನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಧರ್ಮ ಎಂದರು. ಬಿಜೆಪಿ ಮುಖಂಡ ಮನಿಯಪ್ಪ ಮಾನತಾಡಿ ಕರೋನಾ ಹಿನ್ನೆಲೆಯಲ್ಲಿ 25 ಸಾವಿರ ಮಾಸ್ಕ್ ಮತ್ತು 5 ಸಾವಿರ ಆಹಾರದ ಕಿಟ್ ಗಳನ್ನು ಕೊರಟಗೆರೆ ತಾಲೂಕಿನಲ್ಲಿ ವಿತರಿಸಿದ್ದೇನೆ ಇನ್ನೂ ಹೆಚ್ಚಿನ ಎಲ್ಲಾ ಸಮುದಾಯವರಿಗೆ ಉಳ್ಳವರು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

       ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಪ್ರಸನ್ನಕುಮಾರ್, ತಾಲ್ಲೂಕು ಓಬಿಸಿ ಸಂಘದ ಅಧ್ಯಕ್ಷ ಚಂದ್ರಣ್ಣ, ತಾಲೂಕು ಯುವ ಘಟಕದ ಅಧ್ಯಕ್ಷ ಬಿ.ಕೆ ಗುರುದತ್, ಆಟೋ ಚಾಲಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಪುರವರ ಶಕ್ತಿ ಕೇಂದ್ರದ ನಂಜುಂಡಯ್ಯ, ಕೋಳಾಲದ ಮಂಜುನಾಥ್, ಜಿಲ್ಲಾ ಆಟೋ ಘಟಕದ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಸುಶೀಲಮ್ಮ, ಮಹೇಶ್, ಟಿ.ಡಿ.ದಿನೇಶ್, ಪಿಎಸ್‍ಐ ಹೆಚ್.ಮುತ್ತುರಾಜ್ ಸೇರಿದಂತೆ ಇತರರು ಇದ್ದರು.

(Visited 6 times, 1 visits today)