ತುಮಕೂರು:


ನಗರದ ಹೃದಯ ಭಾಗದಲ್ಲಿರುವ 2 ಮತ್ತು 3ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಅಮಾನಿಕೆರೆ ಕೋಡಿಹಳ್ಳ ಸ್ಲಂ ನಿವಾಸಿಗಳು ಇತ್ತೀಚಿನ ಭಾರಿ ಮಳೆಗೆ ಜೀವನ ಅತಂತ್ರವಾಗಿದೆ ಸುಮಾರು 10 ದಿನಗಳ ಸತತ ಮಳೆಗೆ ಇಡೀ ಸ್ಲಂ ಜಲಾವೃತವಾಗಿ ಮನೆಯಲ್ಲಿದ್ದ ದಿನಸಿ. ಬಟ್ಟೆಗಳು, ಹೊದಿಕೆಗಳು, ಜೀವನ ನಡೆಸುವುದಕ್ಕಾಗಿ ಕೂಡಿಟ್ಟಿದ್ದ ಮನೆಯ ಸಾಮಗ್ರಿಗಳು ಎಲ್ಲವೂ ಮಳೆ ನೀರಿಂದ ಹಾಳಾಗಿದ್ದು ಜನರ ಜೀವನ ಸುಧಾರಣೆಯೇ ಕಷ್ಟಸಾಧ್ಯವಾಗಿದೆ.
ಇನ್ನೂ ಇಲ್ಲಿನ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬಳಸುವ ಪುಸ್ತಿಕೆಗಳು ಹಾಳಾಗಿ ಬಿಸಲು ಕಾಯಿದು ಒಣಗಿಸುವ ವಾತವರಣ ಸೃಷ್ಠಿಯಾಗಿ 15 ದಿನಗಳೇ ಕಳೆದವು, ಜನರ ನೋವಿಗೆ ಸ್ಪಂದಿಸಿ ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು ಪುನರ್ ವಸತಿಗೊಳಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಆದರೆ ತಾತ್ಕಾಲಿಕವಾಗಿ ಬದುಕು ಕಟ್ಟಿಕೊಂಡಿದ್ದ ಇಲ್ಲಿನ 30 ಕುಟುಂಬಗಳು ನಿಯಮಾನುಸಾರವೇ ವಿದ್ಯುತ್ ಮೀಟರ್ ಪಡೆದು ಬಿಲ್‍ಗಳ ಸಂದಾಯವು ಮಾಡುತ್ತಿದ್ದರು ಇತ್ತಿಚಿನ ಮಳೆ ಬಂದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವಿದ್ಯಾರ್ಥಿಗಳ, ವಯೋವೃದ್ಧರ, ಮಹಿಳೆಯರ ಜೀವನ ನಿರ್ವಣೆಯನ್ನು ಅತಂತ್ರಗೊಳಿಸಲಾಗಿದೆ
ಆಡಳಿತ ವ್ಯವಸ್ಥೆ ಇಂತಹ ಕುಟುಂಬಗಳ ನೆರವಿಗೆ ಮತ್ತೊಷ್ಟು ಬರೆ ಎಳೆಯುವ ಕೆಲಸ ಮಾಡುತ್ತಿದೆ. ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರ್ಯಾಯ ಕ್ರಮ ಕೈಗೊಳ್ಳದೇ ವಿದ್ಯುತ್ ಕಡಿತಗೊಳಿಸಿ ಇಂತಹ ಸ್ಮಾರ್ಟ್ ಸಿಟಿ ನಗರದಲ್ಲಿ ಬದುಕು ಕಟ್ಟಿಕೊಂಡು ಬೆಳಕೇ ಇಲ್ಲದಂತೆ ಜೀವನ ಸಾಗಿಸುವುದಾದರು ಹೇಗೆ ಜಿಲ್ಲಾಡಳಿತ ಇಲ್ಲಿನ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸುವವರೆವಿಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಸಂಬಂಧಪಟ್ಟ ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕೆಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಒತ್ತಾಯಿಸುತ್ತದೆ.
