ತುಮಕೂರು:

     ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಗಳಲ್ಲಿ ನಿಂತಿರುವ ಲಾರಿಗಳಲ್ಲಿ ಡೀಸೆಲ್ ಕದಿಯುತಿದ್ದ ಕಳ್ಳರು ಸಬ್ ಇನ್ಸ್ಪೆಕ್ಟರ್ ಕೈಗೆ ಸಿಕ್ಕಿದರೂ ಸಹ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿರುವ ಆಪಾದನೆ ತುಮಕೂರು ತಿಲಕ್ ಪಾರ್ಕ್ ವೃತ್ತದ ಹೊಸ ಬಡಾವಣೆ ಪೆÇಲೀಸ್ ಠಾಣೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

      ಇದರ ಪೂರ್ಣ ವಿವರಗಳನ್ನು ನೋಡಿದರೆ ಪೊಲೀಸರೇ ಈ ರೀತಿ ನಡೆದುಕೊಂಡರೆ ಇನ್ನೂ ಬೇರೆಯವರ ಕಥೆಯೇನು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.

      ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಗುರಿಯಾಗಿರಿಸಿಕೊಂಡು ಡೀಸೆಲ್ ಕದಿಯುತಿದ್ದ ಕಳ್ಳರು ತುಮಕೂರು ಕಡೆ ಬರುತ್ತಿದ್ದಾಗ ರಾತ್ರಿಯ ಪಾಳೆಯದಲ್ಲಿ ಕರ್ತವ್ಯ ನಿರತ ಮಹಿಳಾ ಸಬ್ ಇನ್ಸ್ಪೆಕ್ಟರ್ ಕಾರನ್ನು ತಡೆದು ತಪಾಸಣೆಗೊಳಪಡಿಸಿ ಅನುಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗÀ ಸಿಕ್ಕಿರುವ ವ್ಯಕ್ತಿಗಳು ಕಳ್ಳತನದ ಕಸುಬಿನವರು ಎನ್ನುವುದು ತಿಳಿಯುತ್ತದೆ ಆಗ ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ ಎನ್ನುವುದು ಹಿರಿಯ ಅಧಿಕಾರಿಗಳಿಗೆ ತಿಳಿದಿರಲಿಲ್ಲ ತಡರಾತ್ರಿ ನಡೆದ ಘಟನೆಯಾಗಿರುವುದರಿಂದ ಹೊರಬರುವುದಿಲ್ಲವೆಂದು ಮನಗಂಡು ಕಳ್ಳರನ್ನು ಬಿಟ್ಟುಕಳಿಸಿದ್ದಾರೆ ಎನ್ನುವ ಮಾತಿದೆ.

      ರಾಷ್ಟ್ರೀಯ ಹೆದ್ದಾರಿಯಲ್ಲಿ ಡೀಸೆಲ್ ಕದಿಯುತ್ತಿದ್ದ ಹೊಸ ಕಳ್ಳರು : ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಬದಿಯಲ್ಲಿ ಊಟ ಮಾಡಲೆಂದು ಹಾಗೂ ವಿಶ್ರಾಂತಿಗೆಂದು ಲಾರಿಯ ಚಾಲಕರುಗಳು, ಹೋಟೆಲುಗಳು, ಪೆಟ್ರೋಲ್ ಬಂಕುಗಳು, ಡಾಬಾಗಳು, ಸೇರಿದಂತೆ ಇತರ ಕಡೆ ರಸ್ತೆ ಬದಿಯಲ್ಲಿ ವಿಶಾಲವಾಗಿರುವ ಜಾಗಗಳಲ್ಲಿ ಲಾರಿಗಳನ್ನು ನಿಲ್ಲಿಸಿರಿಸಿರುತ್ತಾರೆ, ಇಂತಹ ಲಾರಿಗಳನ್ನು ಗುರಿಯಾಗಿರಿಸಿಕೊಂಡು ಕುರುವೇಲು ಗ್ರಾಮದವರು ಎನ್ನಲಾದ 4ಜನರು ಇಂಡಿಕಾ ಕಾರಿನಲ್ಲಿ ಬಂದು ಲಾರಿಗಳ ಡೀಸೆಲ್ ಟ್ಯಾಂಕ್ ಬಳಿ ನಿಲ್ಲಿಸಿ ವಾಹನಗಳ ಸುತ್ತಮುತ್ತ ಲಾರಿಯ ಚಾಲಕರುಗಳ ಚಲನವಲನವನ್ನು ಪರಿಶೀಲಿಸಿ ನಂತ ಸಿನಿಮೀಯ ರೀತಿ ಡೀಸೆಲನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಾರೆ. ಇಂತಹ ಘಟನೆಗಳು ಪದೇಪದೇ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ನಡೆಯುತ್ತಲೇ ಇರುತ್ತವೆ ಆದರೆ ಇದರ ಬಗ್ಗೆ ದೂರು ದಾಖಲಾಗುವುದು ವಿರಳ.

