ತುಮಕೂರು:

ಕಳೆದ 2 ವರ್ಷಗಳಿಂದ ಕೋವಿಡ್-19 ನಿಂದಾಗಿ ಶ್ರೀ ಮಾರಿಯಮ್ಮ ದೇವಿಯ ಕರಗ ಮಹೋತ್ಸವವನ್ನು ಮಾಡಲು ಸಾಧ್ಯವಾಗಿರಲಿಲ್ಲ ಇಂದು ವಿಜೃಂಭಣೆಯಿಂದ ಶ್ರೀ ಮಾರಿಯಮ್ಮ ದೇವಿಯ ಕರಗವನ್ನು ತುಮಕೂರು ಅಮಾನಿಕೆರೆಯಿಂದ ಮಾರಿಯಮ್ಮ ನಗರ ವಸತಿ ಸಮುಚ್ಛಯ ಮತ್ತು ನೆಲೆ ದೇವಸ್ಥಾನದವರೆಗೆ ಮೆರವಣಿಗೆಯನ್ನು ಮಾಡಲಾಯಿತು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ತುಮಕೂರು ನಗರ ಶಾಸಕರಾದ ಜ್ಯೋತಿಗಣೇಶ್ ಮಾರಿಯಮ್ಮ ನಗರದಲ್ಲಿರುವ ಜನರು ಶ್ರಮ ಜೀವಿಗಳು ಮಂಡಿಪೇಟೆಯ ಆರ್ಥಿಕ ವಹಿವಾಟಿಗೆ ಬೇಕಾದ ಮಾನವ ಸಂಪತ್ತನ್ನು ಹೊಂದಿದ್ದು ನಿರಂತರ ಪರಿಶ್ರಮದಿಂದ ಸುಸಜ್ಜಿತವಾದ ಮನೆಗಳನ್ನು ನಗರದ ಮಧ್ಯೆ ಭಾಗದಲ್ಲಿ ಪಡೆದಿದ್ದಾರೆ ಈಗಿರುವ ಮಾರಿಯಮ್ಮ ದೇವಸ್ಥಾನ ಸರ್ವೇ ನಂ 120 ರ ಖರಾಬ್‍ನಲ್ಲಿದ್ದು ಈ ಮೂಲ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಮಾರಿಯಮ್ಮ ನಗರದ ಜನರ ಧಾರ್ಮಿಕ ಆಚರಣೆಗಳಿಗೆ ಅನುಕೂಲ ಕಲ್ಪಿಸಿಕೊಡಲಾಗುವುದೆಂದರು.
ಶ್ರೀ ಮಾರಿಯಮ್ಮ ಶಕ್ತಿ ಕರಗಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸ್ಲಂ ಸಮಿತಿ ಗೌರವಧ್ಯಕ್ಷರಾದ ದೀಪಿಕಾ 59ನೇ ವರ್ಷದ ಈ ಕರಗ ವಿಶೇಷವಾಗಿದ್ದು ತುಮಕೂರಿನಲ್ಲಿ ಏಕಕಾಲದಲ್ಲಿ ಹಸಿ ಮತ್ತು ಹೂವಿನ ಮೂರು ಕರಗಗಳ ಮೆರವಣಿಗೆ ನಡೆಯುತ್ತಿದ್ದು ಇಲ್ಲಿನ ಜನರು ಒಂದು ವಾರದಿಂದ ಶ್ರದ್ದೆ ಭಕ್ತಿಯಿಂದ ನೆಡೆದುಕೊಳ್ಳುತ್ತಿದ್ದಾರೆ, ಸ್ಲಂ ಸಂಘಟನೆಯ ನಿರಂತರ ಹೋರಾಟದಿಂದ ಇಲ್ಲಿನ ಜನರಿಗೆ ಸ್ಮಾರ್ಟ್‍ಸಿಟಿಯಲ್ಲಿ ಪುನರ್ ವಸತಿ ಪಡೆಯಲು ಸಾಧ್ಯವಾಗಿದೆ ಎಂದರು.
ಕರಗ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ 20 ವರ್ಷಗಳ ಹೋರಾಟದ ಪಲ ಮಾರಿಯಮ್ಮ ನಗರ ವಸತಿ ಸಮುಚ್ಛಯವಾಗಿದ್ದು ತುಮಕೂರಿನ ಹಲವಾರು ಜನರು ನಗರದ ಮಧ್ಯೆ ಭಾಗ ಇಲ್ಲಿರುವ ಜನರಿಗೆ ವಸತಿ ಸಿಕ್ಕಿರುವುದರಿಂದ ಭ್ರಮನಿಸುರಗೊಂಡು ಬೆರಗಾಗಿದ್ದಾರೆ ಕೆಲವರಿಗೆ ಹೊಟ್ಟೆಕಿಚ್ಚು ಸಹಾ ಆಗಿದೆ, ದೇವಸ್ಥಾನಕ್ಕೆ ಸಂಬಂಧಿಸಿದ 6 ಕುಂಟೆ ಹೊರತುಪಡಿಸಿ ಈಗಿರುವ ಜಾಗವನ್ನು ನಗರಪಾಲಿಕೆಗೆ ಬಿಟ್ಟುಕೊಡಲಾಗುವುದು ಹಿಂದಿನ ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಕೆಲವೊಂದು ಭೂ ಮಾಫಿಯಾಗಳು ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಸಂಘಟನೆಯು ಸಹಾ ದಾವೆಗೆ ಇಂಪ್ಲೀಡ್ ಆಗಿದೆ. ಮಾರಿಯಮ್ಮ ಮೂಲ ನಿವಾಸಿಗಳು ಪೂಜಿಸುವ ದೈವವಾಗಿದ್ದು ಅವರ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ 14ನೇ ವಾರ್ಡಿನ ಮಾಜಿ ನಗರಪಾಲಿಕೆ ಸದಸ್ಯರಾದ ಎಂ.ಪಿ ಮಹೇಶ್ ಮುಖಂಡರಾದ ಜಿಯಾಉಲ್ಲಾ. ನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಪಾಲ್ಗೊಂಡು ಪೂಜೆ ಸಲ್ಲಿಸಿದರು ಮಾರಿಯಮ್ಮ ಯುವಕ ಸಂಘದ ಪದಾಧಿಕಾರಿಗಳಾದ ಕಣ್ಣನ್, ಮುರುಗ, ರಾಜ, ಕಾಶಿ, ಮಾಧವ, ಚಕ್ರಪಾಣಿ, ಮಾರಿ, ಗೋವಿಂದ್‍ಸ್ವಾಮಿ, ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ಶಂಕರಯ್ಯ, ಅರುಣ್, ತಿರುಮಲಯ್ಯ, ತೇಜಸ್‍ಕುಮಾರ್, ಮೋಹನ್, ಮಾರಿಮುತ್ತು, ಮುರುಗನ್, ಚಲುವ್‍ರಾಜ್,ಸುಬ್ಬ, ಪಾಲ್ಗೊಂಡಿದ್ದರು.

(Visited 5 times, 1 visits today)