ಕೊರಟಗೆರೆ :

ಗುಡಿಸಲು ಮುಕ್ತ ಕೊರಟಗೆರೆ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಪ್ರಮುಖಗುರಿ.. ಕೊರಟಗೆರೆಯ 24ಗ್ರಾಪಂ ವ್ಯಾಪ್ತಿಯ 3669 ಜನರಿಗೆ ಮನೆಗಳ ಮಂಜೂರಾತ್ರಿ ಆದೇಶ ಪತ್ರ ನೀಡಿದ್ದೇನೆ. 10 ವಿವಿಧ ಸರಕಾರಿ ಇಲಾಖೆ ಯಿಂದ 5186ಜನ ಗ್ರಾಮೀಣ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ವಿತರಣೆ ಮಾಡಿದ್ದೇನೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೊರಟಗೆರೆ ಆಡಳಿತ, ತಾಪಂ, 24ಗ್ರಾಪಂ ಮತ್ತು ಪಂಚಾಯತ್‍ರಾಜ್ ಇಲಾಖೆ ಯಿಂದ ಶನಿವಾರ ಏರ್ಪಡಿಸ ಲಾಗಿದ್ದ ವಸತಿ ಯೋಜನೆಯ ಮನೆ ಮಂಜೂರಾತಿ ಪತ್ರ, ಸ್ತ್ರೀಶಕ್ತಿ ಸಂಘಗಳಿಗೆ ಸಿಐಎಫ್ ಸಾಲದಚೆಕ್ ಮತ್ತು ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೊರಟಗೆರೆಯ ಬಡಜನರಿಗೆ ದೇವರಾಜುಅರಸು ಯೋಜನೆಯಡಿ 770 ಮನೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್‍ಯೋಜನೆಯಡಿ 722ಮನೆ, ಬಸವ ವಸತಿ ಯೋಜನೆಯಡಿ 2177ಮನೆ ಸೇರಿ ಒಟ್ಟು ಕೊರಟಗೆರೆಗೆ 3669 ಮನೆಗಳು ಮಂಜೂರಾಗಿವೆ. ತೋಟಗಾರಿಕೆ-35, ಕಂದಾಯ ಇಲಾಖೆ-600, ಮೀನುಗಾರಿಕೆ-9, ರೇಷ್ಮೆ-12, ಅರಣ್ಯ ಇಲಾಖೆ-4, ಪಶು ಇಲಾಖೆ-46, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-20, ತಾಪಂ-4400, ಪಪಂ-50 ಮತ್ತು ಕೃಷಿ ಇಲಾಖೆ-10 ಸೇರಿಒಟ್ಟು 5186ಜನ ಪಲಾನುಭವಿಗಳಿಗೆ ಸರಕಾರದ ಸೌಲಭ್ಯ ವಿತರಿಸಿದ್ದೇನೆ ಎಂದರು.
ಕೊರಟಗೆರೆ ತಾಲೂಕಿನಲ್ಲಿ 965 ಸ್ವಸಹಾಯ ಸಂಘ ಮತ್ತು 114 ಒಕ್ಕೂಟಗಳಿವೆ. ಎನ್‍ಆರ್‍ಎಲ್‍ಎಂ ಯೋಜನೆಯಡಿ 2021-22ರಲ್ಲಿ 11486ಜನ ಮಹಿಳೆಯರಿಗೆ 4ಕೋಟಿ 59ಲಕ್ಷ ಅನುಧಾನ ವಿತರಣೆ, 571ಜನರಿಗೆ ಪಿಂಚಣಿ ಸೌಲಭ್ಯ ಮತ್ತು 24ಜನರಿಗೆ ಮನೆಗಳ ಹಕ್ಕುಪತ್ರ ವಿತರಣೆ, ಮತ್ತು ಕೊಳಚೆ ನಿರ್ಮೂಲನೆ ಮಂಡಳಿಯಿಂದ ಕೊರಟಗೆರೆ ಪಟ್ಟಣದಜನತೆಗೆ575ಮನೆಗಳ ನಿರ್ಮಾಣಕ್ಕೆಅಡಿಗಲ್ಲು ಹಾಕಲಾಗಿದೆ. ಕೊರಟಗೆರೆಕ್ಷೇತ್ರದ ಸಮಗ್ರಅಭಿವೃದ್ದಿಗೆ ನಾನು ಹಗಲುರಾತ್ರಿದುಡಿಯುತ್ತೇನೆಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಅತಿಕ್‍ಪಾಷ, ತಾಪಂ ಆಡಳಿತಾಧಿಕಾರಿ ದೀಪಾಶ್ರೀ, ತಹಶಿಲ್ದಾರ್ ನಾಹೀದಾ ಜಮ್ ಜಮ್, ತಾಪಂ ಇಓ ಡಾ.ದೊಡ್ಡಸಿದ್ದಯ್ಯ, ಪಪಂ ಮುಖ್ಯಾಧಿಕಾರಿ ಭಾಗ್ಯಮ್ಮ, ಕೃಷಿ ಇಲಾಖೆ ಅಧಿಕಾರಿ ನಾಗರಾಜು, ಅರಣ್ಯ ಇಲಾಖೆ ಸುರೇಶ್, ಸಿಡಿಪಿಓ ಅಂಬಿಕಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ತಾ.ಪಂ ಮಾಜಿ ಉಪಾಧ್ಯಕ್ಷರುಗಳಾದ ವೆಂಕಟಪ್ಪ, ನರಸಮ್ಮ, ಸೇರಿದಂತೆ 24ಗ್ರಾಪಂಗಳ ಪಿಡಿಓ ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

(Visited 1 times, 1 visits today)