ತುಮಕೂರು :

      ಹೇಮಾವತಿಯ ತುಮಕೂರು ಶಾಖಾ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರ ಕೆರೆಗೆ ಕುಡಿಯುವ ನೀರು ಒದಗಿಸುವ 9.9 ಕೋಟಿ ರೂ ವೆಚ್ಚದ ಪೈಪ್ ಲೈನ್ ಕಾಮಗಾರಿಗೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.

      ಕೆ.ಬಿ.ಕ್ರಾಸ್ ನಿಂದ ತುರುವೇಕೆರೆ ರಸ್ತೆಯ ಕುಂದೂರು ಸಮೀಪವಿರುವ ಹೇಮಾವತಿ ಮುಖ್ಯನಾಲೆಯ ಬಳಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಈಗಿರುವ ಪೈಪ್ ಲೈನ್ ನಲ್ಲಿ ನಾಲ್ಕು ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದೇ ಇರುವುದರಿಂದ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ
ಜೆ ಸಿ ಪುರ ಕೆರೆಗೆ ಪೈಪ್ ಲೈನ್ ಅಳವಡಿಸಲಾಗುತ್ತಿದೆ ಎಂದರು.

      ಈ ಕಾಮಗಾರಿ ಐದಾರು ತಿಂಗಳಿನಲ್ಲಿ ಪೂರ್ಣಗೊಂಡು, ಮುಂದಿನ ಸೀಜನ್ ನಲ್ಲಿ ನೀರು ಕೊಡಲು ಅನುಕೂಲವಾಗುತ್ತದೆ ಎಂದು ಭಾವಿಸಿದ್ದೇನೆ. ಈ ಭಾಗದಲ್ಲಿ ನೀಡುತ್ತಿರುವ ಹೇಮಾವತಿ ನೀರು ಎಲ್ಲ ಕೆರೆಗಳಿಗೆ ಅರ್ಧಕ್ಕಿಂತ ಹೆಚ್ಚು ಸಾಮಥ್ರ್ಯದ ನೀರು ಹರಿಸಲು ಸಾಧ್ಯವಾಗುತ್ತದೆಂದು ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಅವರು ತಿಳಿಸಿದರು.

      ಈ ವೇಳೆ ಕಾರ್ಯಪಾಲಕ ಇಂಜಿನಿಯರ್ ಬಸವರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಖಾಲಿದ್ ಅಹಮದ್, ಅಂತರಿಕ ಸಲಹೆಗಾರ ಮುರುಳೀಧರ್, ರಘುಪತಿ ಸೇರಿದಂತೆ ಇತರರು ಹಾಜರಿದ್ದರು.

(Visited 17 times, 1 visits today)