ತುಮಕೂರು:

      ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ಅಗತ್ಯವಿದೆ. ಶಿಕ್ಷಕರು ಸಮಾಜ ಹಾಗೂ ವಿದ್ಯಾರ್ಥಿಗಳು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡು, ವಿಜ್ಞಾನದಲ್ಲಿ ಹೊಸ-ಹೊಸ ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಂದ ಹೊರ ಹೊಮ್ಮಿಸಿಬೇಕು ಈ ದಿಸೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‍ನ್ನು ಉತ್ತಮ ವೇದಿಕೆಯನ್ನಾಗಿ ಮಾಡಿಕೊಳ್ಳಬೇಕೆಂದು ಸಾ.ಶಿ ಇಲಾಖೆಯ ಉಪನಿರ್ದೇಶಕರಾದ ಕೆ. ಮಂಜುನಾಥ್ ತಿಳಿಸಿದರು.

      ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಪ್ರೌಢಾಶಾಲೆಯಲ್ಲಿ ಏರ್ಪಡಿಸಿದ್ದ ಅಂತರಶಾಲಾ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಬಿ.ಆರ್.ಸಿ ಗಂಗಹನುಮಯ್ಯ ಮಾತನಾಡಿ ಮಕ್ಕಳಲ್ಲಿರುವ ವೈಜ್ಞಾನಿಕ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ಸಹಾಯಕವಾಗಿವೆ, ವಿದ್ಯಾರ್ಥಿಗಳು ತಮಗೆ ಗೊತ್ತಿರದ ವಿಚಾರಗಳನ್ನು ಶಿಕ್ಷಕರಿಂದ, ತಜ್ಞರಿಂದ, ಮಾಧ್ಯಮಿಗಳಿಂದ ಹಾಗೂ ಅಂತರ್ಜಾಲದಿಂದ ತಂತ್ರಜ್ಞಾನವನ್ನು ಬಳಸಿಕೊಂಡು ಸಮಾಜಕ್ಕೆ ವಿದ್ಯಾರ್ಥಿಗಳು ಕೊಡುಗೆ ನೀಡಬೇಕೆಂದು ತಿಳಿಸಿದರು.

      ಸಮಾರಂಭದ ಅಧ್ಯಕ್ಷತೆವಹಿಸಿದ್ದ ಡಯಟ್‍ನ ಪ್ರಾಂಶುಪಾಲರಾದ ಸಿ. ನಾಗಮಣಿ ಮಾತನಾಡಿ ನಾವು ಯಾವುದೇ ಅಭಿವೃದ್ದಿಯನ್ನು ತಳಹಂತದಿಂದ ರೂಢಿಸಿಕೊಂಡಾಗ ಮಾತ್ರ ಪೂರ್ಣಪ್ರಗತಿ ಸಾಧ್ಯ. ಮುಂದಿನ ಪ್ರಜೆಗಳಾದ ಹಿಂದಿನ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ಮನೋಭಾವದ ಬೆಳೆವಣಿಗೆಗೆ ಪೊರಕವಾದ ಮಾಹಿತಿಗಳನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಸೂಕ್ತ ಮಾರ್ಗದರ್ಶನ ಮಾಡಬೇಕೆಂದರು.

       ಅಟಲ್‍ಲ್ಯಾಬಿನ ಜಿಲ್ಲಾ ನೋಡಲ್ ಅಧಿಕಾರಿ ಶ್ರೀಮತಿ ಶಾಂತಲಾ ಮಾತನಾಡಿ, ಸಮಾಜದಲ್ಲಿ ಜ್ಞಾನದಿಂದ ಮಾತ್ರ ಗೌರವಾನ್ವಿತರಾಗಲು ಸಾಧ್ಯ ಆದುದರಿಂದ ಮಕ್ಕಳು ಪ್ರತಿಭಾವಂತರಾಗಬೇಕು ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸ ಬೇಕೆಂದರು. ಶಾಲೆಯ ಉಪ-ಪ್ರಾಂಶುಪಾಲರಿಂದ ಕೆ.ಎಸ್ ಉಮಾಮಹೇಶ್ ಮಾತನಾಡಿ ಅಟಲ್ ಟಿಂಕರಿಂಗ್ ಲ್ಯಾಬ್‍ನ ಧ್ಯೇಯೋದ್ದೇಶಗಳನ್ನು ತಿಳಿಸಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ, ಜಲ ಮತ್ತು ವಿದ್ಯುತ್ ಉಳಿತಾಯ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಇತ್ತೀಚಿನ ರೊಬೊಟಿಕ್ ಹಾಗೂ 3 ಡಿ ಪ್ರಿಂಟರ್, ಸ್ಮಾರ್ಟ್ ಡಸ್ಸ್‍ಬಿನ್, ಬ್ಲೈಂಡ್ ಸ್ವಿಕ್, ಇಂಧನ ಉಳಿತಾಯದ ಒಲೆ, ಟಿಲಿಸ್ಕೋಪ್, ಡ್ರೋಣ್ ಮೊದಲಾದ ಸುಮಾರು 100ಕ್ಕೆ ಹೆಚ್ಚು ಪ್ರ್ರಾತ್ಯಕ್ಷಿಕೆಗಳನ್ನು ನಗರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿ ಮೆಚ್ಚುಗೆಗೆ ಪ್ರಾತ್ರರಾದರು. ವಿದ್ಯಾರ್ಥಿಗಳಿಗೆ ಪ್ರಾಥಮಿಕ & ಪ್ರೌಢಶಾಲಾ ಹಂತದಲ್ಲಿ ಪ್ರತ್ಯೇಕವಾಗಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು.

      ವಿದ್ಯಾರ್ಥಿನಿ ಪೂರ್ವಿ ಟಿ.ಪಿ ಪ್ರಾರ್ಥಿಸಿದರು, ಆರ್.ಎಂ. ಮೃತ್ಯುಂಜಯಪ್ಪ ಸ.ಶಿ ಸ್ವಾಗತಿಸಿದರು, ಬಿ.ವಿಜಯಲಕ್ಷ್ಮೀ ಸ.ಶಿ ವಂದಿಸಿದರು. ಕಾರ್ಯಕ್ರಮವನ್ನು ಬಿ.ಎಸ್ ಶಾಂತಲಾ ನಿರೂಪಿದರು. ವಿಜ್ಞಾನ ಶಿಕ್ಷಕರಾದ ಹೆಚ್.ಆರ್ ಸಂತೋಷ್, ಡಿ. ಶಿವಮೂರ್ತಿ, ರಂಗನಾಥ್, ತೀರ್ಪುಗಾರರಾಗಿ ಭಾಗವಹಿಸಿದ್ದರು.

(Visited 40 times, 1 visits today)