ತುಮಕೂರು:


ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಗರದ ಅಮಾನಿಕೆರೆ ಕೋಡಿಹಳ್ಳದ 30 ಬಡಕುಟುಂಬಗಳಿಗೆ ಪುನರ್‍ವಸತಿ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ನಂ, 3ರಲ್ಲಿ ಬರುವ ಶಿರಾಗೇಟ್ ತುಮಕೂರು ಅಮಾನಿಕೆರೆ ಕೋಡಿಹಳ್ಳದಲ್ಲಿ ಸುಮಾರು 70 ವರ್ಷಗಳಿಗೂ ಮೇಲ್ಪಟ್ಟು 30 ಕುಟುಂಬಗಳು ಹಿಂದುಳಿದ ಮತ್ತು ದಲಿತ ಜನಾಂಗದ ಮಡಿವಾಳ, ಕುರುಬ, ಮೊದಲಿಯರ್ಸ್ ಮತ್ತು ಎಸ್‍ಸಿ/ಎಸ್‍ಟಿ ಇತರೆ ಜಾತಿಯ ಬಡಜನರು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು ಇತ್ತೀಚೆಗೆ ಭಾರಿ ಮಳೆಯಿಂದ ತುಮಕೂರು ಅಮಾನಿಕೆರೆ ಕೋಡಿ ಹೊಡೆದಿರುವುದರಿಂದ ಇಲ್ಲಿರುವ ಎಲ್ಲಾ ಮನೆಗಳಿಗೂ ನೀರು ನುಗ್ಗಿ ದಿನಾಂಕ:30-7-2022 ರ ಮಧ್ಯರಾತ್ರಿ ಇಲ್ಲಿದ್ದ ಎಲ್ಲಾ ಕುಟುಂಬಗಳನ್ನು ಜಿಲ್ಲಾಡಳಿತ ತುಮಕೂರು ಮಹಾನಗರ ಪಾಲಿಕೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ ಕಳೆದ 8 ತಿಂಗಳಿಂದ 2ನೇ ಬಾರಿ ಇಂತಹ ಘಟನೆ ಸಂಭವಿಸಿದ್ದು ಕೋಡಿ ಹಳ್ಳದಲ್ಲಿ ಈ ಕುಟುಂಬಗಳು ವಾಸಿಸುತ್ತಿರುವುದರಿಂದ ಪದೇ ಪದೇ ಇಂತಹ ಘಟನೆಗಳಾಗುವ ಸಂಭವವಿದ್ದು ಜೀವ ಹಾನಿಯಾಗುವ ಮುನ್ಸೂಚನೆಯಿರುವುದರಿಂದ ಸದರಿ ಕುಟುಂಬಗಳಿಗೆ ಜಿಲ್ಲಾಡಳಿತ ಪುನರ್‍ವಸತಿ ಕಲ್ಪಿಸಿ ಪರ್ಯಾಯ ಭೂಮಿಯನ್ನು ನೀಡಿ ಸರ್ಕಾರದ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡಬೇಕು ತುರ್ತಾಗಿ ನಗರ ಪರಿಮಿತಿಯಲ್ಲಿ ಕನಿಷ್ಠ 2 ಎಕರೆ ಭೂಮಿಯನ್ನು ಇಲ್ಲಿರುವ ಕುಟುಂಬಗಳ ಪುನರ್‍ವಸತಿಗೆ ಗುರುತಿಸಿ ಮಂಜೂರು ಮಾಡಿದರೆ 30ಕುಟುಂಬಗಳು ಸ್ಥಳಾಂತರಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಇದಕ್ಕೆ ಸ್ಥಳೀಯ ಜನರು ಒಪ್ಪಿ ಪುನರ್‍ವಸತಿ ಮಾಡುವಂತೆ ಕೋರಿರುತ್ತಾರೆ ಆದ್ದರಿಂದ ತುಮಕೂರು ಮಹಾನಗರ ಪಾಲಿಕೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ತುರ್ತು ಕ್ರಮವಹಿಸಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ರವರಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ವೈ.ಎಸ್ ಪಾಟೀಲ್ ಈಗಾಗಲೇ ತುಮಕೂರು ನಗರ ಬಾರಿ ಮಳೆಯಿಂದ ನೂರಾರು ಮನೆಗಳು ಬಿದ್ದಿವೆ ಜೀವ ಹಾನಿಯಾಗಿವೆ ಕೋಡಿಹಳ್ಳದಲ್ಲಿರುವ ಎಲ್ಲಾ ಮನೆಗಳು ಆವೃತವಾಗಿವೆ. ಇಂತಹ ಅಪಾಯಕಾರಿ ಸ್ಥಳಗಳಲ್ಲಿ ವಾಸ ಮಾಡುವ ಜನರ ಜೀವ ರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿಯು ಆಗಿದೆ ಉಸ್ತುವಾರಿ ಸಚಿವರು ಮತ್ತು ಶಾಸಕರು ಸ್ಥಳ ಪರಿಶೀಲಿಸಿದ್ದು ಇಲ್ಲಿ ವಾಸಿಸುವ ಜನರು ನಾವು ಪುನರ್ ವಸತಿಗೆ ಒಪ್ಪಿ ಲಿಖಿತ ಪತ್ರ ನೀಡಿದರೇ ಜಿಲ್ಲಾಡಳಿತದಿಂದ ಭೂಮಿ ಮಂಜೂರು ಮಾಡಿ ಪುನರ್‍ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಇದು ಮಧ್ಯಮ ಪ್ರಮಾಣದ ಮಳೆ ಇನ್ನೂ ಬಾರಿ ಮಳೆ ಬಂದರೆ ಬಫರ್‍ಜೋನ್‍ಗಳಲ್ಲಿ ವಾಸಮಾಡುವ ಕುಟುಂಬಗಳು ಬಹಳ ಹಾನಿಗೊಳಗಾಗಬೇಕಾಗುತ್ತದೆ ಆದ್ದರಿಂದ ಕೋಡಿಹಳ್ಳದ ಸ್ಲಂ ನಿವಾಸಿಗಳಿಗೆ ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ಉಪವಿಭಾಗಾಧಿಕಾರಿಯಾದ ಅಜಯ್ ವಿ ಇದ್ದರು ತುಮಕೂರು ಜಿಲ್ಲಾ ಕೊಳಗೇರಿ ಸಮಿತಿಯ ಕಾರ್ಯದರ್ಶಿ ಅರುಣ್, ಪದಾಧಿಕಾರಿಗಳಾದ ಶಂಕ್ರಯ್ಯ,ಮೋಹನ್,ರಂಗನಾಥ್, ತಿರುಮಲಯ್ಯ, ಕೋಡಿಹಳ್ಳ ಸ್ಲಂನ ಮುಖಂಡರಾದ ಹೊನ್ನಮ್ಮ,ಕೆಂಪಮ್ಮ, ಗಣೇಶ್, ವೆಂಕಟೇಶ್, ಗೋವಿಂದರಾಜ್ ಮುಂತಾದವರು ಪಾಲ್ಗೊಂಡಿದ್ದರು.

(Visited 5 times, 1 visits today)