BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜನಸಂಪರ್ಕ ಸಭೆ ಯಶಸ್ವಿ
  • ಟಾಟಾ ಐಪಿಎಲ್೨೦೨೬ ಆರಂಭಿಕ ಎರಡು ಮ್ಯಾಚ್‌ಗಳ ನೇರ ಪ್ರಸಾರ
  • “ಛಲವಿದ್ದರೆ ದೈಹಿಕ ನ್ಯೂನತೆ ಸಾಧನೆಗೆ ಅಡ್ಡಿಯಲ್ಲ’
  • ಹುಳಿಯಾರಿನಲ್ಲಿ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟನೆ
  • ಹುಳಿಯಾರಿನ ಗಾಂಧಿ ಪೇಟೆಯಲ್ಲಿ ಮನೆ ಕಳ್ಳತನ
  • ಬಡವರು, ಶೋಷಿತರ ಪರ ಹೋರಾಡಿದ ಜಿ.ಎಂ.ಸಣ್ಣಮುದ್ದಯ್ಯ: ಸಿದ್ಧಲಿಂಗಪ್ಪ
  • ಬಡತನ, ಅವಮಾನಗಳ ಅರಿವು ಯಶಸ್ಸಿನ ಪ್ರೇರಣೆಯಾಗಲಿ
  • ತಾಂತ್ರಿಕ ವಿಶ್ವವಿದ್ಯಾಲಯ ಪಠ್ಯಕ್ರಮ ಜಗತ್ತಿಗೆ ಮಾದರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮೇವು, ನೀರು ಪೂರೈಕೆಯಾಗಲಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧಿಕಾರಿಗಳಿಗೆ ಸೂಚನೆ
Trending

ಮೇವು, ನೀರು ಪೂರೈಕೆಯಾಗಲಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧಿಕಾರಿಗಳಿಗೆ ಸೂಚನೆ

By News Desk BenkiyabaleUpdated:April 30, 2019 7:33 pm

 ತುಮಕೂರು:

      ಜಿಲ್ಲೆಯ 10 ತಾಲ್ಲೂಕುಗಳು ಬರಪೀಡಿತವಾಗಿರುವುದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮೇವಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಬೇಕೆಂದು ಯೋಜನೆ ಮತ್ತು ಸ್ಯಾಂಖಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಇಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ತುಮಕೂರು ಜಿಲ್ಲೆಯಲ್ಲಿ ಬರಪರಿಹಾರ ಹಾಗೂ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಜಿಲ್ಲೆಯಲ್ಲಿ ಬರವಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಮಾಡಬೇಕು. ಅಲ್ಲದೆ ಜನರ ಬಳಿಗೆ ಧಾವಿಸಿ ಅವರ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗೆ ಸ್ಪಂದಿಸಬೇಕು. ಜಾನುವಾರುಗಳಿಗೂ ನೀರು ಮತ್ತು ಮೇವು ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಅವರು ತಿಳಿಸಿದರು.

      ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ಡಿಸೆಂಬರ್ 2018ರ ಅಂತ್ಯಕ್ಕೆ ವಾಡಿಕೆ ಮಳೆ 697 ಮಿ.ಮೀ. ಆಗಬೇಕಾಗಿತ್ತು. ಆದರೆ ವಾಸ್ತವಿಕವಾಗಿ 617 ಮಿ.ಮೀ. ಮಳೆಯಾಗಿ 12 ಮಿ.ಮೀ. ಕೊರತೆಯಾಗಿದೆ. ಜಿಲ್ಲೆಯಲ್ಲಿ 10 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಧುಗಿರಿ ತಾಲ್ಲೂಕಿನ ಕಸಬಾ, ಐಡಿಹಳ್ಳಿ, ಬಡವನಹಳ್ಳಿ, ಕೊಡಿಗೇನಹಳ್ಳಿ, ಮಿಡಿಗೇಶಿ, ಪುರವರ, ಕೊರಟಗೆರೆ ತಾಲ್ಲೂಕಿನ ಕಸಬಾ, ಕ್ಯಾಮೇನಹಳ್ಳಿ, ತೋವಿನಕೆರೆ, ಪಾವಗಡ ತಾಲ್ಲೂಕಿನ ಸಿಕೆಪುರ, ನಾಗಲಮಡಿಕೆ, ವೈ.ಎನ್.ಹೊಸಕೋಟೆ, ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ, ಪಟ್ಟನಾಯಕನಹಳ್ಳಿ, ತಿಪಟೂರು ತಾಲ್ಲೂಕಿನ ಬಾಗವಾಳೂ ಹಾಗೂ ಚಿಕ್ಕನಾಯಕನಹಳ್ಳಿಯ ಕಸಬಾದಲ್ಲಿ 16 ಮೇವು ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಮೇವು ವಿತರಿಸಲು ಮೇವು ವಿತರಣೆ ಕಾರ್ಡುಗಳನ್ನು ರೈತರಿಗೆ ವಿತರಿಸಿದ್ದು, ಮೇವು ವಿತರಣೆಗೆ ಜಿಲ್ಲೆಯಲ್ಲಿ ಸಹಕಾರಿಯಾಗಿವೆ. ಮೇವನ್ನು ಸಣ್ಣಸಣ್ಣಗೆ ಕತ್ತರಿಸಿ ನೀಡುವಂತೆ ಜನರಿಂದ ಬೇಡಿಕೆ ಇದೆ. ಈ ಬಗ್ಗೆ ಕ್ರಮವಹಿಸುವುದಾಗಿ ಅವರು ತಿಳಿಸಿದರು.

     ಜಿಲ್ಲೆಯಲ್ಲಿ 708185 ಜಾನುವಾರು(ದನ ಮತ್ತು ಎಮ್ಮೆ) ರೈತರ ದಾಸ್ತಾನಿನಲ್ಲಿ 281482 ಟನ್ ಒಣ ಮೇವು ಲಭ್ಯವಿದ್ದು, 11 ವಾರಗಳಿಗೆ ಸಾಕಾಗುತ್ತದೆ. ಮೇವು ಕಿರುಪೊಟ್ಟಣಗಳನ್ನು ರೈತರಿಗೆ ವಿತರಿಸಿದ್ದು, 5,99,117 ಟನ್ ಹಸಿರು ಮೇವು ಉತ್ಪಾದನೆಯಾಗುವುದೆಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ 128 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಕೊಳವೆ ಬಾವಿ ಬತ್ತಿ ಹೋಗಿರುವ ಕಡೆ ಖಾಸಗಿ ಬೋರ್‍ವೆಲ್‍ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ನೀರು ಒದಗಿಸಲು ಕೊಳವೆ ಬಾವಿ ಮಾಲೀಕರನ್ನು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇಂಜಿನಿಯರ್‍ಗಳು ಮನವೊಲಿಸಿದ್ದಾರೆ ಎಂದರು.

      ಜಿಲ್ಲೆಯಲ್ಲಿ ಇನ್‍ಪುಟ್ ಸಬ್ಸಿಡಿಗಾಗಿ 1.70ಲಕ್ಷ ರೈತರ ಭಾಗಶಃ ಡೇಟಾಎಂಟ್ರಿ ಕಾರ್ಯವನ್ನು ಒಂದು ವಾರದೊಳಗೆ ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು.

(Visited 43 times, 1 visits today)
Previous ArticleSSLC ಫಲಿತಾಂಶ: ತುಮಕೂರಿಗೆ 18ನೇ ಸ್ಥಾನ
Next Article ನ್ಯಾಯಾಲಯದ ಆವರಣದಲ್ಲೇ ಎಸಿಬಿ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್!
News Desk Benkiyabale

Related Posts

ಬದುಕಿನ ಜಟಕಬಂಡಿಗೆ ಡಿವಿಜಿ ಕಗ್ಗವೇ ದಾರಿದೀಪ

March 25, 2026 4:58 pm ತುಮಕೂರು ಜಿಲ್ಲಾ ಸುದ್ಧಿಗಳು

ಏ4: ಸಚಿವರ ನೇತೃತ್ವದಲ್ಲಿ “ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ”

