ತುಮಕೂರು


ದಕ್ಷಿಣ ಕನ್ನಡ ಮಿತ್ರ ವೃಂದ (ರಿ) ತುಮಕೂರು ಇವರ ವತಿಯಿಂದ ಎಂ.ಜಿ.ರಸ್ತೆಯ ಶ್ರೀಕೃಷ್ಣ ಮಿನಿಹಾಲ್ ನಲ್ಲಿ ಸದಸ್ಯರು ಮಕ್ಕಳಿಂದ ಶ್ರೀ ಕೃಷ್ಣಾ ರಾಧೆ ವೇಷಭೂಷಣ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆಯಿತು.
ಈ ಶುಭ ಸಂದರ್ಭದ ಸಂಸ್ಕೃತಿಕ ಕಾರ್ಯಕ್ರಮದ ಸಭೆಯ ಉದ್ಘಾಟನೆಗೆ ಆಗಮಿಸಿದ ಬಿ. ಜೋತಿ ಗಣೇಶ್ ರವರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿದಾನಂದರವರು ಸ್ಪೂರ್ತಿ ಡೆವಲಪರ್ಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ದಯಾಶೀಲರವರು ದಕ್ಷಿಣ ಕನ್ನಡ ಮಿತ್ರ ವೃಂದದ ಅಧ್ಯಕ್ಷರಾದ ಶ್ರೀಯುತ ಅಮರನಾಥ ಶೆಟ್ಟಿ ಕೆಂಜೂರು ಮನೆರವರು, ಕಾರ್ಯದರ್ಶಿಯವರಾದ ವೆಂಕಟೇಶ್ ಕಾರಂತ್, ಉಪಾಧ್ಯಕ್ಷರಾದ ಸುಧೀರ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿಯರಾದ ಜಯ ಪೂಜಾರಿ, ಖಜಾಂಚಿ ಅವರದ ಭಾಸ್ಕರ್ ಅಡಿಗ ರವರು ಹಾಗೂ ಎಲ್ಲಾ ನಿರ್ದೇಶಕರು ಹಾಜರಿದ್ದರು.
ಪ್ರತಿಭಾ ಪುರಸ್ಕಾರವಾಗಿ ಸುಮಾರು 20 ಜನರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾಧಾಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಮಾರು 30 ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಗಿತ್ತು. ಉದ್ಘಾಟನೆ ಆಗಮಿಸಿದ ಶಾಸಕರು ನಮಗೆ ದಕ್ಷಿಣ ