ತುಮಕೂರು:

      ಕೊರೋನಾ ಲಾಕ್‍ಡೌನ್‍ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಹೊರ ರಾಜ್ಯದ ಸುಮಾರು 250 ಮಂದಿ ಕೂಲಿ ಕಾರ್ಮಿಕರಿಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ನೀಡಲಾದ ಆಹಾರ ಪದಾರ್ಥದ ಕಿಟ್‍ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ವಿತರಿಸಿದರು.

      ಕೋವಿಡ್ ಸಂಕಷ್ಟದ ಸಮಯದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಈ ಕೂಲಿ ಕಾರ್ಮಿಕರು ಹೊರ ರಾಜ್ಯದವರಾಗಿರುವುದರಿಂದ ಈವರೆಗೆ ಯಾವುದೇ ಸಂಘ ಸಂಸ್ಥೆಗಳವರು ಇವರನ್ನು ಗುರುತಿಸಿ ನೆರವಿಗೆ ಧಾವಿಸಿರಲಿಲ್ಲ.

ಆದರೆ ಸ್ವಾಮಿ ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಸಂಸ್ಥೆ ಹೊರ ರಾಜ್ಯದಿಂದ ಬಂದು ಹಲವು ದಿನಗಳಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಈ ಕೂಲಿ ಕಾರ್ಮಿಕರ ಸಂಕಷ್ಟವನ್ನು ಅರಿತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಮೂಲಕ ಅಗತ್ಯ ಇರುವ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿತು.

ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಸಂಘದ ಗೌರವಾಧ್ಯಕ್ಷರಾದ ಎನ್.ಎಸ್. ಜಯಕುಮಾರ್, ವಿವೇಕಾನಂದ ಸ್ಪೋರ್ಟ್ ಅಂಡ್ ಕಲ್ಚರಲ್ ಅಸೋಸಿಯೇಷನ್‍ನ ಅನಿಲ್ ಬಿಜೆಪಿ ಮುಖಂಡರಾದ ಟಿ.ಆರ್. ಸದಾಶಿವಯ್ಯ, ಅಸೋಸಿಯೇಷನ್ ಸದಸ್ಯರಾದ ಶ್ರೀನಿವಾಸ್, ನಿಖಿಲ್‍ಗೌಡ, ನಂದೀಶ್, ಕಿರಣ್, ಪ್ರವೀಣ್, ಕಾರ್ತಿಕ್ ಇದ್ದರು.

(Visited 10 times, 1 visits today)