BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಲ್ಪತರುನಾಡಿನಲ್ಲಿ ಸಮಸ್ಯೆಗಳ ನಡುವೆಯೂ ಶ್ರದ್ಧಾ ಭಕ್ತಿಯ ಗೌರಿ-ಗಣೇಶ ಹಬ್ಬ ಆಚರಣೆ
  • ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ರೈತ ಸಂಘ ಆಕ್ರೋಶ
  • ಕೊರಟಗೆರೆಯಲ್ಲಿ ನೂತನ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆ
  • ನಿವೇಶನ ಹಂಚಿಕೆ ಪ್ರಕ್ರಿಯೆ ತ್ವರಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ
  • ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸೂಚನೆ
  • ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ
  • ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ
  • ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » 50 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿರುವ ಡಾ||ಹನುಮಕ್ಕನವರ ಸೇವೆ ಅನನ್ಯ
Trending

50 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿರುವ ಡಾ||ಹನುಮಕ್ಕನವರ ಸೇವೆ ಅನನ್ಯ

By News Desk BenkiyabaleUpdated:January 27, 2021 6:36 pm

ತುಮಕೂರು : 

      ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ದೊಡ್ಡಮನೆ ನರ್ಸಿಂಗ್ ಹೋಂ ಮುಂದಾಗಿದ್ದು, 50 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿರುವ ಡಾ.ಹನುಮಕ್ಕ ಅವರ ಸೇವೆ ಅನನ್ಯವಾದದ್ದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.

      ನಗರದ ದೊಡ್ಡಮನೆ ನರ್ಸಿಂಗ್ ಹೋಂನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕೀಲುಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡಮನೆ ನರ್ಸಿಂಗ್ ಹೋಂನ ಮುಖ್ಯಸ್ಥರಾಗಿರುವ ಡಾ.ಹನುಮಕ್ಕ ಅವರ ಸೇವೆಯಲ್ಲಿ 50 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿದ್ದಾರೆ, ಅವರೇ ದೊಡ್ಡ ಸಂಸ್ಥೆಯಾಗಿದ್ದಾರೆ ಎಂದರು.

      ಸುತ್ತಮುತ್ತಲ ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿರುವ ದೊಡ್ಡಮನೆ ನರ್ಸಿಂಗ್ ಹೋಂನಲ್ಲಿ ಪ್ರಾರಂಭಗೊಂಡಿರುವ ಅತ್ಯಾಧುನಿಕ ಐಸಿಯು, ಎಕ್ಸರೇ ಘಟಕದಿಂದ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಿದ್ದು, ಡಾ.ಹನುಮಕ್ಕ ಅವರ ತಂಡಕ್ಕೆ ಶುಭ ಹಾರೈಸಿದರು.

   ಸರ್ಕಾರಕ್ಕೆ ಸಮಸ್ಯೆ ಇಲ್ಲ:

      ಖಾತೆ ಬದಲಾವಣೆಯಲ್ಲಿ ಗೊಂದಲ ಉಂಟಾಗಿರುವುದು ನಿಜ, ಮುಖ್ಯಮಂತ್ರಿಗಳು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ, ಸರ್ಕಾರ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ, ಖಾತೆ ಮುನಿಸಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತಪರ ಕಾಯ್ದೆ ರೈತರ ಸದೃಢತೆ ಹೆಚ್ಚಿಸುವುದರೊಂದಿಗೆ ಸಬಲೀಕರಣವಾಗಲಿದೆ, ರೈತರಿಗೆ ಒಳ್ಳೆಯದು ಆಗಬಾರದು ಎನ್ನುವ ಉದ್ದೇಶದೊಂದಿಗೆ ಕೆಲವರು ಮುಂದಾಗಿದ್ದಾರೆ, ಗಣರಾಜ್ಯೋತ್ಸವದಂತಹ ಮಹತ್ವದ ದಿನದಂದು ರೈತ ಸಂಘಟನೆಗಳು ಹಿಂಸಾಚಾರಕ್ಕೆ ಇಳಿಯಬಾರದಿತ್ತು, ಇದು ಕಪ್ಪು ಚುಕ್ಕೆ ಎಂದು ಹೇಳಿದರು.

      ದೊಡ್ಡಮನೆ ನರ್ಸಿಂಗ್ ಹೋಂ ಉದ್ಘಾಟನೆಗೊಂಡು 26 ವರ್ಷಗಳಾದ ಹಿನ್ನೆಲೆಯಲ್ಲಿ ಹೊಸದಾಗಿ ಕೀಲುಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಮಾ.31ರವರೆಗೆ ಉಚಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಉಪಯೋಗಪಡಿಸಿಕೊಳ್ಳಬೇಕು ಎಂದು ಡಾ.ಕೆ.ವಿಜಯಕುಮಾರ್ ತಿಳಿಸಿದರು.

      ವೈದ್ಯಕೀಯ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆಯಲ್ಲಿ ಕೆಲಸ ಮಾಡಿರುವ ದೊಡ್ಡಮನೆ ನರ್ಸಿಂಗ್ ಹೋಂ, ಪ್ರಸೂತಿ ಹಾಗೂ ಮಹಿಳೆ ಸಂಬಂಧಿತ ಚಿಕಿತ್ಸೆಗೆ ಹೆಸರುವಾಸಿಯಾಗಿದ್ದು, ಈಗ ಕೀಲು ಮೂಳೆ, ಬೆನ್ನುಮೂಳೆಗೆ ಸಂಬಂಧಿಸಿದ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದರು.

