ತುಮಕೂರು:


ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ನಿರ್ಮಾಣಗೊಂಡಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಬಳಕೆ ಶುಲ್ಕ ನಿಗಧಿ ಮಾಡಿರುವ ಸರಕಾರದ ಕ್ರಮವನ್ನು ತುಮಕೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ರೀಡಾ ಪಟುಗಳು ತೀವ್ರವಾಗಿ ವಿರೋಧಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಎಂ.ಜಿ.ಕ್ರೀಡಾಂಗಣದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ ಕ್ರೀಡಾಪಟುಗಳು ಸರಕಾರದ ನಡೆಯನ್ನು ವಿರೋಧಿಸಿ ಕ್ರೀಡಾಂಗಣದ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ಶುಲ್ಕ ವಿರೋಧಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು
ಸರಕಾರದ ನಡೆಯನ್ನು ವಿರೋಧಿಸಿ ಮಾತನಾಡಿದ ಕ್ರೀಡಾ ಪೆÇ್ರೀತ್ಸಾಹಕ ಧನಿಯಕುಮಾರ್, ಇಂದು ಕ್ರೀಡಾ ಚಟುವಟಿಕೆಗಳೇ ಕಡಿಮೆಯಾಗಿ,ಕ್ರೀಡೆಗೆ ತಗುಲುವ ವೆಚ್ಚ ಭರಿಸುವುದು ಪೆÇೀಷಕರೀಗೆ ದೊಡ್ಡ ಸವಾಲಾಗಿರುವ ಸಂದರ್ಭದಲ್ಲಿ ತುಮಕೂರು ನಗರದಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆಂದು ಇರುವ ಜಾಗಕ್ಕು ಶುಲ್ಕ ನಿಗಧಿ ಮಾಡಿರುವುದು ಖಂಡನೀಯ.ಶುಲ್ಕ ನಿಗಧಿ ಸಂದರ್ಭದಲ್ಲಿ ಸ್ಥಳೀಯ ಕ್ರೀಡಾಪಟುಗಳನ್ನಾಗಲಿ, ಕ್ರೀಡಾ ಸಂಸ್ಥೆ ಗಳನ್ನಾಗಲಿ ಗಮನಕ್ಕೆ ತೆಗೆದುಕೊಂಡಿಲ್ಲ. ಏಕಾಎಕಿ ನಿರ್ಧಾರ ಖಂಡನೀಯ.ಕೂಡಲೇ ಸರಕಾರ ಸ್ಟೇಡಿಯಂ ಬಳಕೆಗೆ ವಿಧಿಸಿರುವ ಶುಲ್ಕವನ್ನು ಹಿಂಪಡೆಯಬೇಕು ಹಾಗು ಶೂಟಿಂಗ್ ಸೇರಿದಂತೆ ಎಲ್ಲಾ ಕ್ರೀಡೆಗಳಿಗೂ ಅಭ್ಯಾಸಕ್ಕು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು
ಕ್ರೀಡಾಪಟು ಹಾಗು ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಸರಕಾರಕ್ಕೆ ಒಬ್ಬನೇ ಒಬ್ಬ ಕ್ರೀಡಾಪಟುವನ್ನು ಹುಟ್ಟು ಹಾಕಲು ಸಾಧ್ಯವಾಗಿಲ್ಲ.ಕಷ್ಟಪಟ್ಟು ಕ್ಲಬ್‍ಗಳು ಕಟ್ಟಿದ ತಂಡಗಳ ಅಭ್ಯಾಸಕ್ಕು ಹಣ ನಿಗಧಿಪಡಿಸಿರುವುದು ಅತ್ಯಂತ ಖಂಡನೀಯ.ಸರಕಾರ ಶುಲ್ಕ ನಿಗಧಿ ಸಂದರ್ಭದಲ್ಲಿ ಕ್ರೀಡಾಪಟುಗಳನ್ನಾಗಲಿ,ಸ್ಥಳೀಯ ಜನಪ್ರತಿನಿಧಿಗಳನ್ನಾಗಲಿ ಸಂಪರ್ಕಿಸುವ ಕೆಲಸ ಮಾಡಿಲ್ಲ.ಕ್ರೀಡಾ ಇಲಾಖೆ ಏಕಾಎಕಿ ನಿರ್ಧಾರ ಕೈಗೊಂಡಿದೆ.ಇದಕ್ಕೆ ತುಮಕೂರು ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳ ವಿರೋಧವಿದೆ ಎಂದರು
