ಕೊರೊನಾದಿಂದ ಆಯುರ್ವೇದಕ್ಕೆ ಹೆಚ್ಚಿನ ಮಾನ್ಯತೆ : ಜ್ಯೋತಿಗಣೇಶ್

ತುಮಕೂರು:

      ಕೊರೊನಾದಿಂದಾಗಿ ಇಂಗ್ಲೀಷ್ ಮೆಡಿಷನ್ ಅಬ್ಬರದಲ್ಲಿ ಮೂಲೆಗುಂಪಾಗಿದ್ದ ಆಯುರ್ವೇದ ಸೇರಿದಂತೆ ಭಾರತೀಯ ವೈದ್ಯಪದ್ದತಿಗಳು ಮತ್ತಷ್ಟು ಪ್ರಕರತೆ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.

      ತುಮಕೂರು.ನಗರದ ಹೊಸ ಬಡಾವಣೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಪಾರ್ಕಿನಲ್ಲಿ ತುಮಕೂರು ಜಿಲ್ಲಾ ಆಯುರ್ವೇದ ಪದವಿಧರ ವೈದ್ಯರ ಸಂಘ(ರಿ) ಪೌರಕಾರ್ಮಿಕರಿಗೆ ಆಯೋಜಿಸಿದ್ದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಕೊಳ್ಳುವ ಆರೋಗ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ,ಪಿಕೆಎಸ್‍ಗಳಿಗೆ ಆರೋಗ್ಯಕಿಟ್ ವಿತರಿಸಿ ಮಾತನಾಡುತಿದ್ದ ಅವರು,ಶತಮಾನ ಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ಆಯುರ್ವೇದ, ಯುನಾನಿ,ಹೋವಿಯೋಪತಿ ಸೇರಿದಂತೆ ಹಲವಾರು ಭಾರತೀಯ ಚಿಕಿತ್ಸಾ ಪದ್ದತಿಗಳು,ಇಂಗ್ಲಿಷ್ ಮೆಡಿಷನ್‍ನಿಂದ ಜನರಿಂದ ದೂರವಾಗಿದ್ದವು,ಆದರೆ ಕೋರೋನಾ ದಿಂದಾಗಿ ಮತ್ತೊಮ್ಮೆ ಅವುಗಳ ಲಾಭವನ್ನು ಜನರು ಪಡೆದುಕೊಳ್ಳುವಂತಾಗಿದೆ.ಆಯುರ್ವೇದ ವೈದ್ಯಕೀಯ ಪದ್ದತಿಗಳನ್ನು ಜನರಿಗೆ ತಲುಪಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರ ಕಾರ್ಯ ಶ್ಲಾಘನೀಯ ಎಂದರು.

      ನಗರದ ಸ್ವಚ್ಚತೆಗೆ ಶ್ರಮಿಸುವ ಪೌರಕಾರ್ಮಿಕರು ತಮ್ಮ ಮತ್ತು ತಮ್ಮ ಕುಟುಂಬದ ಸ್ವಚ್ಚತೆ ಮತ್ತು ಆರೋಗ್ಯದ ಕಡೆಗೂ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಆಯುರ್ವೇಧ ಪದವಿಧರ ವೈದ್ಯರ ಸಂಘ ನಿಮ್ಮಗಳ ಆರೋಗ್ಯದ ಕಡೆಗೆ ಮೊದಲ ಅದ್ಯತೆ ನೀಡಿದೆ.ಅಲ್ಲದೆ ಸಂಘ ಸಂಸ್ಥೆಗಳು ಸಹ ನಿಮಗೆ ಅಗತ್ಯವಿರುವ ಡ್ರಸ್, ಗಮ್ ಶೂ, ಕೈಗವಸ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಪರಿಕರಗಳನ್ನು ನೀಡಿದೆ.ಅವುಗಳನ್ನು ಬಳಸುವುದರಿಂದ ಶೇ80ರಷ್ಟು ರೋಗಗಳಿಂದ ದೂರ ಉಳಿಯಬಹುದು ಎಂದು ಸಲಹೆ ನೀಡಿದ ಶಾಸಕರು,ಆಯುರ್ವೇದ ವೈದ್ಯಕೀಯ ಪದ್ದತಿಯನ್ನು ಹೆಚ್ಚು ಬಳಕೆಗೆ ತರುವ ನಿಟ್ಟಿನಲ್ಲಿ ಟೂಡಾ ಮತ್ತು ನಗರಪಾಲಿಕೆ ಸೇರಿ, ಅಮಾನಿಕೆರೆಯಲ್ಲಿ ಒಂದು ಅಯುರ್ವೇದ ಗಿಡ ಮೂಲಿಕೆಗಳ ಉದ್ಯಾನವನ ನಿರ್ಮಿ ಸಲಾಗುತ್ತಿದೆ ಎಂದು ಶಾಸಕ ಜೋತಿಗಣೇಶ್ ತಿಳಿಸಿದರು.

