ಶಿರಾ:

     ಶಿರಾ ಉಪಚುನಾವಣಾ ರಣಕಣ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಬ್ಬರದ ಪ್ರಚಾರ ನಡೆಸಿದರು.

      ಶಿರಾ ಉಪಚುನಾವಣೆಯನ್ನು ಬಿಜೆಪಿ ಪಕ್ಷ ಸವಾಲಾಗಿ ಸ್ವೀಕರಿಸಿದ್ದು ಬಿಜೆಪಿ ಅಭ್ಯರ್ಥಿ ಪರ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಕನಕಗಿರಿ ಕ್ಷೇತ್ರದ ಬಸವರಾಜ್ ದಡೇಸೂಗೂರು ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇನಕನಹಳ್ಳಿ, ಹುಳಿಗೆರೆ, ಮದಲೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ರಾಜೇಶ್‍ಗೌಡ ಪರ ಬಿರುಸಿನ ಪ್ರಚಾರ ನಡೆಸಿದರು.

      ಅಷ್ಟೇ ಅಲ್ಲದೇ ಶಿರಾ ಪಟ್ಟಣದ ಕೋಟೆ ಆಂಜನೇಯ ದೇವಾಲಯದ ಬಳಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರೇಣುಕಾಚಾರ್ಯ, ಈ ಚುನಾವಣೆಯನ್ನು ನಾವು ಯಾರೂ ಕೂಡ ಬಯಸಿರಲಿಲ್ಲಾ. ಇದು ಆಕಸ್ಮಿಕವಾಗಿ ಎದುರಾದ ಉಪಚುನಾವಣೆಯಾಗಿದ್ದು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರ ಗೆಲುವು ಶತಸಿದ್ದ ಎಂದರು.

       ಶಿರಾ ಉಪಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲಿ ಬಿಜೆಪಿರ ಪರ ಒಲವಿದ್ದು ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ ಎಂದರು..
2013 ಇವತ್ತಿನ ಕಾಂಗ್ರೇಸ್ ಅಭ್ಯರ್ಥಿ ಟಿ.ವಿ.ಜಯಚಂದ್ರ ಸಣ್ಣ ನೀರಾವರಿ ಹಾಗೂ ಕಾನೂನು ಸಂಸಧೀಯ ಸಚಿವರಾಗಿದ್ದರು. ಆದರೇ ಅವರು ಶಿರಾ ಕ್ಷೇತ್ರದ ಜನರಿಗೆ ಆಶಾಕಿರಣರಾಗುವ ಬದಲು ಕ್ಷೇತ್ರದ ಅಭಿವೃದ್ದಿ ಮಾಡಿವುದನ್ನು ಮರೆತು ಬಿಟ್ಟಿದ್ದರು.

      ಇನ್ನು ಎಚ್.ಡಿ.ದೇವೇಗೌಡರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ತುಮಕೂರಿನ ಜನರು ಅವರನ್ನು ತಿರಸ್ಕರಿಸಿದ್ದರು.ಅಂತಹವರು ಶಿರಾ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು, ಗೆದ್ದೆ ಗೆಲ್ಲುತ್ತೇವೆ ಎಂದು ಹೇಳಿದ್ದು ಇದೇಲ್ಲಾ ಹಗಲುಗನಸು ಎಂದ ಶಾಸಕರು, ಲೋಕಸಭಾ ಚುನಾವಣೆಯಲ್ಲೇ ನಿಮ್ಮನ್ನು ತಿರಸ್ಕರಿದ್ದ ಮತದಾರ ಪ್ರಭುಗಳು ಇನ್ನು ನಿಮ್ಮ ಅಭ್ಯರ್ಥಿ ಅಮ್ಮಾಜಮ್ಮ ರನ್ನು ಬಿಡ್ತಾರಾ ಎಂದರು. ಅನುಕಂಪದ ಮೇಲೆ ಜೆಡಿಎಸ್ ಗೆಲ್ಲುತ್ತೆ ಎಂದು ನಿಮ್ಮ ಸ್ವಾರ್ಥಕ್ಕಾಗಿ ಮಹಿಳೆಯನ್ನು ಅಭ್ಯರ್ಥಿ ಮಾಡಿದ್ದು ಅವರನ್ನು ಬಲಿ ಪಶು ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು..

ಗಂಡು ಮೆಟ್ಟಿದ ನಾಡು ಶಿರಾ :

      ಶಿರಾ ತಾಲೂಕು ಗಂಡು ಮೆಟ್ಟಿದನಾಡು. ಇಂತಹ ಕ್ಷೇತ್ರವನ್ನು ಬರ ಪೀಡಿತ ತಾಲೂಕು ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಶಾಸಕರಾಗಿ ಆಯ್ಕೆಯಾದರೆ ಮುಂದಿನ ದಿನಗಳಲ್ಲಿ ಶಾಶ್ವತ ಕುಡಿಯುವ ನೀರು ನೀಡುವ ಮೂಲಕ ಶಿರಾದಲ್ಲಿ ಜಲಕ್ರಾಂತಿ ಮಾಡುತ್ತೇವೆ ಎಂದರು.