      ದಾಬಸಪೇಟೆ, ನೆಲಮಂಗಲ, ಸೇರಿದಂತೆ, ತುಮಕೂರು ಜಿಲ್ಲೆ ಹಾಗೂ ಚಿತ್ರದುರ್ಗ ಜಿಲ್ಲೆಯ ಗಡಿಭಾಗದ ವರೆಗೂ ಈ ಕಳ್ಳತನದ ಮಾಫಿಯಾ ನಿರಂತರವಾಗಿ ನಡೆಯುತ್ತಲೇ ಇರುತ್ತದೆ:

      ರಸ್ತೆಬದಿಗಳಲ್ಲಿ ನಿಲ್ಲಿಸಿರುವ ವಾಹನಗಳಲ್ಲಿ ಚಾಲಕರಿಗೆ ಚಳ್ಳೆಹಣ್ಣು ತಿನ್ನಿಸಿ ಡೀಸೆಲ್ ಕದಿಯುವ ಗ್ಯಾಂಗನ್ನು ಈ ಹಿಂದೆ ಶಿರಾ ಗ್ರಾಮಾಂತರ ಡಿವೈಎಸ್ಪಿ ಆಗಿದ್ದ ವೆಂಕಟೇಶನಾಯ್ಡು ಈಗ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರಪ್ಪ ಇವರು, ತಾವರೆಕೆರೆ ಪೊಲೀಸ್ ಠಾಣೆ, ಶಿರಾ ನಗರಠಾಣಾ ಪೊಲೀಸ್ ಠಾಣೆ ವ್ಯಾಪ್ತಿ, ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ಕೋಲಾ ಪೊಲೀಸ್ ಠಾಣೆ ವ್ಯಾಪ್ತಿ ಕ್ಯಾಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಡೀಸೆಲ್ ಕದಿಯುತಿದ್ದ ಖದೀಮರನ್ನ ಮಟ್ಟ ಹಾಕಿದ್ದರು. ಇದರ ಸಂಬಂಧ ಲಾರಿಯ ಚಾಲಕರುಗಳು ಪೊಲೀಸ್‍ ಠಾಣೆಗಳಿ ದೂರನ್ನುಸಲ್ಲಿಸಿದ್ದರು.

      ಕಳೆದ ಸೋಮವಾರ ರಾತ್ರಿ ಡಾಬಸ್‍ಪೇಟೆ ಸೇರಿದಂತೆ ವಿವಿಧ ಕಡೆ ನಿಂತಿದ್ದ ಲಾರಿಗಳಲ್ಲಿ ಡೀಸೆಲ್‍ನ್ನು ಕಳವು ಮಾಡಿಕೊಂಡು ತುಮಕೂರಿ ಬಟವಾಡಿ ಕಡೆ ಬಂದಾಗ ಹೊಸ ಬಡಾವಣೆ ಪೊಲೀಸ್ ಠಾಣೆಯ ಸಬ್‍ಇನ್ಸ್ಪೆಕ್ಟರ್ ರಾತ್ರಿ ಗಸ್ತಿನಲಿ ಗಸ್ತಿನಲ್ಲಿದ್ದ ಸಬ್‍ಇನ್ಸ್ಪೆಕ್ಟರ್ ಅನುಮಾನಸ್ಪದವಾಗಿ ಬಂದ ಇಂಡಿಕಾ ಕಾರನ್ನು ತಡೆದು ಪರಿಶೀಲಿಸಿದಾಗ ಅನುಮಾನಗೊಂಡು ವಾಹನಸಮೇತ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.ಠಾಣೆಯಲ್ಲಿ ವಿಚಾರಣೆ ಮಾಡಿದಾಗ ಹೊಸದಾಗಿ ಕಳ್ಳತನಕ್ಕೆ ಇಳಿದಿರುವ ಡೀಸೆಲ್ ಕಳ್ಳರೆಂದು ಪೊಲೀಸರಿಗೆ ತಿಳಿದುಬಂದಿದೆ.

