BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ
  • ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ
  • ತುಮಕೂರು ಪಾಲಿಕೆಗೆ ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿ
  • ಕನ್ನಡ ಕೇವಲ ಒಂದು ಭಾಷೆಯಲ್ಲ, ನಮ್ಮ ಪರಂಪರೆ
  • ಶಿಕ್ಷಣದಿಂದ ದೂರ ತಳ್ಳುವುದೇ ಸರ್ಕಾರದ ಉದ್ದೇಶ: ಲಕ್ಕಪ್ಪ
  • ೯೩ ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ವಿಶೇಷ ಗ್ರಾಮಸಭೆ
  • ಇನ್ನರ್ ವ್ಹೀಲ್‌ನಿಂದ ಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ
  • ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜ.30ರಿಂದ ಜಿಲ್ಲಾದ್ಯಂತ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ
Trending

ಜ.30ರಿಂದ ಜಿಲ್ಲಾದ್ಯಂತ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

By News Desk BenkiyabaleUpdated:January 25, 2021 7:02 pm

 ತುಮಕೂರು  :

     ಜಿಲ್ಲಾದ್ಯಂತ ಜನವರಿ 30 ರಿಂದ ಫೆಬ್ರುವರಿ 13ರವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಆಚರಿಸಲಾಗುತ್ತಿದ್ದು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕುಷ್ಠರೋಗ ಪತ್ತೆ ಹಾಗೂ ರೋಗದ ನಿಯಂತ್ರಣದ ಬಗ್ಗೆ ಹಾಗೂ ಅಗತ್ಯ ಕ್ರಮಗಳನ್ನು ಈ ಆಂದೋಲನದಲ್ಲಿ ನಡೆಸಲು ಸೂಚಿಸಿದರು.

      ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು 15 ದಿನಗಳ ಕಾಲ ನಡೆಯುವ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ತಾಯಂದಿರ ಸಭೆ, ಗುಂಪು ಸಭೆಗಳು ಗ್ರಾಮ ಸಭೆಗಳು ಹಾಗು ಶಾಲೆಗಳಲ್ಲಿ ಆರೋಗ್ಯ ಶಿಕ್ಷಣವನ್ನು ನೀಡುವಂತೆ ತಿಳಿಸಿದರಲ್ಲದೆ ಎಲ್ಲಾ ತಾಲ್ಲೂಕುಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡಿ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವುದು ಹಾಗೂ ಕುಷ್ಠರೋಗದ ಚಿಹ್ನೆಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಪರೀಕ್ಷೆ ಮಾಡಿಸಬೇಕು ಎಂದು ಅವರು ಸೂಚಿಸಿದರು.

      ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಎಲ್ಲೆಲ್ಲಿ ಅವಶ್ಯಕತೆ ಇರುತ್ತದೆಯೋ, ಅಲ್ಲಿ ಭಾಗವಹಿಸಲು ನಿರ್ದೇಶನ ನೀಡಿದರಲ್ಲದೆ ಜನವರಿ 30 ರಿಂದ ಫೆಬ್ರವರಿ 13 ರವರೆಗೆ ನಡೆಯುವ ಆಂದೋಲನ ಅವಧಿಯಲ್ಲಿ ಎಲ್ಲಾ ಸಿಬ್ಬಂದಿಗಳು ಸಹಕರಿಸುವಂತೆ ಅವರು ತಿಳಿಸಿದರು.

      ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ|| ಚೇತನ್ ಎಂ., ಅವರು, ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜನವರಿ 30 ರಿಂದ ಫೆಬ್ರವರಿ 13 ರವರಗೆ ಆಯೋಜಿಸಿರುವ ಬಗ್ಗೆ ತಿಳಿಸುತ್ತಾ ದೈಹಿಕ ಅಂಗವೈಕಲ್ಯದ ಕಾರಣಗಳಲ್ಲಿ ಕುಷ್ಠರೋಗವು ಒಂದು ಪ್ರಮುಖ ಕಾರಣವಾಗಿದೆ. 2020-21 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 28 ಜನ ಚಿಕಿತ್ಸೆ ಪಡೆಯುತ್ತಿದ್ದು, 60 ಜನ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಆರ್.ಸಿ.ಹೆಚ್ ಅಧಿಕಾರಿ ಡಾ|| ಕೇಶವ್ ರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಪ್ಪ, ಎಪಿಡೊಮೋಲೊಜಿಸ್ಟ್ ಡಾ|| ರಕ್ಷಿತಾ, ಜಿಲ್ಲಾ ಆಶಾ ಮೇಲ್ವಿಚಾರಕಿ ಮಂಜುಳಾ, ಪುಷ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿಯ ವಾಸುದೇವ್ ಕುಮಾರ್, ಸತೀಶ್ ಬಾಬು, ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

     ನಂತರ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಕರಪತ್ರ, ಬಿತ್ತಿಪತ್ರಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಬಿಡುಗಡೆಗೊಳಿಸಿದರು.

(Visited 6 times, 1 visits today)
Previous Articleಮಧುಗಿರಿ ಪೊಲೀಸ್ ಠಾಣೆ : ಮೂರು ನಾಪತ್ತೆ ಪ್ರಕರಣ ದಾಖಲು
Next Article ಸ್ವಾತಂತ್ರ್ಯ ಭಾರತದ ನೈಜ ಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯೋಣ
News Desk Benkiyabale

Related Posts

ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ

November 23, 2026 5:37 pm news

ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ

November 23, 2026 5:34 pm news

ತುಮಕೂರು ಪಾಲಿಕೆಗೆ ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿ

November 23, 2026 5:33 pm news
ತಾಜಾ ಸುದ್ಧಿಗಳು
news

ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ

November 23, 2026 5:37 pm
news

ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ

November 23, 2026 5:34 pm
news

ತುಮಕೂರು ಪಾಲಿಕೆಗೆ ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿ

November 23, 2026 5:33 pm
news

ಕನ್ನಡ ಕೇವಲ ಒಂದು ಭಾಷೆಯಲ್ಲ, ನಮ್ಮ ಪರಂಪರೆ

November 23, 2026 5:32 pm
news

ಶಿಕ್ಷಣದಿಂದ ದೂರ ತಳ್ಳುವುದೇ ಸರ್ಕಾರದ ಉದ್ದೇಶ: ಲಕ್ಕಪ್ಪ

November 23, 2026 5:30 pm
news

೯೩ ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ವಿಶೇಷ ಗ್ರಾಮಸಭೆ

November 21, 2026 5:36 pm
Our Youtube Channel
Our Picks

ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ

November 23, 2026 5:37 pm

ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ

November 23, 2026 5:34 pm

ತುಮಕೂರು ಪಾಲಿಕೆಗೆ ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿ

November 23, 2026 5:33 pm

ಕನ್ನಡ ಕೇವಲ ಒಂದು ಭಾಷೆಯಲ್ಲ, ನಮ್ಮ ಪರಂಪರೆ

November 23, 2026 5:32 pm

ಶಿಕ್ಷಣದಿಂದ ದೂರ ತಳ್ಳುವುದೇ ಸರ್ಕಾರದ ಉದ್ದೇಶ: ಲಕ್ಕಪ್ಪ

November 23, 2026 5:30 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ

By News Desk BenkiyabaleNovember 23, 2026 5:37 pm

ತುರುವೇಕೆರೆ: ತಾಲ್ಲೂಕಿನ ಎ.ಹೊಸಹಳ್ಳಿ ಗ್ರಾಮದ ಸಮೀಪದ ಭಾಣಸಂದ್ರ ಹಾಗೂ ಕರಡಿ ರೈಲ್ವೆ ನಿಲ್ದಾಣ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ ೭೨…

ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ

November 23, 2026 5:34 pm

ತುಮಕೂರು ಪಾಲಿಕೆಗೆ ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿ

November 23, 2026 5:33 pm

ಕನ್ನಡ ಕೇವಲ ಒಂದು ಭಾಷೆಯಲ್ಲ, ನಮ್ಮ ಪರಂಪರೆ

November 23, 2026 5:32 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.