ಪತ್ರಕರ್ತರು ತಮ್ಮ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು -ಸಂಸದ ಮುದ್ದಹನುಮೇಗೌಡ

ತುಮಕೂರು :

      ಜಾತಿ, ಧರ್ಮ,  ಸ್ವಾರ್ಥ ಮುಕ್ತವಾಗಿ ಸಾಹಿತಿ, ಪತ್ರಕರ್ತ ಸಮಾಜಮುಖಿ, ಜೀವನ್ಮುಖಿಯಾಗಿ ಸಮಾಜ ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಸಮ ಸಮಾಜ ನಿರ್ಮಾಣವಾಗಲಿದೆ ಎಂದು ಸಂಸದ ಮುದ್ದಹನುಮೇಗೌಡ ತಿಳಿಸಿದರು.

      ನಗರದ ಕೆಇಬಿ ಇಂಜಿನಿಯರ್ಸ್ ಸಂಘದ ಸಭಾಂಗಣದಲ್ಲಿ ಬೆಂಕಿಯ ಬಲೆ ದಿನ ಪತ್ರಿಕೆ ಏರ್ಪಡಿಸಿದ್ದ 15ನೇ ವಾರ್ಷಿಕೋತ್ಸವ, ಪ್ರತಿಭಾಪುರಸ್ಕಾರ, ಬಡ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ, ಸಮಾಜದಲ್ಲಿ ಅಸಮಾನತೆ, ವಿಘಟನೆಗಳು ಹೆಚ್ಚುವುದರಿಂದ ಶೋಷಿತರು, ಆರ್ಥಿಕ ಮತ್ತು ಸಮಾಜಿಕವಾಗಿ ಬಲಾಢ್ಯರಾಗಲು ಸಾಧ್ಯವಾಗುವುದಿಲ್ಲ. ಸಂಸ್ಕøತಿ, ಸಂಸ್ಕಾರಗಳನ್ನು ಬೆಳೆಸುವಲ್ಲಿ ಶಿಕ್ಷಣ ಪ್ರಜ್ಞೆ ಮಹತ್ವ ಕಾರ್ಯ ನಡೆಸಲಿದೆ. ಹೀಗಾಗಿ ಸಾಹಿತಿ, ಪತ್ರಕರ್ತರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಆ ಕಾರ್ಯವನ್ನು ಬೆರಳಿಣಿಕೆಯಷ್ಟು ಜನ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

      ಬಡವರು, ಶೋಷಿತರು, ಮಹಿಳೆಯರ ಪರವಾದ ನಿಲುವುಗಳು ಕಂಠಸ್ಥಾಯಿಯಾಗದೆ ಹೃದಯದಿಂದ ವ್ಯಕ್ತವಾಗಬೇಕು. ಲೋಕಸಭಾ ಚುನಾವಣೆ ಸನ್ನಿಹಿತವಾಗಿದು,್ದ ಪ್ರಜ್ಞಾವಂತ ಮತದಾರರು ಜಿಲ್ಲೆಗೆ ತಮ್ಮ ಅಧಿಕಾರಾವಧಿಯಲ್ಲಿ ನೀಡಿರುವ ಕೊಡುಗೆಯನ್ನು ಪರಿಗಣಿಸಬೇಕು. ಜಿಲ್ಲೆಯ ಅಭಿವೃದ್ಧಿಗೆ ಇಸ್ರೋ, ಹೆಚ್‍ಎಎಲ್ ಕಾರ್ಖಾನೆಗಳ ಜೊತೆಗೆ ರಸ್ತೆಗಳ ಅಭಿವೃದ್ಧಿ, ರೈಲ್ವೆ ಯೋಜನೆ, ಬೃಹತ್ ಕೈಗಾರಿಕೆ ಇತ್ಯಾದಿ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎಂದರು.

      ವಿಕಲಚೇತನರು ಮತ್ತು ಆರ್ಥಿಕ ದುರ್ಬಲ ಮಕ್ಕಳಿಗೆ ಸಮವಸ್ತ್ರ ಮತ್ತು ಪರಿಕರಗಳನ್ನು ವಿತರಿಸಿದ ವಿ.ಪ. ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ, ಪತ್ರಿಕೆಗಳನ್ನು ಮುನ್ನೆಡೆಸುವುದು ಈ ಹೊತ್ತಿನಲ್ಲಿ ಬಹಳ ಕಷ್ಟಕರ. ಜನಮುಖಿಯಾಗಿ ಪತ್ರಿಕೆಗಳು ಬೆಳೆದರೆ ಸಮಾಜದ ಸರ್ವಾಂಗಿಣ ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದರು.

      ಕಾರ್ಯಕ್ರಮವನ್ನು ಪತ್ರಿಕೆ ಸಂಪಾದಕ ಎ.ಎನ್.ಧನಂಜಯ ಸ್ವಾಗತಿಸಿದರು. ರಾಜ್ಯ ಮಟ್ಟದ ಕವಿ ಗೋಷ್ಠಿಯಲ್ಲಿ 200 ಕ್ಕೂ ಹೆಚ್ಚು ಕವನಗಳು ಬಂದಿದ್ದು, ಅದರಲ್ಲಿ 28 ಕ್ಕೂ ಹೆಚ್ಚು ಮಂದಿ ರಾಜ್ಯವ್ಯಾಪಿ ಆಗಮಿಸಿ ಕಾರ್ಯಕ್ರಮದಲ್ಲಿ ಕವನ ವಾಚನ ನಡೆಸಿದರು. ಉತ್ತಮವಾಗಿ ಕವನ ವಾಚನ ಮಾಡಿದ ಮೂವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಯಿತು.

      ಶಾಸಕ ಜ್ಯೋತಿಗಣೇಶ್, ನಿವೃತ್ತ ಪ್ರಾಚಾರ್ಯ ಎನ್.ನಾಗಪ್ಪ, ಪತ್ರಕರ್ತರಾದ ಜಿ.ಇಂದ್ರಕುಮಾರ್, ಚಿ.ನಿ.ಪುರುಷೋತ್ತಮ್, ಪ್ರಾಚೀನ ಕಾವ್ಯಗಳ ಪ್ರವಚನಕಾರ ಮುರುಳಿಕೃಷ್ಣಪ್ಪ, ಪತ್ರಿಕೆ ಸಂಪಾದಕ ಎ.ಎನ್.ಧನಂಜಯ ಮತ್ತಿತರರು ಉಪಸ್ಥಿತರಿದ್ದರು.

(Visited 73 times, 1 visits today)

Related posts

Leave a Comment