      ಅಷ್ಟರಲ್ಲಿ ಅನಾಮಧೇಯ ವ್ಯಕ್ತಿಯಿಂದ ಪೊಲೀಸರಿಗೆ ಬಂದ ಒತ್ತಡದ ಹಿನ್ನೆಲೆಯಲ್ಲಿ ಇಲ್ಲಿನ ಸಬ್‍ಇನ್ಸ್ಪೆಕ್ಟರ್ ಹಾಗೂ ಮುಖ್ಯ ಪೇದೆಯೊಬ್ಬರು ನಡೆಸಿದ ಮಾತುಕತೆಯ ಫಲವಾಗಿ ಪ್ರಕರಣವನ್ನು ಮುಚ್ಚಿ ಹಾಕಿ ಸಿಕ್ಕಿಬಿದ್ದಿದ್ದ ಕಾರು ಹಾಗೂ ಡೀಸೆಲ್‍ನ್ನು ವಾಪಸ್ ಕಳುಹಿಸಿಕೊಟ್ಟಿರುವ ಘಟನೆ ನಡೆದಿದೆ ಎಂದು ನಂಬಲರ್ಹವಾದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಕಳ್ಳರು ಕದ್ದ ಡೀಸಲನ್ನು ಮನೆಗೆ ಹೊತ್ತೊಯ್ದ ಸಬ್ ಇನ್ಸ್ಪೆಕ್ಟರ್:

      ನಿಜಕ್ಕೂ ಈ ಸುದ್ದಿಯನ್ನು ಕೇಳಿದರೆ ನಗೆಪಾಟಲಿಗೆ ಈಡಾಗುತ್ತವೆ… ಕಳ್ಳರು ಕದ್ದ ಡೀಸೆಲನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನು ಜೈಲಿಗೆ ಅಟ್ಟುವ ಬದಲು ಪ್ರಕರಣವನ್ನೇ ಮುಚ್ಚಿ ಹಾಕಿ ಕಳ್ಳರು ಕದ್ದ ಡೀಸೆಲನ್ನು ವಾಹನದ ಚಾಲಕ (ಹೋಂ ಗಾರ್ಡ್) ಮೂಲಕ ಇಂಡಿಕಾ ಕಾರಿನಲ್ಲಿದ್ದ 4 ಕ್ಯಾನ್ ಗಳಲ್ಲಿ ಇದ್ದ ಡೀಜಲ್ ನಲ್ಲಿ ಒಂದು ಕ್ಯಾನ್ (40ಲೀಟರ್) ಡೀಜಲ್ ಒಂದು ಕ್ಯಾನ್ ಜೀಪಿನ ಚಾಲಕನ ಮುಖಾಂತರ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಹಿತಿಯಿಂದ ತಿಳಿದು ಬಂದಿದೆ. ಬಟವಾಡಿ ಬಳಿ ಕಳ್ಳರು ಸಿಕ್ಕಿಬಿದ್ದ ನಂತರ ವೃತ್ತ ನಿರೀಕ್ಷಕರಿಗೆ ಆಗಲಿ ಡಿವೈಎಸ್ಪಿ ಅವರಾಗಲಿ ಇಲಾಖೆಯ ಹಿರಿಯ ಯಾವ ಅಧಿಕಾರಿಗಳ ಗಮನಕ್ಕೂ ತರದೇ ಇರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

      ಪದೇ ಪದೇ ಇಂತಹ ಪ್ರಕರಣಗಳು ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸುತ್ತಲೇ ಇವೆ ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ:
ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಹೊಸದೇನಲ್ಲ ಪದೇಪದೇ ಇಲ್ಲಿನ ಕೆಲವು ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂತಹ ಅವಘಡಗಳು ಸಂಭವಿಸುತ್ತಲೇ ಇವೆ.ಇದು ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಂಶಿಕೃಷ್ಣರವರು ಸೇರಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದ್ದೇಶ್ ಹಾಗೂ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರಿಗೆ ಸಂಪೂರ್ಣ ಮಾಹಿತಿ ಇದ್ದರೂ ಇಂತಹವರ ಮೇಲೆ ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಅನುಮಾನದಿಂದ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ.

