ತುಮಕೂರು:

      ತುಮಕೂರು ನಗರದ ಹೊಸ ಬಡಾವಣೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ಮಾಡಿದ್ದ 10 ಜನ ಆರೋಪಿಗಳನ್ನ ಬಂಧಿಸುವಲ್ಲಿ ತುಮಕೂರು ಪೊಲೀಸ್ ತಂಡ ಯಶಸ್ವಿಯಾಗಿದೆ.

      ದಿನಾಂಕ: 20-10-2020 ರಂದು ತುಮಕೂರು ನಗರದ ಹೊಸಬಡಾವಣೆಯ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ವಾಲ್ಮೀಕಿ ನಗರದ ವಾಸಿ ವಿಶ್ವೇಶ್ವರ್ ಆರಾಧ್ಯರವರ ಮನೆಗೆ ಹಾಡುಹಗಲೇ ನುಗ್ಗಿದ 6 ಜನ ಅಪರಿಚಿತರ ತಂಡ ಮನೆಯೊಳಗೆ ನುಗ್ಗಿ ವಿಶ್ವೇಶ್ವರ ಆರಾಧ್ಯ ಮತ್ತು ಅವರ ಪತ್ನಿ ಪೇಮಾಕುಮಾರಿರವರನ್ನು ಮಚ್ಚು, ಚಾಕು, ಡ್ರ್ಯಾಗನ್‍ಗಳನ್ನು ತೋರಿಸಿ ಬೆದರಿಸಿ 5.87 ಲಕ್ಷ ಬೆಲೆ ಬಾಳುವ ಚಿನ್ನದ ಆಭರಣಗಳು 22000 ರೂ ಹಣ, ಎರಡು ಮೊಬೈಲ್ ಫೋನ್‍ಗಳನ್ನು ದರೋಡೆ ಮಾಡಿದ್ದರು ಈ ವಿಚಾರವಾಗಿ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿತ್ತು. ಈ ಪ್ರಕರಣ ಭೇದಿಸಲು ತಿಲಕ್ ಪಾರ್ಕ್ ಸಿಪಿಐ ಮುನಿರಾಜು, ನಗರ ವೃತ್ತ ನಿರೀಕ್ಷಕ ನವೀನ್‍ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಸದರಿ ತಂಡವು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ರೋಹಿತ, ಲೋಕೇಶ್, ಮನೋಜ್ ಕೆ.ಆರ್.ರಾಘವೇಂಧ್ರ, ವೆಂಕಟೇಶ, ಕೆ.ಭರತ್‍ಕುಮಾರ್, ಗಂಗಾಧರ, ಜಿ.ಹೆಚ್.ಪವನ್, ಟಿ.ಜಿ.ಸಂತೋಷ್, ಪವನ್‍ಕುಮಾರ್ ಎನ್ನುವಂತಹ ಆರೋಪಿಗಳನ್ನು ಬಂಧಿಸಿ ತನಿಖೆಗೊಳಪಡಿಸಿದಾಗ ಕುಖ್ಯಾತ ರೌಡಿ ರೋಹಿತನೊಂದಿಗೆ ಸೇರಿ ಈ ಡಕಾಯಿತಿ ಮಾಡಿರುವುದಾಗಿ ಒಪ್ಪಿಕೊಂಡ ಆರೋಪಿತರಿಂದ 2.90000 ಬೆಲೆ ಬಾಳುವ ಕೆ.ಎ.06ಎಎ7927 ನಂಬರಿನ ಆಟೋರಿಕ್ಷ, ಕೆ.ಎ.02ಜಿಹೆಚ್9754 ಅವೆಂಜರ್ ಮತ್ತೆ ಕೆ06ಹೆಚ್‍ಹೆಚ್2455 ನಂಬರಿನ ದ್ವಿಚಕ್ರ ವಾಹನಗಳನ್ನು ಮತ್ತು 20 ಸಾವಿರ ನಗದು ಹಣವನ್ನು ವಶಪಡಿಸಿಕೊಂಡು ಆರೋಪಿತರನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಈ ಪ್ರಕರಣದ ಮುಖ್ಯ ಆರೋಪಿ ರೋಹಿತನ ಪತ್ತೆಗಾಗಿ ತೀವ್ರ ಶೋಧಕಾರ್ಯದಲ್ಲಿ ಪೊಲೀಸರು ಮಗ್ನರಾಗಿದ್ದಾರೆ.

      ಸದರಿ ಪ್ರಕರಣದ ಪತ್ತೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣರವರು ನೀಡಿದ ಆದೇಶದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಟಿ.ಜೆ.ಉದೇಶ ಮತ್ತು ನಗರ ಡಿವೈಎಸ್‍ಪಿ ತಿಪ್ಪೇಸ್ವಾಮಿರವರ ಮಾರ್ಗದರ್ಶನದಲ್ಲಿ ಸಿಪಿಐ ಮುನಿರಾಜು ಮತ್ತು ನಗರದ ಸಿಪಿಐ ನವೀನ್‍ರವರ ನೇತೃತ್ವದಲ್ಲಿ ಎಎಸ್‍ಐ ಪರಮೇಶ್, ಸೈಮನ್ ವಿಕ್ಟರ್, ಮುನಾವರ್ ಪಾಷ, ಹನುಮ ರಂಗಯ್ಯ, ಲೋಕೇಶ್, ರೇಣುಕಾ, ಪ್ರಸನ್ನ ಇವರುಗಳನ್ನು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಅಭಿನಂದಿಸಿರುತ್ತಾರೆ.

(Visited 6 times, 1 visits today)