      ನಗರಪಾಲಿಕೆ ಮೇಯರ್ ಶ್ರೀಮತಿ ಫರೀಧಾಬೇಗಂ ಮಾತನಾಡಿ,ಭಾರತೀಯರಿಗೆ ಆಯುರ್ವೇದ ಹೊಸದಲ್ಲ.ನಮ್ಮಗಳ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಆಯುರ್ವೇದ ವೈದ್ಯರು ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದು, ಈ ನೀಡಿರುವ ಆರೋಗ್ಯ ಕಿಟ್‍ನಲ್ಲಿರುವ ಔಷಧಗಳನ್ನು ವೈದ್ಯರು ಹೇಳಿದ ರೀತಿ ನೀವು ಮತ್ತು ನಿಮ್ಮ ಕುಟುಂಬದವರು ಬಳಸುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

      ಪಾಲಿಕೆಯ 15ನೇ ವಾರ್ಡಿನ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಾಕುಮಾರ್ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ 15ನೇ  ವಾರ್ಡನ್ನು ಮಾದರಿ ವಾರ್ಡಾಗಿ ರೂಪಿಸುವ ಹಿನ್ನೆಲೆಯಲ್ಲಿ ಶಾಸಕರು ಅತಿ ಹೆಚ್ಚು ಅನುದಾನವನ್ನು ಈ ವಾರ್ಡಿಗೆ ನೀಡಿದ್ದಾರೆ.ರಸ್ತೆ,ಚರಂಡಿ,ಕುಡಿಯುವ ನೀರು,ಯುಜಿಡಿ ಎಲ್ಲಾ ಕೆಲಸಗಳು ನಡೆಯುತ್ತಿವೆ.ಸದರಿ ಉದ್ಯಾನವನದ ಅಭಿವೃದ್ದಿಗೂ 30 ಲಕ್ಷ ರೂಗಳ ಅನುದಾನ ನೀಡಿದ್ದಾರೆ.ನಮಗಾಗಿ ದುಡಿಯುತ್ತಿರುವ ಪೌರಕಾರ್ಮಿಕರ ಆರೋಗ್ಯದ ಕಡೆಗೆ ಗಮನ ಹರಿಸುವ ನಿಟ್ಟಿನಲ್ಲಿ ಆರೋಗ್ಯಕಿಟ್‍ಗಳನ್ನು ಹಲವು ಬಾರಿ ವಿತರಿಸಲಾಗಿದೆ ಎಂದರು.

     ಆಯುರ್ವೇದ ವೈದ್ಯ ಡಾ.ಪ್ರಕಾಶ್ ಪಾಲಕೆ ಮಾತನಾಡಿ,ಆಯುರ್ವೇದದಲ್ಲಿ ಮನುಷ್ಯನಿಗೆ ಇದುವರೆಗು ಬಂದಿರುವ ಮತ್ತು ಮುಂದೆ ಬರಬಹುದಾದ ಎಲ್ಲಾ ಖಾಯಿಲೆಗಳಿಗೂ ಔಷಧವಿದೆ.ಪ್ರಪಂಚದ ಸುಮಾರು 200 ದೇಶಗಳನ್ನು ಎಡಬಿಡದೆ ಕಾಡುತ್ತಿರುವ ಮಹಾಮಾರಿ ಕೋರೋನಗೂ ಔಷಧವಿದೆ.

      ಈಗಾಗಲೇ ಜಿಲ್ಲೆಯ ಗುಬ್ಬಿ ಸೇರಿದಂತೆ ಹಲವು ಕಡೆ ರೋಗ ಲಕ್ಷಣಗಳಿಲ್ಲದ ಕೋವಿಡ್-19 ಸೋಂಕಿತರಿಗೆ ಈ ಔಷಧ ನೀಡಿ,ಅವರು ಇದರಿಂದ ಹೊರಬರುವಂತೆ ಮಾಡಲಾಗಿದೆ. ಪ್ರಸ್ತುತ ನೀಡಿರುವ ಆರೋಗ್ಯ ಕಿಟ್‍ನಲ್ಲಿ ಇರುವ ಚೂರ್ಣ, ಮಾತ್ರೆಗಳನ್ನು ನಿಯಮಿತವಾಗಿ ಬಳಸುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು ಎಂದರು.

      ಈ ವೇಳೆ ಆಯುರ್ವೇದ ವೈದ್ಯರಾದ ಡಾ.ಚಿತ್ತರಂಗ ಜನ್, ಡಾ.ನಂಜುಂಡಪ್ಪ, ಡಾ.ಶಿಲ್ಪ, ಮುಖಂಡರಾದ ಸುರೇಶ್, ನಟರಾಜು, ಜಗನ್ನಾಥ್, ಡಾ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

(Visited 13 times, 1 visits today)

Related posts

Leave a Comment