March 25, 2026 4:55 pm ತುಮಕೂರು ಜಿಲ್ಲಾ ಸುದ್ಧಿಗಳು

ಡಾ. ವಸಂತ ಮುರಳಿ ಅವರಿಗೆೆ ಒಲಿದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ

March 25, 2026 3:58 pm ತುಮಕೂರು ಜಿಲ್ಲಾ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಜನಸಂಪರ್ಕ ಸಭೆ ಯಶಸ್ವಿ

March 27, 2026 3:14 pm
ಇತರೆ ಸುದ್ಧಿಗಳು

ಟಾಟಾ ಐಪಿಎಲ್೨೦೨೬ ಆರಂಭಿಕ ಎರಡು ಮ್ಯಾಚ್‌ಗಳ ನೇರ ಪ್ರಸಾರ

March 27, 2026 2:58 pm
ಇತರೆ ಸುದ್ಧಿಗಳು

“ಛಲವಿದ್ದರೆ ದೈಹಿಕ ನ್ಯೂನತೆ ಸಾಧನೆಗೆ ಅಡ್ಡಿಯಲ್ಲ’

March 27, 2026 2:56 pm
ಇತರೆ ಸುದ್ಧಿಗಳು

ಹುಳಿಯಾರಿನಲ್ಲಿ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟನೆ

March 26, 2026 5:25 pm
ಇತರೆ ಸುದ್ಧಿಗಳು

ಹುಳಿಯಾರಿನ ಗಾಂಧಿ ಪೇಟೆಯಲ್ಲಿ ಮನೆ ಕಳ್ಳತನ

March 26, 2026 5:23 pm
ಇತರೆ ಸುದ್ಧಿಗಳು

ಬಡವರು, ಶೋಷಿತರ ಪರ ಹೋರಾಡಿದ ಜಿ.ಎಂ.ಸಣ್ಣಮುದ್ದಯ್ಯ: ಸಿದ್ಧಲಿಂಗಪ್ಪ

March 26, 2026 5:21 pm
Our Youtube Channel
Our Picks

ಜನಸಂಪರ್ಕ ಸಭೆ ಯಶಸ್ವಿ

March 27, 2026 3:14 pm

ಟಾಟಾ ಐಪಿಎಲ್೨೦೨೬ ಆರಂಭಿಕ ಎರಡು ಮ್ಯಾಚ್‌ಗಳ ನೇರ ಪ್ರಸಾರ

March 27, 2026 2:58 pm

“ಛಲವಿದ್ದರೆ ದೈಹಿಕ ನ್ಯೂನತೆ ಸಾಧನೆಗೆ ಅಡ್ಡಿಯಲ್ಲ’

March 27, 2026 2:56 pm

ಹುಳಿಯಾರಿನಲ್ಲಿ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟನೆ

March 26, 2026 5:25 pm

ಹುಳಿಯಾರಿನ ಗಾಂಧಿ ಪೇಟೆಯಲ್ಲಿ ಮನೆ ಕಳ್ಳತನ

March 26, 2026 5:23 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಜನಸಂಪರ್ಕ ಸಭೆ ಯಶಸ್ವಿ

By News Desk BenkiyabaleMarch 27, 2026 3:14 pm

ಪಾವಗಡ: ತಾಲೂಕಿನ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿ ಸುವ ನಿಟ್ಟಿನಲ್ಲಿ, ತಾಲೂಕು ಕಛೇರಿ ಹಾಗೂ ಸಿ.ಕೆ. ಪುರ ಗ್ರಾಮದಲ್ಲಿ…

ಟಾಟಾ ಐಪಿಎಲ್೨೦೨೬ ಆರಂಭಿಕ ಎರಡು ಮ್ಯಾಚ್‌ಗಳ ನೇರ ಪ್ರಸಾರ

March 27, 2026 2:58 pm

“ಛಲವಿದ್ದರೆ ದೈಹಿಕ ನ್ಯೂನತೆ ಸಾಧನೆಗೆ ಅಡ್ಡಿಯಲ್ಲ’

March 27, 2026 2:56 pm

ಹುಳಿಯಾರಿನಲ್ಲಿ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟನೆ

March 26, 2026 5:25 pm
News by Date
March 2026
M T W T F S S
 1
2345678
9101112131415
16171819202122
23242526272829
3031  
« Feb    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.