ತುಮಕೂರು  :

      ಭೂಮಿಯ ಮೇಲ್ಮೈ ಮತ್ತು ಒಳಗಿರಬಹುದಾದ ರಚನೆಗಳನ್ನು ವೈಜ್ಞಾನಿಕವಾಗಿ ತಿಳಿದುಕೊಂಡು ಸೂಕ್ತ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಜಿಐಎಸ್ ತಂತ್ರಜ್ಞಾನವು ತುಂಬಾ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿ.ಐ.ಎಸ್ ಆಧಾರಿತ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನರೇಗಾ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರು(ಗ್ರಾ.ಉ), ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರುಗಳಿಗಾಗಿ ಜಿ.ಐ.ಎಸ್ ಆಧಾರಿತ ಕ್ರಿಯೋಯೋಜನೆ ತಯಾರಿಸುವ ಕುರಿತು ಹಮ್ಮಿಕೊಂಡಿದ್ದ 4 ದಿನಗಳ ಪ್ರಾಯೋಗಿಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಶ್ರದ್ಧೆಯಿಂದ ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳು ವಿವರಿಸುವ ತಾಂತ್ರಿಕ ಸಲಹೆಗಳನ್ನು ಕಲಿತು ತಮ್ಮ ಜಿಲ್ಲೆಗಳಲ್ಲಿ ಅನುಷ್ಟಾನಗೊಳಿಸಬೇಕೆಂದು. ಪ್ರತಿ ಜಿಲ್ಲೆಯಿಂದ ತಲಾ 5 ಜನರಂತೆ ಆಗಮಿಸಿದ್ದ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಉಪಕಾರ್ಯದರ್ಶಿ(ಅಭಿವೃದ್ಧಿ) ಟಿ.ಕೆ.ರಮೇಶ್ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸುತ್ತಾ ಯೋಜನೆಯಡಿ ಶೇಕಡ 60ರಷ್ಟು ನೀರು ಮತ್ತು ಮಣ್ಣಿನ ಸಂರಕ್ಷಣೆ ಹಾಗೂ ಗಿಡ ನೆಟ್ಟು ಪೆÇೀಷಿಸುವ ಉದ್ದೇಶಕ್ಕಾಗಿಯೇ ಕಾಮಗಾರಿಗಳನ್ನು ಅನುಷ್ಟಾನ ಮಾಡಲಾಗುತ್ತಿರುವುದರಿಂದ ನೀರು ಮತ್ತು ಮಣ್ಣಿನ ಸಂರಕ್ಷಣೆ ಮಾಡುವುದು ಮೊದಲ ಆದ್ಯತೆಯಾಗಬೇಕು. ಮಳೆ ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆಗಾಗಿ ಹಲವಾರು ತಾಂತ್ರಿಕ ಅಂಶಗಳ ಅಳವಡಿಕೆ ಮುಖ್ಯವಾಗುತ್ತವೆ. ಅದೇ ರೀತಿ ಜಲಾನಯನ ಪ್ರದೇಶಗಳಲ್ಲಿ ಬೀಳುವ ಮಳೆ ನೀರನ್ನು ನಿರ್ವಹಣೆ ಮಾಡಲು  GIS(Geographical, Information System)  ಪದ್ಧತಿಯಿಂದಾಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.

      ಜಿಲ್ಲಾ ಐ.ಇ.ಸಿ ಸಂಯೋಜಕ ಉಮೇಶ್ ಹುಲಿಕುಂಟೆ ತರಬೇತಿಯ ಮೊದಲ ದಿನ ಆಹ್ವಾನಿತ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ ಮತ್ತು ಸಂವಾದ ; 2ನೇ ದಿನ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕುಗಳಲ್ಲಿ ಯೋಜನೆಯಡಿ ಅನುಷ್ಟಾನ ಮಾಡಿರುವ ಜಲಾನಯನ, ತೋಟಗಾರಿಕೆ, ರೇಷ್ಮೆ ಕೃಷಿ, ಅರಣ್ಯೀಕರಣ, ಕೃಷಿ ಇಲಾಖೆಯ ಕಾಮಗಾರಿಗಳನ್ನು ವೀಕ್ಷಣೆಗಾಗಿ ಕ್ಷೇತ್ರ ಭೇಟಿ; 3ನೇ ದಿನ ತುಮಕೂರು ತಾಲ್ಲೂಕಿನ ಮೈದಾಳ ಜಲಾನಯನ ಪ್ರದೇಶದಲ್ಲಿ ಕ್ರಿಯಾ ಯೋಜನೆ ತಯಾರಿಸುವ ಸಲುವಾಗಿ ಅಡ್ಡನಡಿಗೆ ಕಾರ್ಯಕ್ರಮ ಹಮ್ಮಿಕೂಂಡು ಅಗತ್ಯ ಅಂಕಿ-ಅಂಶಗಳನ್ನು ಕಲೆ ಹಾಕುವ; 4ನೇ ದಿನ ಪ್ರತೀ ತಂಡದಲ್ಲಿ 6 ಪ್ರಶಿಕ್ಷಣಾರ್ಥಿಗಳನ್ನೊಳಗೂಂಡ 6 ತಂಡಗಳನ್ನು ರಚಿಸಿ ಪ್ರತಿಯೊಂದು ತಂಡದವರು ಪ್ರತ್ಯೇಕವಾಗಿ ಗುಂಪು ಚರ್ಚೆ ನಡೆಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಪ್ರಸ್ತುತಪಡಿಸುವ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

     ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ಉಪನಿರ್ದೇಶಕ ಡಾ|| ಯೋಗೀಶ್, ಬೆಂಗಳೂರಿನ ಜಲಾಮೃತ ಯೋಜನೆಯ ಡಾ|| ರಾಜೇಶ್ ಕುಮಾರ್, ನವದೆಹಲಿ ಉIZ ಸಂಸ್ಥೆಯ ವೈಭವ್ ಶರ್ಮ ಹಾಗೂ ಇತರೆ ಅನುಷ್ಠಾನ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಆಡಳಿತ) ಕೃಷ್ಣಮೂರ್ತಿ, ಮುಖ್ಯ ಯೋಜನಾಧಿಕಾರಿ ಬಾಲರಾಜ್, ಮುಖ್ಯ ಲೆಕ್ಕಾಧಿಕಾರಿ ಮುನಿವೀರಪ್ಪ, ಯೋಜನಾ ನಿರ್ದೇಶಕರು(ಡಿ.ಆರ್.ಡಿ.ಎ), ಮೋಹನ್ ಕುಮಾರ್.ಎಲ್, ಸಹಾಯಕ ಕಾರ್ಯದರ್ಶಿ, ಮಹೇಶ್ ಕುಮಾರ್, ಎ.ಡಿ.ಪಿ.ಸಿ ನಂಜೇಗೌಡ, ಮತ್ತಿತರರು ಭಾಗವಹಿಸಿದ್ದರು.

(Visited 11 times, 1 visits today)