ತುಮಕೂರು: ದಬ್ಬಾಳಿಕೆಯ ಸಾಮ್ರಾಜ್ಯಶಾಹಿಯ ವಿರುದ್ಧ ಅಪ್ರತಿಮ ಧೈರ್ಯ, ಶೌರ್ಯಗಳಿಂದ ಹೋರಾಡಿ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದು, ಮಾತೃಭೂಮಿಯ ಸ್ವಾತಂತ್ರ÷್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಪ್ರತಿಮ ವೀರ ವನಿತೆ ಝಾನ್ಸಿಯ ರಾಣಿ ಲಕ್ಷಿ÷್ಮÃಬಾಯಿ ಅವರ ಜಯಂತಿಯAದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚುವುದರ ಮೂಲಕ ಇಂದು ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರಾದ ಎನ್.ಕೆ ನಿಧಿಕುಮಾರ್ ಮಾತನಾಡುತ್ತಾ ರಾಣಿ ಲಕ್ಷಿ÷್ಮÃಬಾಯಿ ಅವರ ಅಸಾಧಾರಣ ಧೈರ್ಯ ಸ್ವಾಭಿಮಾನ, ತ್ಯಾಗ ಮತ್ತು ರಾಷ್ಟçಪ್ರೇಮ ಸಮಸ್ತ ಭಾರತೀಯರಿಗೆ ಸದಾ ಸ್ಫೂರ್ತಿಯ ಚಿಲುಮೆಯಾಗಿದೆ. ವೀರ ವನಿತೆ ರಾಣಿ ಲಕ್ಷಿ÷್ಮÃಭಾಯಿರವರು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು, ೧೮೫೭ರ ಪ್ರಥಮ ಸ್ವಾತಂತ್ರ÷್ಯ ಸಂಗ್ರಾಮದಲ್ಲಿ ತಮ್ಮ ಸೈನ್ಯವನ್ನು ಮುನ್ನಡೆಸಿದ ವೀರ ರಾಣಿ ಲಕ್ಷಿ÷್ಮÃಬಾಯಿ ಅವರ ರಕ್ಷಣೆಯಿಂದ ಗ್ವಾಲಿಯರ್ನಲ್ಲಿ ನಡೆದ ದೊಡ್ಡ ಹೋರಾಟದಲ್ಲಿ ಅವರ ಶೌರ್ಯ, ನಾಯಕತ್ವ ಮತ್ತು ಬಲಿದಾನ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದಿದೆ. ಬ್ರಿಟಿಷರ ವಿರುದ್ಧದ ಮೊದಲ ಹೋರಾಟದ ಕಿಚ್ಚು ಹೊತ್ತಿಸಿ, ದೇಶದ ಸ್ವಾತಂತ್ರ÷್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದ ವೀರ ವನಿತೆ, ಝಾನ್ಸಿಯ ರಾಣಿ ಲಕ್ಷಿ÷್ಮÃಬಾಯಿ ಅವರ ಧೈರ್ಯ, ಸಾಹಸ, ದೇಶಪ್ರೇಮ ಹಾಗೂ ತ್ಯಾಗದ ಆದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿಯಾಗಲಿ. ವೀರ ವನಿತೆ ಝಾನ್ಸಿ ರಾಣಿ ಲಕ್ಷಿ÷್ಮÃಬಾಯಿ ಅವರ ಅಮರ ತ್ಯಾಗ ಮತ್ತು ಸ್ವಾಭಿಮಾನ ದೇಶಭಕ್ತಿಯ ಪ್ರತೀಕ, ಬ್ರಿಟಿಷರ ದಾಸ್ಯಶಾಹಿಯ ವಿರುದ್ಧ ಎದೆಗುಂದದೆ ಹೋರಾಡಿದ ಕೆಚ್ಚೆದೆಯ ವೀರವನಿತೆ, ಅಪ್ರತಿಮ ಧೈರ್ಯ, ಸಾಹಸ ಹಾಗೂ ಶೌರ್ಯದ ಸಾಕಾರಮೂರ್ತಿ ಝಾನ್ಸಿ ರಾಣಿ ಲಕ್ಷಿ÷್ಮÃಬಾಯಿ ಅವರ ಜನ್ಮದಿನದಂದು ಅವರ ಆದರ್ಶ ದೇಶ ಅಭಿಮಾನವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್.ಕೆ.ನಿಧಿಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಜಿಲ್ಲಾ ಕಾರ್ಯದರ್ಶಿ ತ್ಯಾಗರಾಜ್ ಕೆ. ಯುವ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಮಾರ್ಗೋ ವೆಂಕಟೇಶ್, ಮುಖಂಡರುಗಳಾದ ಹನುಮನರಸಯ್ಯ, ಮಾರ್ಕೆಟ್ ಮಣ್ಣೆಪ್ಪ, ವಿಜಿ, ನರಸಿಂಹ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.
(Visited 1 times, 1 visits today)