ಹಳೆಯ ಕ್ರೀಡಾಂಗಣವನ್ನು ಒಡೆಯುವಾಗಲು ಇಲ್ಲಿ ಅಬ್ಯಾಸ ನಡೆಸುತ್ತಿದ್ದ ಕ್ರೀಡಾಪಟುಗಳಿಗೆ ಪಯಾರ್ಯ ವ್ಯವಸ್ಥೆ ಮಾಡದೆ ನಾಲ್ಕು ವರ್ಷ ಅಭ್ಯಾಸಕ್ಕಾಗಿ ಊರೆಲ್ಲಾ ಅಲೆಯುವಂತಹ ಸ್ಥಿತಿ ನಿರ್ಮಾಣ ಮಾಡಿದರು.ಅಲ್ಲದೆ ಸ್ಟೇಡಿಯಂ ನಿರ್ಮಾಣವೂ ವೈಜ್ಞಾನಿಕವಾಗಿಲ್ಲ.ಬೇಕಾಬಿಟ್ಟಿ ಕಟ್ಟಲಾಗಿದೆ. ಇದರ ನಡುವೆ ಶುಲ್ಕ ನಿಗಧಿ ಮಾಡಿ ಕ್ರೀಡಾಪಟುಗಳು ಸ್ಟೇಡಿಯಂ ಹತ್ತಿರ ಸುಳಿಯದಂತೆ ಮಾಡಲು ಮುಂದಾಗಿದೆ.ಇದು ಖಂಡನೀಯ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು.ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದೆಂದರು
ರೆಡ್ ಕ್ರಾಸ್ ರಾಷ್ಟ್ರೀಯ ಸಮಿತಿ ಸದಸ್ಯ ಹಾಗು ಪತ್ರಕರ್ತ ರಾದ ಎಸ್.ನಾಗಣ್ಷ ಮಾತನಾಡಿ, ಸರಕಾರಕ್ಕೆ ಸ್ಟೇಡಿಯಂ ನಿರ್ವಹಣೆಗೆ ಹಣದ ಕೊರತೆ ಇದ್ದರೆ ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಸಿಎಸ್‍ಆರ್ ಫಂಡ್ನ್ ಬಳಕೆ ಮಾಡಲು ಅವಕಾಶವಿದೆ. ಬೇರೆ ಮೂಲಗಳಿಂದ ಹಣ ಸಂಗ್ರಹಿಸಬುಹುದು.ಮೊದಲೇ ಕ್ರೀಡೆಗಳಿಗೆ ಯುವಕರು ಬರುವುದು ಕಷ್ಟ.ಇಂತಹ ಸಂದರ್ಭದಲ್ಲಿ ಸ್ಟೇಡಿಯಂ ಬಳಕೆಗೆ ಶುಲ್ಕ ನಿಗಧಿ ತರವಲ್ಲ.ಸರಕಾರ ಕೂಡಲೇ ಹಿಂಪಡೆಯಬೇಕು ಹಾಗು ಎಲ್ಲಾ ಕ್ರೀಡಾ ಚಟುವಟಿಕೆಗಳಿಗೂ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಹಿರಿಯ ಕ್ರೀಡಾಪಟು ಟಿ.ಕೆ.ಆನಂದ ಮಾತನಾಡಿ, ಸ್ವತಃ ಕ್ರೀಡಾಪಟುವಾಗಿ ಅಭ್ಯಾಸ ನಡೆಸುವುದು ಎಷ್ಟು ಕಷ್ಟ ಎಂಬುದು ತಿಳಿದಿದೆ.ಇಂದಿನ ಸೆಮಿಸ್ಟರ್ ಪದ್ದತಿಯಲ್ಲಿ ಮಕ್ಕಳು ಕ್ರೀಡಾ ಕ್ಷೇತ್ರ ಕ್ಕೆ ಬರುವುದೇ ಕಷ್ಟ ಅಂತಹದ್ದರಲ್ಲಿ ಶುಲ್ಕವೆಂದರೆ ಜಿಲ್ಲೆಯ ಕ್ರೀಡಾ ಚಟುವಟಿಕೆಯೇ ನಶಿಸಿ ಹೋಗಲಿದೆ.ಹಾಗಾಗಿ ಜಿಲ್ಲಾಡಳಿತ,ಜಿಲ್ಲೆಯ ಕ್ರೀಡಾಪಟುಗಳು ಒಗ್ಗೂಡಿ ಶುಲ್ಕ ನಿಗಧಿಯನ್ನು ರದ್ದು ಪಡಿಸಬೇಕೆಂದು ಸರಕಾರದೇಲೆ ಒತ್ತಡ ಹೇರಬೇಕಿದೆ ಎಂದರು
ಈ ವೇಳೆ ವಿವೇಕಾನಂದ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್, ಕ್ರೀಡಾ ತರಬೇತುದಾರ ಪ್ರದೀಪ್, ದೈಹಿಕ ಶಿಕ್ಷಕ ಹೊಸಳ್ಳಪ್ಪ, ಕ್ರೀಡಾಪಟು ಗಳಾದ ಹರೀಶ್ ಬಾಬು,ವಿನಯ್,ಬಾಲರಾಜು,ನರೇಶ್ ಕುಮಾರ್, ಮರಿತಿಮ್ಮಯ್ಯ,ಪ್ರಭಾಕರ್ ಆರ್ಚಾಯ,ರಮೇಶ್,ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

(Visited 3 times, 1 visits today)