ತುಮಕೂರು : 

ರಾಮಕೃಷ್ಣ

     ಜೂಜು ಅಡ್ಡೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಗುಬ್ಬಿ ಪೊಲೀಸ್ ಪೇದೆ ಸಿದ್ದರಾಜು ಮತ್ತು ಜಿಲ್ಲಾ ಅಪರಾಧ ಪತ್ತೆ ದಳದ ಪೇದೆ ಮಲ್ಲೇಶ್ ಅವರುಗಳನ್ನು ಅಮಾನತು ಮಾಡಲಾಗಿದೆ.

ಇದರ ಬಹುಮುಖ್ಯ ಭಾಗವಾಗಿದ್ದ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‍ಪೆಕ್ಟರ್ ಎಂ.ವಿ ಶೇಷಾದ್ರಿ ಮತ್ತು ಅಂದಿನ ಗುಬ್ಬಿ ವೃತ್ತ ನಿರೀಕ್ಷಕ ರಾಮಕೃಷ್ಣ ಮತ್ತು ಇತರರನ್ನು ಅಮಾನತು ಮಾಡಿರುವುದಿಲ್ಲ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

      ಗುಬ್ಬಿ ತಾಲ್ಲೂಕಿನ ಹಲವು ಭಾಗಗಳಲ್ಲಿ ಜೂಜಿನ ಅಡ್ಡೆಗಳು ಎಗ್ಗಿಲ್ಲದೆ ಸಾಗುತ್ತಿವೆ, ಇಡೀ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಇಸ್ಪೀಟ್ ಅಡೆÀ್ಡಗಳಿಗೆ ಅವುಗಳನ್ನು ನಡೆಸುವ ಜೂಜುಕೋರರ ರಕ್ಷಣೆಗೆ ನಿಂತಿದ್ದು ಮತ್ತಿನ್ಯಾರೂ ಅಲ್ಲ, ಅಂದಿನ ಇನ್ಸ್‍ಪೆಕ್ಟರ್ ರಾಮಕೃಷ್ಣ. ಇವರು ಗುಬ್ಬಿ ತಾಲ್ಲೂಕಿನ ವೃತ್ತ ನೀರಿಕ್ಷಕರ ಖುರ್ಚಿಯಲ್ಲಿ ಕೂತ ದಿನದಿಂದ ಜೂಜು ಅಡೆÀ್ಡಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದವು. ವೃತ್ತ ನೀರಿಕ್ಷಕರ ಕೃಪಾಕಟಾಕ್ಷ ಇದ್ದಿದ್ದರಿಂದ ಅವರ ಕೈಕೆಳಗಿನ ಅಧಿಕಾರಿ ಮತ್ತು ಸಿಬ್ಬಂಧಿ ಅವುಗಳನ್ನು ನಿಯಂತ್ರಿಸಲಾಗದೆ ಅಸಹಾಯಕತೆ ತೋರುತ್ತಿದ್ದರು. ಹಿರಿಯ ಅಧಿಕಾರಿಗಳೇ ಅಕ್ರಮಗಳನ್ನು ನಡೆಸುವವರಿಗೆ ಶ್ರೀರಕ್ಷೆಯಾದ ರೆ ಅವರ ಅಧೀನ ಅಧಿಕಾರಿ ಮತ್ತು ಸಿಬ್ಬಂಧಿ ಏನು ಮಾಡಲು ಸಾಧ್ಯ ಎಂಬ ವಿಷಯ ಈಡೀ ಗುಬ್ಬಿ ತಾಲ್ಲೂಕಿನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

