ಕೊರಟಗೆರೆ :

      ಟೋಟಲ್ ಟರ್ನ್ ಕೀ ಆಧಾರದಲ್ಲಿ ಬೆಸ್ಕಾಂನಲ್ಲಿ ಬಹುಕೋಟಿಯ ಟೆಂಡರ್ ಕರೆದಿರುವ ಬಗ್ಗೆ ಹಾಗೂ ಇದರಿಂದ ವಿದ್ಯುತ್ ಗುತ್ತಿಗೆದಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಗ್ರಾಹಕರಿಗೂ ಆಗುತ್ತಿರುವ ತೊಂದರೆಗಳೇನಂದರೆ, ಬೆಸ್ಕಾಂನಲ್ಲಿ ಟೋಟಲ್ ಟರ್ನ್ ಕೀ ಆಧಾರದಲ್ಲಿ ಬೆಸ್ಕಾಂನ ಎಲ್ಲಾ ವಿದ್ಯುತ್ ಕಾಮಾಗಾರಿಗಳನ್ನು ಕಾರ್ಯ ನಿರ್ವಾಹಿಸಲು ಬಹುಕೋಟಿಯ ಟೆಂಡರ್ ಕರೆದಿರುವುದು ಲಕ್ಷಾಂತರ ಗ್ರಾಹಕರಿಗೆ ಹಾಗೂ ಸ್ಥಳಿಯ ಬೆಸ್ಕಾಂ ಗುತ್ತಿಗೆದಾರರಿಗೆ ತೊಂದರೆಯಾಗಿದೆ.

      ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೊರಟಗೆರೆ ತಾಲ್ಲೂಕು ಅಧ್ಯಕ್ಣ ಎಸ್ ಆರ್ ಸೋಮಶೇಖರ್ ಮಾತನಾಡಿ, ಈ ಟೆಂಡರ್ ಪ್ರಕ್ರಿಯೆಯಿಂದ ಎಲ್ಲಾ ಗುತ್ತಿಗೆದಾರರಿಗೆ ಅಪಾರ ನಷ್ಟವಾಗುತ್ತದೆ ಹಾಗೂ ಕುಟುಂಬ ನಿರ್ವಹಣೆಯು ತುಂಬಾ ಕಷ್ಟಕರವಾಗುತ್ತದೆ ಕಾರಣ ಬೆಸ್ಕಾಂನ ಕಾಮಾಗಾರಿಗಳನ್ನು ನಂಬಿಕೊಂಡು ಕರ್ನಾಟಕ ರಾಜ್ಯದ ಅನುಮತಿ ಪಡೆದು ವಿದ್ಯುತ್ ಗುತ್ತಿಗೆದಾರ ಲೈಸನ್ಸ್ ಅನ್ನು ಕರ್ನಾಟಕ ಸರ್ಕಾರದಿಂದಲೇ ಪಡೆದು ಕೆಲಸ ನಿರ್ವಹಿಸುತ್ತಿರುತ್ತೇವೆ. ಆದರೆ ಈಗ ಬೆಸ್ಕಾಂನಲ್ಲಿ ಟೋಟಲ್ ಟರ್ನ್ ಕೀ ಆಧಾರದಲ್ಲಿ ಟೆಂಡರ್ ಕರೆದಿದ್ದು, ಟೆಂಡರ್‍ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.

      ದೊಡ್ಡ ಲಾಭಾಂಶಕ್ಕಾಗಿರುತ್ತದೆ ಇದರಿಂದ ಸ್ಥಳೀಯ ಗುತ್ತಿಗೆದಾರರು ತೀವ್ರತರವಾದ ಆರ್ಥಿಕ ಕಷ್ಟಗಳನ್ನು ಎದುರಿಸಬೇಕಾಗಿರುತ್ತದೆ ಮತ್ತು ಬೃಹತ್ ಬಿಲ್ಡಿಂಗ್ ಕೆಲಸಗಳಿಗೆ ಆಕ್ಯುಪೆನ್ಸಿ ಪ್ರಮಾಣ ಪತ್ರವಿಲ್ಲದೆ ವಿದ್ಯುತ್ ಸರಬರಾಜು ಮಾಡಲು ಆಗುವುದಿಲ್ಲ ಆದ್ದರಿಂದ ತಾವುಗಳು ಆಕ್ಯುಪೆನ್ಸಿ ಪ್ರಮಾಣ ಪತ್ರವಿಲ್ಲದೆ ವಿದ್ಯುತ್ ಸರಬರಾಜು ಮಾಡಲು ಅನುಮತಿ ನೀಡಿ ಗ್ರಾಹಕನಿಗೆ ಆಗುತ್ತಿರುವ ತೊಂದರೆಯನ್ನು ದೂರ ಮಾಡಿಕೊಡಬೇಕು ಎಂದು ಹೇಳಿ ತಹಶೀಲ್ದಾರ್ ಗೋವಿಂದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.

       ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಮೂಡಲಗಿರಿಯಪ್ಪ, ದೇವರಾಜು, ಖಜಾಂಚಿ ರಿಜ್ವಾನ್‍ಪಾಷಾ , ಭೈರೇಶ್, ವೆಂಕಟೇಶ್, ಪ್ರದೀಪ್, ಪುನೀತ್ ಕುಮಾರ್, ಲಕ್ಷ್ಮೀಕಾಂತಬಾಬು, ರವಿಕುಮಾರ್, ಫಾರೂಕ್ ಅಹಮದ್, ಕೃಷ್ಣಮೂರ್ತಿ ಇನ್ನು ಇತರರು ಪಾಳ್ಗೊಂಡಿದ್ದರು.

(Visited 16 times, 1 visits today)