ತುಮಕೂರು:

     ಮಗು ಹುಟ್ಟಿದ ಕೂಡಲೇ ಶ್ರವಣ ದೋಷವನ್ನು ಪತ್ತೆಹಚ್ಚುವುದು ಮುಖ್ಯವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ ತಿಳಿಸಿದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಶ್ರವಣದೋಷ ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ “ವಿಶ್ವ ಶ್ರವಣ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಗು ಹುಟ್ಟಿದ ಕೂಡಲೇ ಶ್ರವಣ ದೋಷವನ್ನು ಪತ್ತೆ ಹಚ್ಚಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗು ತಾಯಂದಿರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

      ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮ ಅಧಿಕಾರಿ ಡಾ: ಮಹಿಮಾ ಮಾತನಾಡಿ, ಸೋಹಂ, ಬೆರಾ ಎಂಬ ಶ್ರವಣ ದೋಷ ಪತ್ತೆ ಹಚ್ಚುವ ಸಾಧನದಿಂದ ಹುಟ್ಟಿದ ಮಗುವಿನಲ್ಲಿರುವ ಶ್ರವಣ ದೋಷವನ್ನು ಪತ್ತೆ ಹಚ್ಚಬಹುದಾಗಿದೆ. ಅದೇ ರೀತಿ ಆಡಿಯೋ ಮೀಟರ್ ಬಳಸಿಕೊಂಡು ವಯಸ್ಕರು/ಹಿರಿಯರಲ್ಲಿರುವ ಶ್ರವಣ ದೋಷವನ್ನು ಪತ್ತೆಹಚ್ಚಬಹುದು. ಶ್ರವಣ ದೋಷವನ್ನು ನಿಯಂತ್ರಿಸುವಲ್ಲಿ ಎಲ್ಲರ ಸಹಕಾರ ಮುಖ್ಯ ಎಂದು ಅವರು ಹೇಳಿದರು.

      ಈ ಸಂದರ್ಭದಲ್ಲಿ ವಿಶ್ವ ಶ್ರವಣ ದಿನ ಹಾಗು ಶ್ರವಣ ಜಾಗೃತಿ ಅಭಿಯಾನದ ಪೆÇೀಸ್ಟರ್ ಬಿಡುಗಡೆ ಮಾಡ ಲಾಯಿತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಆರ್.ಸಿ.ಹೆಚ್. ಅಧಿಕಾರಿ ಡಾ. ಕೇಶವ್ ರಾಜ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ. ರಜನಿ, ಆರ್.ಎಂ.ಓ ಡಾ. ವೀಣಾ, ಸರ್ವೆಲೆನ್ಸ್ ಅಧಿಕಾರಿ ಡಾ. ಮೋಹನ್ ದಾಸ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಚೇತನ್, ಇ.ಎನ್.ಟಿ ವಿಭಾಗದ ಮುಖ್ಯಸ್ಥ ಡಾ. ಜಯಂತ್ ಹಾಗು ಡಾ. ನಳಿನಿ, ಶ್ರವಣ ತಜ್ಞೆ ಚೈತ್ರ, ಶಿಕ್ಷಣ ಇಲಾಖೆಯ ಬಂಡಿವೀರಪ್ಪ, ವಾಣಿ ಡೆಫ್ ಸಂಸ್ಥೆ ಮ್ಯಾನೇಜರ್ ವೀರೇಶ್ ಹಾಗು ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 8 times, 1 visits today)