ತುರುವೇಕೆರೆ :


ಹಿಂದೂ ದೇವಾಲಯಗಳ ಸಮುಚ್ಚಯದ ಆವರಣದಲ್ಲಿ ಕೆಲ ಮುಸ್ಲಿಂ ಯುವಕರು ದರ್ಗಾ ನಿರ್ಮಿಸಲು ಮುಂದಾದಾಗ ಗ್ರಾಮಸ್ಥರು ವಿರೊಧಿಸುವ ಮೂಲಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ತುರುವೇಕೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ತಾವರೆಕೆರೆ ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಚೌಡೇಶ್ವರಿದೇವಿ, ಚಿಕ್ಕಮ್ಮದೇವಿ, ಆಂಜನೇಯಸ್ವಾಮಿ, ತುಳಸಮ್ಮ ದೇವಿಯ ಹಿಂದೂ ದೇವಾಲಯಗಳಿದ್ದು, ದೇವಾಲಯ ಆವರಣದಲ್ಲಿನ ಖಾಲಿ ಜಾಗದಲ್ಲಿ ರಾತ್ರೊ ರಾತ್ರಿ ದರ್ಗಾ ನಿರ್ಮಿಸಲು ಮಸ್ಲಿಂ ಯುವಕರು ಮುಂದಾದಾಗ ಇದನ್ನು ಕಂಡ ಗ್ರಾಮಸ್ಥರು ಯಾವದೇ ಕಾರಣಕ್ಕೂ ದೇವಗಳ ಜಾಗದಲ್ಲಿ ದರ್ಗಾ ನಿರ್ಮಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಇದನ್ನು ವಿರೋಧಿಸಿದ ಮುಸ್ಲಿಂ ಯುವಕರು ನಾವು ದರ್ಗಾ ನಿರ್ಮಿಸಿಯೇ ತೀರುತ್ತೇವೆಂದು ಮುಂದಾದಾಗ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ಗ್ರಾಮದ ಮುಖಂಡ ಬೋರೆಗೌಡ ಮಾತನಾಡಿ ಬಹುಸಂಖ್ಯಾತ ಹಿಂದುಗಳ ಮೇಲೇಯೇ ದಬ್ಬಾಳಿಕೆಯ ಪ್ರವೃತ್ತಿ ಮುಂದುವರೆಸುತ್ತಿರುವ ಮುಸ್ಲಿಂ ಯುವಕರ ದೌರ್ಜನ್ಯ ಖಂಡನೀಯ ಪುರಾತನ ಕಾಲದಿಂದಲೂ ಇಲ್ಲಿನ ಹಿಂದೂ ದೇವಾಲಯಗಳಿವೆ ಹಾಗೂ ವರ್ಷಕ್ಕೊಮ್ಮೆ ಅದ್ದೂರಿ ಜಾತ್ರ ಮಹೋತ್ಸವವನ್ನು ಸುತ್ತಲಿನ ಹತ್ತು ಹಳ್ಳಿ ಗ್ರಾಮಸ್ಥರು ಎಲ್ಲರೂ ಸೇರಿ ಮಾಡುತ್ತೇವೆ ಆದರೆ ಅರಳೀಕಟ್ಟೆ ಹಾಗೂ ನವಗ್ರಹ ದೇವಾಲಯದ ಮದ್ಯೆ ಏಕಾ ಏಕಿ ಗ್ರಾಮಸ್ಥರಿಗೆ ಗೊತ್ತಿಲ್ಲದೆ ರಾತ್ರೊ ರಾತ್ರಿ ದರ್ಗಾ ನಿರ್ಮಿಸಲು ಮುಂದಾಗಿರುವ ಮುಸ್ಲಿಂ ಯುವಕರಾದ ಫೈರೋಜ್, ಇಮ್ರಾನ್, ಫಾರೂಕ್, ನಡೆ ಖಂಡನೀಯವಾಗಿದ್ದೂ, ಕೂಡಲೇ ತಾಲ್ಲೂಕು ಆಡಳಿತ ಮದ್ಯಪ್ರವೇಶಿಸಿ ದರ್ಗಾ ನಿರ್ಮಿಸಲು ಅನುಮತಿ ನೀಡಬಾರದು ಹಾಗೂ ಹಿಂದೂ-ಮುಸ್ಲಿಂ ಬಾಂದ್ಯವ್ಯಕ್ಕೆ ಕೊಳ್ಳಿ ಹಿಡುತ್ತಿರುವ ಯುವಕರನ್ನು ಕಾನೂನಾತ್ಮಕವಾಗಿ ಭಂದಿಸಬೇಕು ಇಲ್ಲದಿದ್ದರೆ ಸಹಸ್ರಾರು ಹಿಂದೂ ಭಾಂದವರು ಸೇರಿ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮದ ಮುಖಂಡ ಕೃಷ್ಣಮೂರ್ತಿ ಮಾತನಾಡಿ ಗ್ರಾಮದಲ್ಲಿ ಸಾಮರಸ್ಯದಿಂದ ಕೂಡಿರುವ ನಮ್ಮಗಳ ಮದ್ಯ ಕೆಲ ಯುವಕರಿಂದ ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದೆ ದರ್ಗಾ ನಿರ್ಮಿಸಲು ನಮಗೆ ವಿರೋಧವಿಲ್ಲ ಆದರೆ ದೇವಾಲಯಗಳ ಆವರಣದಲ್ಲಿ ದರ್ಗಾ ಬೇಡ ಇದು ಹಿಂದುಗಳ ಭಾವನೆಗೆ ದಕ್ಕೆ ತರುವ ವಿಚಾರವಾಗಿದೆ, ದರ್ಗಾ ನಿರ್ಮಿಸಲು ಮುಂದಾಗಿರುವ ಯುವಕರು ತಮ್ಮ ಚಿಂತನೆಯನ್ನು ಕೈಬಿಡಲಿ ಎಂದರು.
ಸ್ಥಳಕ್ಕೆ ಆಗಮಿಸಿದ ಲೋಕಮ್ಮನಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಶಾರದಮ್ಮ ಮಾತನಾಡಿ ದರ್ಗಾ ನಿರ್ಮಿಸಲು ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ ಏಕಾಏಕಿ ಕಡ್ಡಡಕ್ಕೆ ಪಾಯಾ ತಗೆದಿರುವುದು ಗಮನಕ್ಕೆ ಬಂದಿದ್ದು ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವವರಿಗೆ ನೋಟೀಸ್ ನೀಡಲಾಗುವುದು ಹಾಗೂ ಇದು ಸೂಕ್ಷ್ಮ ವಿಚಾರವಾಗಿದ್ದು ಯಥಾಸ್ಥಿತಿ ಕಾಪಾಡುವ ನಿಟ್ಟಿನಲ್ಲಿ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗುವುದು ಎಂದರು.
ಗ್ರಾಮಸ್ಥರುಗಳಾದ ಎಸ್.ಕೃಷ್ಣಪ್ಪ, ಶ್ರೀನಿವಾಸ್, ಚೌಡೇಗೌಡ, ಗಂಗಣ್ಣ, ಕುಮಾರ್, ಬಾಬಣ್ಣ, ಟಿ.ಡಿ.ಯೋಗೀಶ್, ಗಂಗಾಧರ್, ಉಮೇಶ್, ಇತರರು ಇದ್ದರು.

(Visited 1 times, 1 visits today)