ಕೊರಟಗೆರೆ :


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಲೆಚಂದ್ರು ರವರು ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ ಪರಮೇಶ್ವರ್ ಅವರ ಸೇವೆಗಳು ಅಪಾರ. ಅವರು ಡಿಸಿಎಂ ಆಗಿದ್ದಾಗಿನಿಂದಲೂ ಇಲ್ಲಿಯವರೆಗೂ ಕೂಡ ಕ್ಷೇತ್ರದ ಜನತೆ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಅನೇಕ ಅನುದಾನಗಳನ್ನು ತಂದು ಕ್ಷೇತ್ರದ ಅಭಿವೃದ್ಧಿ ಪಡಿಸಿದ್ದಾರೆ. ಅಂತಹ ವ್ಯಕ್ತಿಯನ್ನು ನಾವು ಮತ್ತೊಮ್ಮೆ ಕೈಹಿಡಿಯಬೇಕಾದ್ದು ನಮ್ಮ ಕರ್ತವ್ಯ. ಅವರಿಗೆ ಯಾವುದೇ ಜಾತಿ ಭೇದವಿಲ್ಲ. ಎಲ್ಲಾ ಜನಾಂಗದವರು ನಮ್ಮವರೇ ಎಂದು ಕ್ಷೇತ್ರದ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ ಎಂದು ವಾಲೆಚಂದ್ರು ತಿಳಿಸಿದರು.
ಡಾ.ಜಿ ಪರಮೇಶ್ವರ್ ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವುದು ಕೊರಟಗೆರೆ ಕ್ಷೇತ್ರದ ಎಲ್ಲಾ ಜನಾಂಗದ ಜನರ ಆಶಯ. ಅದರಂತೆ ಅವರು ಗೆಲ್ಲುವುದು ನಿಶ್ಚಯ. ಸಿಎಂ ಪಟ್ಟಕ್ಕೆ ಏರುತ್ತಾರೋ ಇಲ್ಲವೋ.. ಅದು ದೇವರಿಗೆ ಬಿಟ್ಟಿದ್ದು. ಸಚಿವರಂತೂ ಆಗೋದು ನಿಶ್ಚಯ. ಇದು ಕೊರಟಗೆರೆ ಕ್ಷೇತ್ರದ ಜನತೆಯ ಆಶಯ.
ನಾನು ಕ್ಷೇತ್ರದ ಪ್ರತಿ ಗ್ರಾಮಕ್ಕೂ ಪ್ರತಿ ಮನೆಗೂ ಭೇಟಿ ನೀಡಿದ್ದೇನೆ. ಎಲ್ಲರ ಮನೆಯಲ್ಲಿ ಪ್ರತಿಯೊಬ್ಬರ ಬಾಯಲ್ಲಿ ಬರುವುದು ಡಾ.ಜಿ ಪರಮೇಶ್ವರ್ ಅವರ ಹೆಸರೇ. ಖಂಡಿತವಾಗಿಯೂ ಅವರು ಕ್ಷೇತ್ರದಲ್ಲಿ ಈಗಾಗಲೇ ಕೆಲವು ಸೌಕರ್ಯಗಳನ್ನು ಒದಗಿಸಿದ್ದಾರೆ. ಇನ್ನೂ ಕ್ಷೇತ್ರಕ್ಕೆ ಹಲವು ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಸೌಕರ್ಯಗಳನ್ನು ಕ್ಷೇತ್ರಕ್ಕೆ ಒದಗಿಸುವುದು ಅವರ ಗುರಿಯಾಗಿದೆ. ಆದ್ದರಿಂದ ಕ್ಷೇತ್ರದ ಜನತೆ ಅವರನ್ನು ಗೆಲ್ಲಿಸುವುದು ಬಹಳ ಮುಖ್ಯವಾಗಿದೆ. ಕ್ಷೇತ್ರದ ಜನರು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆಯೂ ನಮಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಿವರಾಮಣ್ಣ, ಶಿವಕುಮಾರ್, ಹರೀಶ್, ನಾಗೇಶ್ ಸೇರಿದಂತೆ ಇತರರು ಇದ್ದರು.
ದಲಿತರು, ಹಿಂದುಳಿದ ವರ್ಗಗಳ ಅಭಿವೃದ್ಧಿಯೇ ನನ್ನ ಉದ್ದೇಶ ಎಂದು ಸದಾ ಕ್ಷೇತ್ರದ ಜನರ ಬಗ್ಗೆ ಆಲೋಚಿಸುವ ಇಂತಹ ನಾಯಕರು ತೀರಾ ವಿರಳ. ಕ್ಷೇತ್ರದಲ್ಲಿ ಪರಮೇಶ್ವರ್‍ರವರು ಮುಂದಿನ ಬಾರಿ ಗೆಲ್ಲುವುದು ಖಚಿತ.

(Visited 7 times, 1 visits today)