      ಬೆಂಗಳೂರಿನಲ್ಲಿ ಸಿಗುತ್ತಿದ್ದ ಟ್ರೋಮಾ ಚಿಕಿತ್ಸೆಯನ್ನು ತುಮಕೂರಿನಲ್ಲಿ ಕಡಿಮೆ ದರದಲ್ಲಿ ನೀಡುವ ದೃಷ್ಠಿಯಿಂದ ಈ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ, ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕೆಂಬ ಮುಂದಾಲೋಚನೆಯಿಂದ ಸುಸಜ್ಜಿತ ಐಸಿಯು ಒಳಗೊಂಡಿರುವ ಅತ್ಯಾಧುನಿಕ ಕೀಲು ಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

      ಈ ವೇಳೆ ಡಾ.ಹನುಮಕ್ಕ, ಡಾ.ವಿಜಯಕುಮಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕೃಷ್ಣಪ್ಪ, ಜಯಲಕ್ಷ್ಮೀ, ಐಶ್ವರ್ಯ ದೊಡ್ಡಮನೆ, ಶಾಸಕ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಸುರೇಶ್‍ಗೌಡ, ವಿದ್ಯೋದಯ ಕಾನೂನು ಕಾಲೇಜಿನ ಮುಖ್ಯಸ್ಥ ಶೇಷಾದ್ರಿ, ಆಡಿಟರ್ ರಾಮಚಂದ್ರಪ್ಪ, ಬೋರೇಗೌಡ, ಮುರುಗಪ್ಪ ಸೇರಿದಂತೆ ಇತರರಿದ್ದರು.

(Visited 11 times, 1 visits today)
Previous Articleಬಿಜೆಪಿ ಸೇರಿದ ವಾರದೊಳಗೆ ಮಂಜುನಾಥ್ ಯೂಟರ್ನ್
Next Article ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಶಿಕ್ಷಾರ್ಹ ಅಪರಾಧ
News Desk Benkiyabale

Related Posts

ಕಲ್ಪತರುನಾಡಿನಲ್ಲಿ ಸಮಸ್ಯೆಗಳ ನಡುವೆಯೂ ಶ್ರದ್ಧಾ ಭಕ್ತಿಯ ಗೌರಿ-ಗಣೇಶ ಹಬ್ಬ ಆಚರಣೆ

September 15, 2026 6:20 pm news

ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ರೈತ ಸಂಘ ಆಕ್ರೋಶ

September 15, 2026 6:18 pm news

ಕೊರಟಗೆರೆಯಲ್ಲಿ ನೂತನ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆ

September 15, 2026 6:16 pm news
ತಾಜಾ ಸುದ್ಧಿಗಳು
news

ಕಲ್ಪತರುನಾಡಿನಲ್ಲಿ ಸಮಸ್ಯೆಗಳ ನಡುವೆಯೂ ಶ್ರದ್ಧಾ ಭಕ್ತಿಯ ಗೌರಿ-ಗಣೇಶ ಹಬ್ಬ ಆಚರಣೆ

September 15, 2026 6:20 pm
news

ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ರೈತ ಸಂಘ ಆಕ್ರೋಶ

September 15, 2026 6:18 pm
news

ಕೊರಟಗೆರೆಯಲ್ಲಿ ನೂತನ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆ

September 15, 2026 6:16 pm
news

ನಿವೇಶನ ಹಂಚಿಕೆ ಪ್ರಕ್ರಿಯೆ ತ್ವರಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ

September 15, 2026 6:14 pm
news

ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸೂಚನೆ

September 15, 2026 6:13 pm
ಕರ್ನಾಟಕ ಸುದ್ಧಿಗಳು

ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ

September 11, 2026 4:32 pm
Our Youtube Channel
Our Picks

ಕಲ್ಪತರುನಾಡಿನಲ್ಲಿ ಸಮಸ್ಯೆಗಳ ನಡುವೆಯೂ ಶ್ರದ್ಧಾ ಭಕ್ತಿಯ ಗೌರಿ-ಗಣೇಶ ಹಬ್ಬ ಆಚರಣೆ

September 15, 2026 6:20 pm

ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ರೈತ ಸಂಘ ಆಕ್ರೋಶ

September 15, 2026 6:18 pm

ಕೊರಟಗೆರೆಯಲ್ಲಿ ನೂತನ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆ

September 15, 2026 6:16 pm

ನಿವೇಶನ ಹಂಚಿಕೆ ಪ್ರಕ್ರಿಯೆ ತ್ವರಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ

September 15, 2026 6:14 pm

ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸೂಚನೆ

September 15, 2026 6:13 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕಲ್ಪತರುನಾಡಿನಲ್ಲಿ ಸಮಸ್ಯೆಗಳ ನಡುವೆಯೂ ಶ್ರದ್ಧಾ ಭಕ್ತಿಯ ಗೌರಿ-ಗಣೇಶ ಹಬ್ಬ ಆಚರಣೆ

By News Desk BenkiyabaleSeptember 15, 2026 6:20 pm

ತುಮಕೂರು: ಮಳೆ ಕೊರತೆ, ತೀವ್ರ ಬರ, ರಣ ಬಿಸಿಲು ಹಾಗೂ ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬವನ್ನು ಕಲ್ವತರುನಾಡಿನಲ್ಲಿ ಅತ್ಯಂತ…

ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ರೈತ ಸಂಘ ಆಕ್ರೋಶ

September 15, 2026 6:18 pm

ಕೊರಟಗೆರೆಯಲ್ಲಿ ನೂತನ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆ

September 15, 2026 6:16 pm

ನಿವೇಶನ ಹಂಚಿಕೆ ಪ್ರಕ್ರಿಯೆ ತ್ವರಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ

September 15, 2026 6:14 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.