      ಧೋಬಿ ಘಾಟ್ ರಸ್ತೆಯ ಪಾರ್ಕಿನ ಬಳಿ ಇರುವ ಮನೆಯೊಂದರಲ್ಲಿ ಕಳ್ಳತನವಾಗಿದೆ ಎಂದು ಬಾಡಿಗೆ ಇದ್ದವರು ದೂರು ಕೊಡಲು ಹೋದರೆ ದೂರು ದಾಖಲಿಸಿಕೊಳ್ಳಲು ಮೀನಮೇಷ ಎಣಿಸಿ ನಂತರ ಮನೆಯ ಮಾಲೀಕನನ್ನು ಕರೆಸಿ ಕಳ್ಳತನ ನೀನೆ ಮಾಡಿರುವುದು ಎಂದು ಹೆದರಿಸಿ ಅವರಿಂದ ಒಡವೆಯನ್ನು ತರಿಸಿಕೊಂಡಿದ್ದ ಘಟನೆ ನೆಡೆದಿತ್ತು, ಈ ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗಿ ಹಿರಿಯ ಅಧಿಕಾರಿಗಳು ಇಲ್ಲಿನ ಸಬ್‍ಇನ್ಸ್ಪೆಕ್ಟರ್ ಮೇಲೆ ಕೆಂಡಮಂಡಲ ರಾಗಿದ್ದರು. ಇಂತಹ ಹಲವಾರು ಘಟನೆಗಳು ನಡೆದ ಬೆನ್ನಲ್ಲೇ ಈಗ ಡೀಸಲ್ ಪ್ರಕರಣ ಬೆಳಕಿಗೆ ಬಂದಿದೆ.

      ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿರುವ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಶ್ರಮಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪದೇಪದೇ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಬೇರುಸಮೇತ ಕಿತ್ತು ಹಾಕಬೇಕೆಂದು ನಿರಂತರವಾಗಿ ಪ್ರಯತ್ನ ಪಡುತ್ತಿದ್ದಾರೆ.ಇತ್ತೀಚಿಗಷ್ಟೇ ಹೆಬ್ಬೂರು ಪೊಲೀಸ್ ಠಾಣೆಯ ಪೇದೆಯೊಬ್ಬ ಪೊಲೀಸ್ ಠಾಣೆಗೆ ಸೇರಿದ ಪ್ರಾಪರ್ಟಿಯ ಬೈಕನ್ನು ಖಾಸಗಿ ವ್ಯಕ್ತಿಗೆ ಮಾರಿಕೊಂಡ ಘಟನೆಯ ಮಾಸುವ ಮೊದಲೇ ಈಗ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಳ್ಳರು ಕದ್ದ ಡೀಸೆಲ್ ಮನೆಮನೆಗೆ ಹೊತ್ತುಹೊಯ್ದ ಘಟನೆ ನಿಜಕ್ಕೂ ಇಲಾಖೆಯೇ ತಲೆತಗ್ಗಿಸುವಂತಹ ಸ್ಥಿತಿಯಾಗಿದೆ ಪ್ರಕರಣ ಚಿಕ್ಕದಾದರೂ ಕೆಲಸ ದೊಡ್ಡದಾಗಿ ಕಾಣುತ್ತದೆ ಆದರೆ ಇಲಾಖೆಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳಿಂದಾಗುವ ಅಚಾತುರ್ಯದಿಂದ ಎಸ್ಪಿಯವರು ನಿರಂತರ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರವಾಗಿ ತನಿಖೆ ನಡೆಸಿದರೆ ಸತ್ಯಾಸತ್ಯತೆ ಬಹಿರಂಗವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

(Visited 1,931 times, 1 visits today)