       ಇನ್ನು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದು, ಡಿ.ಕೆ.ಶಿವಕುಮಾರ್ ಟಿ.ಬಿ.ಜಯಚಂದ್ರ ಅವರನ್ನು ಸಿದ್ದರಾಮಯ್ಯನವರ ಅಭ್ಯರ್ಥಿ ಎಂದು ಹೇಳುತ್ತಿದ್ದಾರಲ್ಲದೇ, ಡಿ.ಕೆ.ಶಿವಕುಮಾರ್ ಸಿಎಂ ಆಗುವ ಹಗಲು ಗನಸು ಕಾಣುತ್ತಿದ್ದಾರೆ ಇದೇಲ್ಲಾ ಸಾಧ್ಯವಿಲ್ಲಾ ಎಂದರು.
ಕಾಂಗ್ರೇಸ್,ಜೆಡಿಎಸ್ ಹಣ-ಹೆಂಡ ಹಂಚಿ ಚುನಾವಣೆ ಮಾಡುತ್ತಿದೆ. ಇದೇಲ್ಲಾ ಅವರ ಸಂಸ್ಕೃತಿ,ನಾವು ಯಾವುದೇ ಕಾರಣಕ್ಕೂ ಹಣ-ಹೆಂಡ ಹಂಚಿ ಚುಣಾವಣೆ ಮಾಡುವುದಿಲ್ಲಾ ಎಂದ ಶಾಸಕರು, ಶಿರಾ ಕ್ಷೇತ್ರ ಜನರು ಬಿಜೆಪಿಗೆ ನೀಡುವ ಓಟು ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಬಲ ಪಡಿಸುತ್ತದೆ ಎಂದರು.
ಕಾಂಗ್ರೇಸ್‍ನವರು ನೀಡುವ ನೋಟು ಬಿಜೆಪಿಗೆ ಓಟಾಗ ಬೇಕು, ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ರಾಜೇಶ್‍ಗೌಡರಿಗೆ ಓಟು ನೀಡುವಂತೆ ಮತದಾರ ಪ್ರಭುಗಳಿಗೆ ತಿಳಿಹೇಳಬೇಕೆಂದರು.

      ಶಿರಾ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಕಳ್ಳರ ಸಂತೆಯ ಪಾಲಾಗದಂತೆ ನೋಡಿಕೊಳ್ಳುವ ಮೂಲಕ, ಬಿಜೆಪಿ ಅಭ್ಯರ್ಥಿ ಅಭ್ಯರ್ಥಿ ರಾಜೇಶ್ ಗೌಡರನ್ನು ಗೆಲ್ಲಿಸಿ ಶಾಸಕರನ್ನಾಗಿ ಆಯ್ಕೆ ಮಾಡ ಬೇಕೆಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

       ಇನ್ನು ರಾಜ್ಯದಲ್ಲಿ ಕೋವಿಡ್ 19 ದಿನೇ ದಿನೇ ಹೆಚ್ಚಾಗುತ್ತಿದ್ದು, ಸಿಎಂ ಇದರ ವಿರುದ್ದ ಸಮರ ಸಾರಿದ್ದು ಯಾರೂ ಕೂಡ ಮಾಸ್ಕ್ ಇಲ್ಲದೇ ಮನೆಯಿಂದ ಹೊರಬರ ಬೇಡಿ ಎಂದ ಶಾಸಕರು, ಕೇಂದ್ರದ ಸಚಿವರು, ಶಾಸಕರು, ಸಚಿವರು ಸೇರಿದಂತೆ ಸಾಮಾನ್ಯ ಜನರು ಕೋವಿಡ್ಗೆ ಬಲಿಯಾಗಿದ್ದು ದಯಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿದರು.

    ಈ ಸಂದರ್ಭ ಶಾಸಕರಾದ ಬಸವರಾಜ್ ದಡೇಸೂಗೂರು, ಪಕ್ಷದ ಮುಖಂಡರಾದ ತುಳಸಿರಾಮ್, ಮಹಿಳಾ ಮೋರ್ಚ ಅಧ್ಯಕ್ಷರಾದ ಲಲಿತಮ್ಮ, ಶಕ್ತಿಕೇಂದ್ರದ ಅಧ್ಯಕ್ಷರಾದ ಬಾಬು, ನಾಗರಾಜ್ ಸೇರಿದಂತೆ ಮತ್ತಿತರರಿದ್ದರು..

(Visited 15 times, 1 visits today)