ಕೋಡಿಹಳ್ಳ ಸ್ಲಂ ನಿವಾಸಿಗಳ ಹಿತರಕ್ಷಣಾ ಸಮಿತಿಯ ಗಣೇಶ್, ವೆಂಕಟೇಶ್, ಮಾತನಾಡಿ ಅತೀ ಹೆಚ್ಚಾಗಿ ಕೂಲಿ ಕೆಲಸ ಮಾಡಿಕೊಂಡು ಬದುಕುವ ಜನ ನಾವಿದ್ದೇವೆ ಮಳೆಯಿಂದ ಜೀವನ ಕಷ್ಟಸಾಧ್ಯವಾಗಿದೆ, ಇಂತಹ ಸಂಕಷ್ಟದ ಸ್ಥಿತಿಯಲ್ಲಿ ನಮ್ಮಗೆ ಯಾರು ಸಹಕಾರ ನೀಡಿಲ್ಲ ಇದ್ದಂತಹ ಎಲ್ಲಾ ದಿನಸಿ ಆಹಾರ ಪದಾರ್ಥಗಳು ನಾಶವಾಗಿದೆ ಹಲವಾರು ಮನೆಗಳು ಬಿದ್ದುಹೋಗಿವೆ. ಅವತ್ತು ದುಡಿದರೆ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಇಂತಹ ಸ್ಥಿತಿಯಲ್ಲಿ ಕನಿಷ್ಟ ಬೆಳಕು ಇಲ್ಲದೇ ಹೇಗೆ ಜೀವನ ಸಾಗಿಸಬೇಕು ಎಂದರು.
ನಂತರ ಪದಾಧಿಕಾರಿಗಳಾದ ಮಂಗಳಗೌರಿ ಮತ್ತು ಉಮಾದೇವಿ ಮಾತನಾಡಿ ಮಳೆಯಿಂದ ಇನ್ನು ನಾವು ರಕ್ಷಣೆಗೆ ಬಂದಿಲ್ಲ ಸತತ ಮಳೆಯಿಂದ ಕೊಚ್ಚಿಬಂದ ಕಸದರಾಶಿ ಇನ್ನೂ ನಮ್ಮ ಮನೆಗಳ ಮುಂದೆಯೆ ಇದ್ದು ಇನ್ನು ಮಳೆ ನೀರು ಎಲ್ಲೇಲ್ಲಿ ಹಳ್ಳಗಳಿದ್ದವೋ ಅಲ್ಲೆಲ್ಲಾ ನೀರು ನಿಂತು ಗಬ್ಬು ನಾರುವಂತಹ ವಾತವರಣ ಸೃಷ್ಠಿಯಾಗಿದೆ.
ಇನ್ನೂ ಹಾವುಗಳ ಕಾಟ, ಸೊಳ್ಳೆಗಳಂತು ಹಗಲಿಗಿಂತ ಸಂಜೆ ಆದ ತಕ್ಷಣ ತುಂಬಿಕೊಳ್ಳುತ್ತವೆ ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಹಿರಿಯರು ಹೇಗೆ ಜೀವನ ಸಾಗಿಸಬೇಕು ದಯವಿಟ್ಟು ಸಂಬಂಧಪಟ್ಟ ವಿದ್ಯುತ್ ಇಲಾಖೆಗೆ ಮಾನ್ಯ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ನಮಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಮತ್ತು ಮಹಾನಗರ ಪಾಲಿಕೆಯಿಂದ ಸ್ವಚ್ಚತೆಗೊಳಿಸಲು ಸೂಚಿಸಬೇಕೆಂದರು
ಈ ಸಂದರ್ಭದಲ್ಲಿ ಕೊಳಗೇರಿ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷರಾದ ಸಂಕರಯ್ಯ, ಕೋಡಿಹಳ್ಳ ಸ್ಲಂ ಮುಖಂಡರಾದ ಅಶ್ವತ್, ಮಂಜುನಾಥ್, ಲಿಂಗರಾಜು, ಗೋವಿಂದರಾಜ್, ಮಂಗಳಗೌರಿ, ಉಮಾದೇವಿ, ಜಯಮ್ಮ, ಶ್ವೇತಾ, ನಳಿನಕುಮಾರಿ ಮುಂತಾದವರು ಪಾಳ್ಗೊಂಡಿದ್ದರು.

(Visited 2 times, 1 visits today)