ತುಮಕೂರು:

ಕರ್ನಾಟಕ ಪ್ರಸಿದ್ಧ ಮತ್ತು ಪ್ರಭಾವಶಾಲಿ ಮಠಗಳಲ್ಲಿ
ಒಂದಾಗಿರುವ ಶ್ರೀ ಮುರುಘಾಮಠದ ಶ್ರೀಗಳಾದ ಶಿವಮೂರ್ತಿ
ಶರಣರು ತಮ್ಮ ಕ್ರಾಂತಿಕಾರಿ ವಿಚಾರಧಾರೆಯಿಂದ, ವೈಜ್ಞಾನಿಕ
ಚಿಂತನೆಗಳಿಂದ ಮತ್ತು ಶೋಷಿತರ ಪರ ಕಾಳಜಿಯಿಂದಾಗಿ
ನಾಡಿನಾದ್ಯಂತ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಹೀಗಿರುವಾಗ
ಶ್ರೀಗಳ ವಿರುದ್ಧ ಕೇಳಿ ಬಂದಿರುವ ಇಂತಹ ಭೀಕರ
ಆರೋಪದಿಂದ ಕನ್ನಡನಾಡು ಬೆಚ್ಚಿಬಿದ್ದಿದೆ.
ಶ್ರೀಗಳ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ
ಮಾಡುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ
ಲೈಂಗಿಕ ದೌರ್ಜನ್ಯ ಮಾಡಿದ ಆರೋಪಕ್ಕೆ ಒಳಗಾಗಿರುವ
ಶ್ರೀಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಕೇಸು
ದಾಖಲಾಗಿರುವುದು ಎಲ್ಲರಿಗೂ ತಿಳಿದಿದೆ. ಅಲ್ಲದೆ ಸಂತ್ರಸ್ತ
ವಿದ್ಯಾರ್ಥಿನಿಯರ ಪೈಕಿ ಒಬ್ಬ ಪರಿಶಿಷ್ಟಜಾತಿಯ ವಿದ್ಯಾರ್ಥಿನಿಯೂ
ಇರುವುದರಿಂದಾಗಿ ಶ್ರೀಗಳ ವಿರುದ್ಧ ಎಸ್.ಸಿ. ಮತ್ತು ಎಸ್.ಟಿ.
ದೌರ್ಜನ್ಯ ತಡೆ ಕಾಯ್ದೆ ಅನ್ವಯ ದೂರು ದಾಖಲಾಗಿದೆ. ಈ
ಎರಡು ಕಾಯ್ದೆಗಳಡಿ ಎಫ್.ಐ.ಆರ್. ದಾಖಲಿಸಿದ ಕೂಡಲೇ
ಆರೋಪಿಗಳನ್ನು ಬಂಧಿಸಬೇಕಾಗಿದ್ದ ಪೊಲೀಸರು ಒಂದು
ವಾರ ವಿಳಂಬ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ
ಒಂದು ಕೆಟ್ಟ ಪರಂಪರೆಗೆ ನಾಂದಿ ಹಾಡಿದ್ದಾರೆ. ಈ ಪ್ರಕರಣದಲ್ಲಿ
ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರ ತೋರಿದ ವಿಳಂಬ
ಧೋರಣೆಯಿಂದಾಗಿ ತನಿಖೆಯು ನಿಷ್ಪಕ್ಷಪಾತವಾಗಿ
ನಡೆಯುವ ಬಗ್ಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬಹಳ
ಅಘಾತಕಾರಿ ವಿಷಯವೇನೆಂದರೆ, ರಾಜ್ಯದ ಗೃಹ ಮಂತ್ರಿಗಳು
ಶ್ರೀಗಳ ಪರ ವಕಾಲತ್ತು ವಹಿಸಿ ಶ್ರೀಗಳು ನಿರಪರಾಧಿ
ಎಂಬಂತೆ ತನಿಖೆಯ ಪ್ರಾರಂಭ ಹಂತದಲ್ಲೇ ಹೇಳಿರುವುದು
ತನಿಖೆಯನ್ನು ದಿಕ್ಕುತಪ್ಪಿಸುವ ಕ್ರಮವಾಗಿದೆ. ಇವರ
ವರ್ತನೆಯು ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ.
ಕಾನೂನಿನ ಮುಂದೆ ಎಲ್ಲರೂ ಸರಿ ಸಮಾನರು ಎಂದು
ಹೇಳುತ್ತಲೇ ಕೆಲವರು ಕಾನೂನಿಗಿಂತ ಮಿಗಿಲಾದವರು
ಎಂಬುವಂತಹ ಪಕ್ಷಪಾತ ಧೋರಣೆಯು ಇದಾಗಿದೆ. ಗೃಹ