      ಈ ಹಿಂದೆ ಗುಬ್ಬಿ ತಾಲ್ಲೂಕಿನ ಬಾರ್ಡರ್ ಮತ್ತು ತುರುವೇಕೆರೆ ಬಾರ್ಡರ್‍ಗಳಲ್ಲಿ ನಡೆಯುತ್ತಿದ್ದ ಹೈಟೆಕ್ ಇಸ್ಪೀಟ್ ಅಡೆÀ್ಡಗಳ ಮೇಲೆ ಕುಣಿಗಲ್ ಪೊಲೀಸ್ ಉಪಾಧೀಕ್ಷಕರು ದಾಳಿ ನಡೆಸಿದ ಸಂದರ್ಭದಲ್ಲಿ ಅವರಿಗೆ ಸಿಕ್ಕ ಮಾಹಿತಿ ಇಲಾಖೆ ತಲೆ ತಗ್ಗಿಸುವಂತಿತ್ತು. ಗುಬ್ಬಿ ವೃತ್ತ ನೀರಿಕ್ಷಕರ ಕೃಪಕಟಾಕ್ಷದಿಂದಲೇ ಜೂಜು ಅಡೆÀ್ಡಗಳು ನಿರ್ಭಯವಾಗಿ ಹಾಡು ಹಗಲೆ ನಡೆಯುತ್ತಿದ್ದದ್ದು ಬೆಳಕಿಗೆ ಬಂದಿತು. ಅಂದಿನ ವೃತ್ತ ನೀರಿಕ್ಷಕರು ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಎಂದೇ ಭೇಟಿ ಕೊಟ್ಟರು, ಅಂದು ಸಂಜೆಯ ಗುಂಡು-ತುಂಡು ಪಾರ್ಟಿಯ ಎಲ್ಲಾ ಸಂಪೂರ್ಣ ಜವಾಬ್ದಾರಿ ಜೂಜು ಅಡ್ಡೆ ನಡೆಸುವವರೆ ಮಾಡುತ್ತಿದ್ದರು ಎನ್ನುವುದು ಈಡೀ ಗುಬ್ಬಿ ತಾಲ್ಲೂಕಿನ ಸಾರ್ವಜನಿಕ ವಲಯದಲ್ಲಿ ಚರ್ಚೆ ಇದ್ದ ವಿಚಾರ. ಇಂತಹ ಹಲವು ವಿಚಾರಗಳು ಬಿಸಿ-ಬಿಸಿ ಚರ್ಚೆಯಲ್ಲಿರುವಾಗಲೇ ಶಿರಾ ಪೊಲೀಸ್ ಉಪಾಧೀಕ್ಷಕರಾದ ಕುಮಾರಪ್ಪನವರು ನಡೆಸಿದ ದಾಳಿಯ ಸಂದರ್ಭದಲ್ಲಿ ಸಿಕ್ಕ ಮಾಹಿತಿ ಸ್ವತಃ ಕುಮಾರಪ್ಪನವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಸ್ವತಃ ಕುಮಾರಪ್ಪನವರ ಅಧೀನ ಅಧಿಕಾರಿ ಅಂದಿನ ಗುಬ್ಬಿ ವೃತ್ತ ನೀರಿಕ್ಷಕ ರಾಮಕೃಷ್ಣಪ್ಪ ಮತ್ತು ಅವರ ಕೈಕೆಳಗಿನವರು ಜೂಜು ಅಡ್ಡೆಗಳಿಂದ ವಸೂಲಿ ಮಾಡಿ ಜೂಜು ನಡೆಸಲು ಅನುವು ಮಾಡಿಕೊಟ್ಟಿರುವ ವಿಚಾರ ಕುಮಾರಪ್ಪನವರಿಗೆ ಅಸಹ್ಯ ಹುಟ್ಟಿಸಿತ್ತು.

