ತುಮಕೂರು:


ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಕಾಮಗಾರಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗುದ್ದಲಿ ಪೂಜೆ ನೆರವೇರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ಶೆಟ್ಟಿಹಳ್ಳಿ ಅಂಡರ್ ಪಾಸ್ ನಿಂದ ಶೆಟ್ಟಿಹಳ್ಳಿ ರಿಂಗ್ ರಸ್ತೆ ಸರ್ಕಲ್ ವರೆವಿಗೂ ಲೋಕೋಪಯೋಗಿ ಇಲಾಖೆಯಿಂದ 2ಕೋಟಿ ಅನುದಾನದಲ್ಲಿ 1.5ಕಿ.ಮೀ ಉದ್ದದ ರಸ್ತೆ ಕಾಮಗಾರಿ ಮಾಡಲಾಗುವುದು,ರಸ್ತೆಯ ಕೆಲವು ಭಾಗಗಳಲ್ಲಿ ರಸ್ತೆಯು ಕಿತ್ತುಹೋಗಿದ್ದು ಇದರಿಂದ ಸಾರ್ವಜನಿಕರು ನನಗೆ ಪ್ರತಿದಿನ ದೂರು ನೀಡಿದ್ದರು,ಈವರೆವಿಗೂ ಅನುದಾನದ ಕೊರತೆ ಇತ್ತು ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಅನುದಾನ ನೀಡಿದ್ದು ಈ ಅನುದಾನದಲ್ಲಿ ಶೆಟ್ಟಿಹಳ್ಳಿ ಮುಖ್ಯರಸ್ತೆಗೆ ಹೊಸ ರಸ್ತೆ ನಿರ್ಮಾಣ ಮಾಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಜನರು ಓಡಾಡುತ್ತಿದ್ದು ಉತ್ತಮ ಸಂಪರ್ಕರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿದ್ದು ಈ ಭಾಗದ ಜನರಿಗೆ ಅನುಕೂಲವಾಗಲಿದೆ,31ನೇ ವಾರ್ಡಿನ ವಿವಿಧ ರಸ್ತೆಗಳಿಗೆ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ.ಅನುದಾನ ನೀಡಲಿದ್ದೇವೆ,ಸಾಬರ ಪಾಳ್ಯದ ರಸ್ತೆ ಮುಂಬರುವ ದಿನಗಳಲ್ಲಿ ಶೀಘ್ರವೇ ಕಾಮಗಾರಿ ಮುಗಿಸಲಿದ್ದೇವೆ ಅದಕ್ಕೆ 4.5ಕೋಟಿ ಅನುದಾನ ಇದೆ ಎಂದರು.
31ನೇ ವಾರ್ಡಿನ ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್ ಮಾತನಾಡಿ ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವ ಜನರು ನನಗೆ ಸಮಸ್ಯೆ ಬಗ್ಗೆ ವಿವರಿಸುತ್ತಿದ್ದರು,ಹೆಚ್.ಎಂ.ಎಸ್. ಎದುರು ಮತ್ತು ಕೇಶವ ಟೀ ಸ್ಟಾಲ್ ಎದುರು ಮುಖ್ಯರಸ್ತೆ ಹಳ್ಳ ಬಿದ್ದಿದ್ದು ಇಲ್ಲಿ ಮಳೆ ಬಂದರೆ ನೀರು ತುಂಬಿ ಅಪಘಾತವಾಗುವ ಸಂಭವವಿತ್ತು ಇದನ್ನು ಮಾನ್ಯ ಶಾಸಕರಿಗೆ ವಿವರಿಸಿದಾಗ ತಕ್ಷಣವೇ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಿದ್ದು ಇದನ್ನು ಎರಡು ತಿಂಗಳೊಳಗೆ ಕಾಮಗಾರಿ ಮುಗಿಸಲಾಗುವುದು ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸಿ ಸಾರ್ವಜನಿಕರ ಓಡಾಟಕ್ಕೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ವಿಜಯ್ ಕುಮಾರ್,ಎಇ ಸಿದ್ಧಪ್ಪ,ಪಾಲಿಕೆ ಸದಸ್ಯರಾದ ವಿಷ್ಣುವರ್ಧನ್,ಗಿರಿರಾಜ ಹೆಚ್.ಸಿ,ಕೇಶವಮೂರ್ತಿ, ಬಿ.ವಿ.ದ್ವಾರಕನಾಥ್, ಆರ್.ಎಸ್.ವೀರಪ್ಪದೇವರು,ಟಿ.ದಾಸಪ್ಪ,ಹನುಮಂತಪ್ಪ, ಪ್ರಕಾಶ್ ಭಾರದ್ವಾಜ್, ಮೋಹನ್ ಕುಮಾರ್.ಎನ್.ಎಂ,ಎಸ್.ಬಿ.ಐ.ಮೋಹನ್ ಕುಮಾರ್,ಶ್ರೀನಿವಾಸಮೂರ್ತಿ,ರಾಜಶೇಖರ್,ಬಿ.ಜಿ.ಕೃಷ್ಣಪ್ಪ ಮುಂತಾದವರು ಹಾಜರಿದ್ದರು.ಸಾರ್ವಜನಿಕರು ಮತ್ತು ನಾಗರೀಕ ಸಮಿತಿಯ ಪದಾಧಿಕಾರಿಗಳು ಶಾಸಕರಿಗೆ ಕಾಮಗಾರಿಗೆ ಅನುದಾನ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

(Visited 11 times, 1 visits today)