ತುಮಕೂರು:

     ತುಮಕೂರು ಜಿಲ್ಲೆಯ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ನೂತನ ಜಿಲ್ಲಾಧ್ಯಕ್ಷರಾಗಿ ರವೀಶ್ ಅರಕೆರೆರವರನ್ನು ಆಯ್ಕೆ ಮಾಡಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಿ.ಸುರೇಶ್‍ಗೌಡರು ಆದೇಶ ಹೊರಡಿಸಿರುತ್ತಾರೆ.

      ನೂತನ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ರವೀಶ್ ಅರಕೆರೆರವರು ಉತ್ತಮ ಸಂಘಟನಾ ಸಾಮಥ್ರ್ಯವನ್ನು ಹೊಂದಿದ್ದು, ಸಂಘಟನೆಯ ವಿಚಾರದಲ್ಲಿ ಪ್ರಭಾವಿ ರಾಜಕಾರಣಿಗಳ ಅನುಭವವನ್ನು ಮೀರಿಸುವಂತಹ ಸಂಘಟನಾ ಚಾತುರ್ಯವನ್ನು ಹೊಂದಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಜವಾಬ್ದಾರಿಗಳನ್ನ ಯಾವುದೇ ರೀತಿಯ ಲೋಪಗಳಿಲ್ಲದೆ ಸಮರ್ಥವಾಗಿ ನಿಭಾಯಿಸುವ ಮುಖೇನ ಚುನಾವಣೆಯ ಜವಾಬ್ದಾರಿಗಳಲ್ಲಿ ತಮ್ಮ ಚಾಣಾಕ್ಷತನವನ್ನು ಪ್ರದರ್ಶಿಸಿದ್ದರು. ಯಾವುದೇ ರೀತಿಯ ಅಧಿಕಾರ ಮತ್ತು ಲಲಾಸೆಗೆ ಒಳಗಾಗದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆಸಲ್ಲಿಸಿದ್ದ ಇವರ ಚಾಣಾಕ್ಷನದ ಸಂಘಟನಾ ಸಾಮಥ್ರ್ಯವನ್ನು ಅರಿತ ಸುರೇಶ್‍ಗೌಡರು ಪ್ರಸ್ತುತ ಜಿಲ್ಲಾ ಯುವಮೋರ್ಚಾಗೆ ಇವರ ಅಗತ್ಯತೆ ಇದೆ ಎನ್ನುವುದನ್ನು ಮನಗಂಡು ಆಯ್ಕೆ ಮಾಡಿದ್ದಾರೆ ಎನ್ನುವುದು ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಾಗಿದೆ.

       ಯುವ ಮೋರ್ಚಾದ ಜಿಲ್ಲಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಅದಕ್ಕೆ ಬೃಹತ್ ಶಿಫಾರಸ್ಸುಗಳನ್ನ ಹಿಡಿದು ತಂದ ಕೆಲವು ಯುವ ಮೋರ್ಚಾ ಪ್ರಭಾವಿಗಳು ಆ ಹುದ್ದೆಯನ್ನ ನಾವೇ ನಿಭಾಯಿಸಬೇಕು ಎನ್ನುವಂತಹ ಹುಂಬತನದಲ್ಲಿ ರಾಜ್ಯಮಟ್ಟದ ಪ್ರಭಾವಿ ಬಿಜೆಪಿ ಮುಖಂಡರುಗಳ ಒತ್ತಡಗಳನ್ನ ತಂದಿದ್ದರೆನ್ನಲಾಗುತ್ತಿದೆ ಅದಕ್ಕಾಗಿ ಯುವ ಮೋರ್ಚಾದ ಆಯ್ಕೆ ಪ್ರಕ್ರಿಯೆ ವಿಳಂಭವಾಗಿತ್ತು. ಆದರೆ, ಯಾವುದಕ್ಕೂ ಕಿಂಚಿತ್ತು ಮಣೆ ಹಾಕದ ಜಿಲ್ಲಾಧ್ಯಕ್ಷರು ಉತ್ಸಾಹಿ ತರುಣನನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

(Visited 13 times, 1 visits today)