ಇನ್ಸ್‍ಪೆಕ್ಟರ್ ಎಂ.ವಿ ಶೇಷಾದ್ರಿ

      ಇದು ಸಾಲ ದೆಂಬಂತೆ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‍ಪೆಕ್ಟರ್ ಎಂ.ವಿ.ಶೇಷಾದ್ರಿ ಮತ್ತು ಅವರ ಸಿಬ್ಬಂಧಿಯು ಸಹ ಜೂಜು ಅಡ್ಡೆಗಳ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ ಎನ್ನು ವ ವಿಚಾರ ಕುಮಾರಪ್ಪನವರ ಗಮನಕ್ಕೆ ಬಂದು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋ.ನ.ವಂಶಿಕೃಷ್ಣನವರಿಗೆ ಸವಿಸ್ತಾರ ವರದಿ ಸಲ್ಲಿಸಿದ್ದಾರೆ. ತಮ್ಮ ಇಲಾಖೆಯ ಇಂತಹ ಭ್ರಷ್ಟಾಚಾರ ಎಸಗುವ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ವರದಿ ಸಲ್ಲಿಸಿರುವ ಶಿರಾ ಡಿವೈಎಸ್ಪಿ ಕುಮಾರಪ್ಪನವರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕುಮಾರಪ್ಪನವರ ಬಗ್ಗೆ ಪ್ರಶಂಸನೀಯ ಮಾತುಗಳು ಕೇಳಿ ಬರುತ್ತಿವೆ.

      ಕೇವಲ ಪೊಲೀಸ್ ಪೇದೆಗಳನ್ನು ಮಾತ್ರ ಅಮಾನತು ಮಾಡಿ ಅಧಿಕಾರಿಗಳನ್ನು ಅಮಾನತು ಮಾಡದೇ ತನಿಖೆಗೆ ಆದೇ ಶಿಸಿರುವುದು ಎಷ್ಟರ ಮಟ್ಟಿಗೆ ಸರಿ? ಅಧಿಕಾರಿಗಳಿಗೆ ತನಿಖೆಗೆ ಆದೇಶ ಸಿಬ್ಬಂಧಿಗಳಿಗೆ ಅಮಾನತ್ತಿನ ಶಿಕ್ಷೆ ಸರಿಯೇ ಎನ್ನುವ ಪ್ರಶ್ನೆ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆ.

      ಅಧಿಕಾರಿಗಳ ಆದೇಶವಿಲ್ಲದೆ ಸಿಬ್ಬಂಧಿಗಳು ಹಣ ವಸೂಲಿ ಮಾಡಲು ಸಾಧ್ಯವೇ..? ನಡೆಯುವ ಎಲ್ಲಾ ಅಕ್ರಮಗಳಿಗೆ ಅಧಿಕಾರಿಗಳ ಸಹಕಾರ ಇರುತ್ತದೆ. ಅದು ಬೆಳಕಿಗೆ ಬಂದಾಗ ಕೇವಲ ಸಿಬ್ಬಂಧಿಗಳು ಮಾತ್ರ ಬಲಿಪಶುಗಳಾಗುತ್ತಾರೆ. ಅಧಿಕಾರಿಗಳು ತಮಗಿರುವ ಪ್ರಭಾವವನ್ನು ಬಳಸಿಕೊಂಡು ಬಚಾವಾಗುತ್ತಿದ್ದಾರೆ. ಅಧಿಕಾರಿಗಳು ಹೇಳಿದ ಕೆಲಸವನ್ನು ಮಾತ್ರ ಮಾಡುವ ಸಿಬ್ಬಂಧಿ ಅಧಿಕಾರಿಗಳ ಆದೇಶದಂತೆ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಅವರು ಯಾವುದನ್ನು ತೆಗೆದುಕೊಳ್ಳಲು ಹೇಳುತ್ತಾರೋ ಅದನ್ನು ಮಾತ್ರ ಪಡೆದು ಅವರಿಗೆ ತಲುಪಿಸುವ ಕಾಯಕವನ್ನಷ್ಟೇ ಮಾಡುವುದು.

      ಹಿರಿಯ ಅಧಿಕಾರಿಗಳು ಹೇಳಿದ್ದನ್ನು ಮಾಡಿದ ತಪ್ಪಿಗಾಗಿ ಅಮಾನತ್ತಿನಂತಹ ಶಿಕ್ಷೆಯನ್ನು ಅನುಭವಿಸುವುದು ಸಿಬ್ಬಂಧಿಗಳು ಮಾತ್ರ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ವಿಚಾರ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

(Visited 2,325 times, 1 visits today)