ತುಮಕೂರು:

ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ ವಿಶ್ವಗುರು ಬಸವಣ್ಣ ಹಾಗೂ ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ದೂತರಾದ ಬುದ್ಧನ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಮೈಸೂರಿನ ಬಸವ ಧ್ಯಾನಮಂದಿರದ ಶ್ರೀ ಬಸವಲಿಂಗಮೂರ್ತಿ ಶರಣರು ಕರೆ ನಿಡಿದರು.
ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಕನ್ನಡ ವಿಭಾಗ ಮತ್ತು ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಬುದ್ಧ ಮತ್ತು ಬಸವಣ್ಣನವರ ಜನ್ಮದಿನಾಚರಣೆ ಹಾಗೂ ಡಾ.ಹೆಚ್.ಎಂ.ಗಂಗಾಧರಯ್ಯ ಸ್ಮಾರಕ ಉಪನ್ಯಾಸ ಮಾಲೆ-2 ಅಂಗವಾಗಿ ‘ಬುದ್ಧ-ಬಸವಣ್ಣನವರ’ ವಿಚಾರಧಾರೆ ಕಾರ್ಯಕ್ರಮದಲ್ಲಿ ಬುದ್ಧ ಹಾಗೂ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಇಡೀ ಜಗತ್ತಿಗೆ ಬೆಳಕನ್ನು ನೀಡಿದ ಬುದ್ಧ-ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆದರ್ಶ ಬದುಕು ಸಾಗಿಸಬೇಕು. ಬುದ್ಧ-ಬಸವಣ್ಣನವರ ಕಾಲಮಿತಿ ಬೇರೆಯಾದರು ಅವರಿಬ್ಬರು ಸಮಾನ ಮನಸ್ಕರು. ಜನರಿಗೆ ತಿಳುವಳಿಕೆ ಹೇಳುವ ಮೂಲಕ ಸಮಾಜದಲ್ಲಿ ಮೇಲು-ಕೀಳು ಇಲ್ಲದೇ ಎಲ್ಲರೂ ಸಮಾನತೆಯಿಂದ ಬದುಕುವ ಸಂಕಲ್ಪ ಅವರದಾಗಿತ್ತು ಎಂದು ನುಡಿದರು.
ದೇಹವಿಲ್ಲದ, ವರ್ಣವಿಲ್ಲದ, ರೂಪ ಇಲ್ಲದವನೇ ದೇವರು ಎಂದು ಹೇಳಿದ ಶ್ರೀ ಬಸವಲಿಂಗಮೂರ್ತಿ ಶರಣರು ಇಂದು ಕಾಲ ಬದಲಾಗಿದೆ. ದೇವರ ಹೆಸರಿನಲ್ಲಿ ದೇವಾಲಯಗಳೆಲ್ಲ ವಾಣಿಜ್ಯೀಕರಣವಾಗಿವೆ. ಇದು ದೂರವಾಗಬೇಕು. ಮಸೀದಿ-ಮಂದಿರಗಳು ಒಳ್ಳೆಯ ವಿಚಾರಗಳನ್ನು ಹಂಚುವ ಕೆಲಸ ಮಾಡಬೇಕು. ಯಾವ ಧರ್ಮ, ಜಾತಿಯು ದೊಡ್ಡದಲ್ಲ ಬುದ್ಧ-ಬಸವಣ್ಣನವರ ಹಾದಿಯಲ್ಲಿ ನಡೆದರೇ ಜೀವನ ಸಾರ್ಥಕ ಎಂದು ಪ್ರತಿಪಾದಿಸಿದರು.
ಬಸವಣ್ಣ ಮತ್ತು ಬುದ್ಧ ದೃಷ್ಟಿಯಲ್ಲಿ ಜಾತಿಗೆ ಸ್ಥಾನವಿಲ್ಲ. ಇಬ್ಬರು ಕಂಡಿದ್ದು ಜಾತ್ಯಾತೀತ ಸಮಾಜ. ಆದರೇ ಈಗ ರಾಜಕಾರಣಿಗಳು ತಮ್ಮ ಅವಶ್ಯಕತೆಗಳಿಗಾಗಿ ಜಾತಿ-ಧರ್ಮದ ಹೆಸರಿನಲ್ಲಿ ಕೋಮು ಗಲುಭೆ ಸೃಷ್ಟಿಸುತ್ತಿದ್ದಾರೆ. ಇದನ್ನು ನಾವು ಅರಿತು ಎಲ್ಲರೂ ನಮ್ಮವರೇ ಎಂದು ಬದುಕು ಸಾಧಿಸಬೇಕು ಎಂದು ಶ್ರೀ ಬಸವಲಿಂಗಮೂರ್ತಿ ಶರಣರು ತಿಳುವಳಿಕೆ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್.ಕುಮಾರ್ ಮಾತನಾಡಿ ಬುದ್ಧ-ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು.
ಇಂತಹ ವ್ಯಕ್ತಿಗಳು ಮತ್ತೇ ಹುಟ್ಟಿ ಬರುವ ಅವಶ್ಯಕತೆ ಇಂದಿನ ದಿನಮಾನದಲ್ಲಿ ಪ್ರಸ್ತುತ ಎನಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ, ಕನ್ನಡ ವಿಭಾಗದ ಮುಖ್ಯಸ್ಥರಾದ ಪೆÇ್ರ.ರಮೇಶ ಮಣ್ಣೆ, ರಸಾಯನ ಶಾಸ್ತ್ರದ ಮುಖ್ಯಸ್ಥ ಡಾ.ವಿಜಯ ಭಾಸ್ಕರ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 3 times, 1 visits today)