ತುಮಕೂರು :

      ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಧುಗಿರಿ ಇವರ ಸಹಯೋಗದೊಂದಿಗೆ ಮಧುಗಿರಿ ತಾಲ್ಲೂಕು ಚಂದ್ರಗಿರಿ ಗೊಲ್ಲರಹಟ್ಟಿಯಲ್ಲಿ ಸಾರ್ವಜನಿಕರಿಗೆ ಹಾಗೂ ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಗಿರಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಸವಿತ ಕೆ.ಟಿ. ರವರು ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು.

      ಇವರು ಮಾತನಾಡುತ್ತಾ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಕೂಡ ಮೂಡನಂಬಿಕೆ ಹಾಗೂ ಕಂದಾಚಾರವನ್ನು ಅಳವಡಿಸಿಕೊಂಡಿದ್ದು, ಹೆರಿಗೆಯಾದ ಹಾಗೂ ಋತುಮತಿಯಾದ ಹೆಣ್ಣು ಮಕ್ಕಳನ್ನು ಊರಿನಿಂದ ದೂರವಿಡುತ್ತಿರುವುದು ನಿಜವಾಗಲು ಕೂಡ ಶೌಚನೀಯ ಎಂದರು.
ಮುಂದಿನ ದಿನಗಳಲ್ಲಿ ಇಂತಹ ಪದ್ದತಿಗಳನ್ನು ದೂರವಿಟ್ಟು ಸಮಾಜದಲ್ಲಿ ಎಲ್ಲಾರಂತೆ ಬದಕಲು ತಿಳಿಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶಿಕ್ಷಣ ಇಲಾಖೆಯ ಎಲ್.ಟಿ.ದಾಸಣ್ಣ ನವರು ಮಾತನಾಡಿ ಗೊಲ್ಲರಹಟ್ಟಿಗಳಲ್ಲಿ ಅಲೆಮಾರಿ ಅರೆ ಅಲೆಮಾರಿ ಜನಾಂಗದವರು ಪ್ರಾಚೀನ ಕಾಲದಿಂದ ಕೆಲವು ಅವೈಜ್ಞಾನಿಕ ಆಚರಣೆಗಳನ್ನು ಆಚರಿಸಿಕೊಂಡು ಬಂದಿದ್ದು ಅವುಗಳಿಗೆ ಯಾವುದೇ ರೀತಿಯ ವೈಜ್ಞಾನಿಕ ತಳಹಾದಿ ಇಲ್ಲ ಅವುಗಳನ್ನು ತ್ಯಜಿಸಿ ಅದೂನಿಕತೆಗೆ ಈ ಸಮುದಾಯಗಳು ತೆರೆ ಎಳೆದುಕೊಳ್ಳಬೇಕು ಎಂದರು. ಈಗಲೂ ಕೂಡ ಅಪ್ರಾಪ್ತರಿಗೆ ಮದುವೆ ಮಾಡುವುದು ಹಾಗೂ ಗಂಡು ಮಗು ಬೇಕೆಂದು ಮರು ಮದುವೆಯಾವುದು. ಶೌಚಾಲಯ ಇದ್ದರೂ ಕೂಡ ಬಳಸದೆ ಬಯಲನ್ನೇ ಅವಲಂಭಿಸುವುದು. ಹಾಗೂ ಸ್ವಚ್ಚತೆ ಬಗ್ಗೆ ಇನ್ನು ಮುಂತಾದ ವಿಚಾರಗಳ ಬಗ್ಗೆ ಅರಿವು ಮೂಡಿಸಿದರು.

      ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯಾಂಕ ಟ್ರಸ್ಟ್ ಕಾರ್ಯದರ್ಶಿಗಳಾದ ಮೂಡ್ಲಿಗಿರೀಶ್ ಮಾತನಾಡಿ ಸ್ವತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕೂಡ ಗೊಲ್ಲರಹಟ್ಟಿಗಳಲ್ಲಿ ಇನ್ನು ಮೂಡ ನಂಬಿಕೆಗಳನ್ನು ಅವಲಂಬಿಸಿರುವುದು ಖಂಡನೀಯ ಎಂದರು. ಹಾಗೂ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಬ್ಯಾಸಗಳನ್ನು ಕಲ್ಪಿಸಿ ವಿದ್ಯಾವಂತರನ್ನಾಗಿ ಸಮಾಜದಲ್ಲಿ ಆರ್ಥಿಕವಾಗಿ ಸಮಾಜಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ತಿಳಿಸಿದರು.

      ಬಿ.ಸಿ.ಎಂ ಇಲಾಖೆಯ ಕಲ್ಯಾಣ ಅಧಿಕಾರಿಗಳಾದ ಜಯರಾಂ ರವರು ಮಾತನಾಡಿ ನಮ್ಮ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಗಂಗಾಕಲ್ಯಾಣ ಯೋಜನೆ ಹಾಗೂ ರಸ್ತೆ ಚರಂಡಿಗಳ ನಿರ್ಮಾಣ ಇನ್ನು ಅನೇಕ ಯೋಜನೆಗಳನ್ನು ನಮ್ಮ ಇಲಾಖೆಯಲ್ಲಿ ದೊರೆಯುತ್ತಿದ್ದು, ಅವುಗಳನ್ನು ತಾವುಗಳೆಲ್ಲರೂ ಕೂಡ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

      ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಾದ ಶ್ರೀಮತಿ ಅನಿತಾ ಮಾತನಾಡಿ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ತಿಳಿಸಿ ಬಾಂಣತೀಯರು ಹಾಗೂ ಗರ್ಭಿಣೆ ಸ್ತ್ರೀಯವರಿಗೆ ಅಂಗನವಾಡಿಗಳಿಂದ ಸಿಗುವ ಸೌಲಭ್ಯಗಳನ್ನು ತಿಳಿಸಿದರು.

      ಈ ಸಂದರ್ಭದಲ್ಲಿ ಚಂದ್ರಗಿರಿ ಗ್ರಾ.ಪಂ ಸದಸ್ಯರಾದ ಶ್ರೀನಿವಾಸ್, ಈರಮ್ಮ, ವನಜಾಕ್ಷಿ, ರೇಣುಕಮ್ಮ, ತಿಮ್ಮಯ್ಯ, ಕೃಷ್ಣಪ್ಪ, ಪುಟ್ಟತಾಯಮ್ಮ, ಈರಣ್ಣ, ಚಿಕ್ಕಮರಿಯಪ್ಪ,, ಹಟ್ಟಿತಿಮ್ಮಯ್ಯ, ಶಿವಕುಮಾರ್ ಹೆಚ್.ತಿಮ್ಮಯ್ಯ, ವಿಸ್ತೀರಣಾಧಿಕಾರಿಗಳಾದ ಮಹಮದ್ ಶಷೀ ಉಲ್ಲಾ, ಸಿಬ್ಬಂದಿಗಳಾದ ಹೋಬಲೇಶ್, ರಾಮಮೋಹನ್, ನವೀನ್ ಕುಮಾರ್, ಹೈದರಾಲಿ, ಸಣ್ಣಪ್ಪ, ರವಿ ಮತ್ತು ಲಕ್ಷ್ಮೀರಂಗನಾಥ್ ಹಾಜರಿದ್ದರು.

(Visited 23 times, 1 visits today)