ತುಮಕೂರು : 

     ಮಧುಗಿರಿ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳನ್ನು ಅವೈಜ್ಞಾನಿಕವಾಗಿ ಮರುವಿಗಂಡಣೆ ಮಾಡಿದ್ದು, ಹೋಬಳಿ ಕೇಂದ್ರವಾಗಿರುವ ದೊಡ್ಡೇರಿ ಜಿಲ್ಲಾ ಪಂಚಾಯತಿ ಕ್ಷೇತ್ರವನ್ನು ಉಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

     ಈ ವೇಳೆ ಮಾತನಾಡಿದ ಜಿ.ಪಂ. ಸದಸ್ಯ ಚೌಡಪ್ಪ ಅವರು, ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಾಗಿನಿಂದಲೂ ದೊಡ್ಡೇರಿ ಕ್ಷೇತ್ರ ಅಸ್ತಿತ್ವದಲ್ಲಿ ಇದೆ, ಹೋಬಳಿ ಕೇಂದ್ರ ಹಾಗೂ ಕಂದಾಯ ಗ್ರಾಮವನ್ನು ಒಳಗೊಂಡಿರುವ ದೊಡ್ಡೇರಿ ಕ್ಷೇತ್ರವನ್ನು ಅವೈಜ್ಞಾನಿಕವಾಗಿ ಚುನಾವಣಾ ಆಯೋಗ ಬದಲಿಸಲು ಮುಂದಾಗಿದೆ ಎಂದು ಆರೋಪಿಸಿದರು.

   ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡೇರಿ ಕ್ಷೇತ್ರವನ್ನು ಬದಲಿಸಿ ಬೇರೆ ಹೋಬಳಿಗಳ ಗ್ರಾಮಗಳನ್ನು ಒಳಗೊಂಡಂತೆ ಬೇರೆ ಕ್ಷೇತ್ರವನ್ನು ಮಾಡಲು ಮುಂದಾಗಿದೆ, ದೊಡ್ಡೇರಿ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಮೂವತ್ತು ಕೀಮಿ ದೂರದ ಗ್ರಾಮಗಳನ್ನು ಸೇರಿಸಿ, ಹೊಸ ಕ್ಷೇತ್ರವನ್ನು ಸೃಜಿಸಲು ಮುಂದಾಗಿದ್ದು, ಈ ಹಿಂದೆ ಎರಡು ಬಾರಿ ಕ್ಷೇತ್ರ ಪುನರ್ ವಿಗಂಡಣೆಯಾದಾಗಲೂ ದೊಡ್ಡೇರಿ ಕ್ಷೇತ್ರವನ್ನು ಉಳಿಸಿ, ಪುನರ್ ವಿಗಂಡಸಿಲಾಗಿತ್ತು. ಈಗ ಅವೈಜ್ಞಾನಿಕವಾಗಿರುವ ಮರುವಿಗಂಡಣೆಯನ್ನು ಕೈಬಿಡುವಂತೆ ಒತ್ತಾಯಿಸಿದರು.ಡಿಎಸ್‍ಎಸ್ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಂದಾಗಿನಿಂದಲೂ ದೊಡ್ಡೇರಿ ಕ್ಷೇತ್ರ ಇದೆ, ಎಲ್ಲ ರೀತಿಯಲ್ಲಿಯೂ ದೊಡ್ಡೇರಿ ಕ್ಷೇತ್ರವನ್ನು ಉಳಿಸಿಕೊಂಡು ಹೋಗುವ ಅವಕಾಶವಿದ್ದರು ಸಹ ರಾಜಕೀಯ ಕಾರಣಗಳಿಗಾಗಿ ಕ್ಷೇತ್ರವನ್ನು ಮರುವಿಗಂಡಣೆ ನೆಪದಲ್ಲಿ ಬದಲಾಯಿಸಲು ಹೊರಟಿದ್ದು, ಅವೈಜ್ಞಾನಿಕ ಮರುವಿಗಂಡಣೆ ಕೈಬಿಡದೇ ಹೋದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ದೊಡ್ಡೇರಿ ಜಿಲ್ಲಾ ಪಂಚಾಯತಿ ಕ್ಷೇತ್ರವನ್ನು ಉಳಿಸದೇ ಹೋದರೆ ಮುಂದಿನ ಜಿ.ಪಂ, ತಾ.ಪಂ ಹಾಗೂ ಸಾರ್ವತ್ರಿಕ ಚುನಾವಣೆಗಳನ್ನು ದೊಡ್ಡೇರಿ ಹೋಬಳಿಯ ಸಾರ್ವಜನಿಕರು ಬಹಿಷ್ಕರಿಸುವ ಮೂಲಕ ಮತದಾನದಿಂದ ಹೊರಗೆ ಉಳಿಯಬೇಕಾಗುತ್ತದೆ. ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿಯುವ ಮೂಲಕ ಬೃಹತ್ ಹೋರಾಟಕ್ಕೆ ಮುಂದಾ ಗಬೇಕಾಗುತ್ತದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸ್ವೀಕರಿಸಿದರು. ಈ ವೇಳೆ ಡಿಎಸ್‍ಎಸ್ ಸಂಚಾಲಕ ದೊಡ್ಡೇರಿ ಕಣಿಮಯ್ಯ, ತಾ.ಪಂ.ಸದಸ್ಯ ಪ್ರಸನ್ನಕುಮಾರ್, ಶಿವಣ್ಣ, ಪುಟ್ಟಣ್ಣ, ಗ್ರಾ.ಪಂ. ಸದಸ್ಯ ವಿಜಯಕುಮಾರ್, ಜಯಣ್ಣ, ಮಂಜುನಾಥ್, ಶಿವಣ್ಣ ಉಪಸ್ಥಿತರಿದ್ದರು.

(Visited 46 times, 1 visits today)