ಸಚಿವರ ಈ ವರ್ತನೆಯನ್ನು ಬಿ.ಎಸ್.ಪಿ. ಯು ಉಗ್ರವಾಗಿ
ಖಂಡಿಸುತ್ತದೆ. ಆದ ಕಾರಣ ಆರೋಪಿಯು ಬಹಳ ಪ್ರಭಾವಶಾಲಿ
ಆಗಿರುವುದರಿಂದಾಗಿ ಅವರ ವಿರುದ್ಧ ದಾಖಲಾಗಿರುವ ಈ
ಪ್ರಕರಣದ ವಿಚಾರಣೆಯನ್ನು ತಮಿಳುನಾಡು ಅಥವಾ
ಕೇರಳ ರಾಜ್ಯಕ್ಕೆ ವರ್ಗಾಯಿಸಬೇಕೆಂದು ನಾವು
ಒತ್ತಾಯಿಸುತ್ತೇವೆ. ಅಲ್ಲದೆ ಸಂತ್ರಸ್ತರಿಗೆ ಸೂಕ್ತ ಭದ್ರತೆ
ನೀಡಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ. ಈ
ಪತ್ರಿಕಾ ಗೋಷ್ಠಿಯಲ್ಲಿ ಎಂ. ಗುರುಮೂರ್ತಿ ರಾಜ್ಯ ಪ್ರಧಾನ
ಕಾರ್ಯದರ್ಶಿ, ಬಹುಜನ ಸಮಾಜ ಪಕ್ಷ, ಕರ್ನಾಟಕ, ಉಸ್ತುವಾರಿ
ತುಮಕೂರು ಜಿಲ್ಲೆ, ಶೂಲಯ್ಯ ರಾಜ್ಯ ಕಾರ್ಯದರ್ಶಿ,
ರುದ್ರಯ್ಯ ಜಿಲ್ಲಾ ಉಸ್ತುವಾರಿ, ಜೆ.ಎನ್. ರಾಜಸಿಂಹ ಜಿಲ್ಲಾಧ್ಯಕ್ಷರು,
ರಂಗಧಾಮಯ್ಯ ಜೆ.ಸಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿ.ಎಸ್.ಪಿ.
ಶಿವಣ್ಣ ಜಿಲ್ಲಾ ಕಾರ್ಯದರ್ಶಿ, ಪ್ರಕಾಶ್ ಜಿಲ್ಲಾ ಕಾರ್ಯದರ್ಶಿ,
ಹನುಮಂತರಾಯಪ್ಪ ಪಾವಗಡ ತಾಲ್ಲೂಕು ಅಧ್ಯಕ್ಷರು,
ನಾಗೇಂದ್ರಪ್ಪ ಜಿಲ್ಲಾ ಕಾರ್ಯದರ್ಶಿ, ವೀರಕ್ಯಾತಯ್ಯ ಶಿರಾ
ತಾಲ್ಲೂಕು ಅಧ್ಯಕ್ಷರು, ಉಮೇಶ್ ಕುಣಿಗಲ್ ತಾಲ್ಲೂಕು
ಅಧ್ಯಕ್ಷರು, ರಾಮಕೃಷ್ಣ ಕುಣಿಗಲ್ ಉಸ್ತುವಾರಿಗಳು,
ಗೋಪಾಲ್ ಮಧುಗಿರಿ ತಾಲ್ಲೂಕು ಅಧ್ಯಕ್ಷರು, ವೆಂಕಟರಮಣ
ಪಾವಗಡ ತಾಲ್ಲೂಕು ಪ್ರಧಾನ ಕಾರ್ಯದರ್ಶಿ, ಸಣ್ಣಭೂತಣ್ಣ
ಸಿರಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ, ಇನ್ನೂ
ಮುಂತಾದವರೂ ಇದ್ದರು.

(Visited 3 times, 1 visits today)