ತುಮಕೂರು:

      ಅಹೋರಾತ್ರಿ ಧರಣಿಯಲ್ಲಿ ಜೆಸಿಬಿ ವೆಂಕಟೇಶ್ , ರಾಮಯ್ಯ, ಮೋಹನ್ ಪರಮೇಶ್, ಶಿವರಾಜು, ಬಂಡೆ ಕುಮಾರ ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಗಾಗಿ ಒತ್ತಾಯಿಸಿ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ.

      ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ದಲಿತಪರ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರ ಧರಣಿ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿತು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ದಲಿತಪರ ಸಂಘಟನೆಯ ಮುಖಂಡ ಹಾಗೂ ಕಾಂಗ್ರೆಸ್ ನಾಯಕ ವಾಲೆ ಚಂದ್ರಯ್ಯ ಶತಶತಮಾನಗಳಿಂದ ದಲಿತರು ಹಾಗೂ ಹಿಂದುಳಿದ ಜನಾಂಗ ತುಳಿತಕ್ಕೊಳಗಾಗಿದ್ದು, ಅವರಿಗೆ ನ್ಯಾಯ ಒದಗಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಸದಾಶಿವ ಆಯೋಗ ತನ್ನ ವರದಿಯನ್ನು ಸಲ್ಲಿಸಿ ಎಂಟು ವರ್ಷಗಳಾದರೂ ಯಾವುದೇ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ ಅವರಿಗೆ ನೀಡಬೇಕಾದ ಸೌಲಭ್ಯ ನೀಡಿಲ್ಲ ಆದ್ದರಿಂದ ಕೂಡಲೇ ಎಲ್ಲ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು ಹಿಂದುಳಿದ ಜನಾಂಗದ ಮಕ್ಕಳಿಗೆ ಇಂದಿಗೂ ಸಹ ಸರಿಯಾದ ವಿದ್ಯಾಭ್ಯಾಸ ನೌಕರಿ ಸಾಮಾಜಿಕ ಜೀವನ ಬರೆಯಲು ಸಾಧ್ಯವಾಗಿಲ್ಲ ಸಮಾಜದಲ್ಲಿ ಜಾತಿಯತೆ ಅಸ್ಪೃಶ್ಯತೆ ಇನ್ನು ಮಾಡುತ್ತಿದ್ದು ಅದನ್ನು ತೊಡೆದು ಹಾಕಬೇಕಾದರೆ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

      ಕಳೆದ ಮೂರುದಿನಗಳಿಂದ ನಾವು ಪ್ರತಿಭಟನೆ ನಡೆಸುತ್ತಿದ್ದರು ಕೇಳಿ ಕೆ. ಎನ್ ರಾಜಣ್ಣ ಹಾಗೂ ಜ್ಯೋತಿ ಗಣೇಶ್ ಅವರನ್ನು ಹೊರತುಪಡಿಸಿ ಮತ್ಯಾವುದೇ ಜನಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿಲ್ಲ ಸರ್ಕಾರದ ಪರವಾಗಿ ಯಾವುದೇ ಅಧಿಕಾರಿಗಳು ಸಹ ಆಗಮಿಸಿಲ್ಲ ಎಂದು ದೂರಿದರು.

         ರಾಜ್ಯದ 224 ಕ್ಷೇತ್ರಗಳ ಶಾಸಕರಿಗೂ ಸಹ ದಲಿತರು ತಮ್ಮ ಮತವನ್ನು ನೀಡಿದ್ದಾರೆ ಅವರ ಋಣವನ್ನು ತೀರಿಸಲು ಎಲ್ಲ ಶಾಸಕರು ಸರಕಾರದ ಮೇಲೆ ಒತ್ತಡ ತಂದು ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದರು. ಪ್ರತಿಭಟನಾಕಾರರು ರಾತ್ರಿಯಿಡಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಿ ಅಲ್ಲಿಯೇ ಮಲಗಿದ್ದರುï, ಮುನಿರಾಜು, ರಾಮಮೂರ್ತಿ, ಕೆಂಪರಾಜು, ಟೈಗರ್ ನಾಗು, ರಂಜನ್ ಇದ್ದರು.

(Visited 7 times, 1 visits today)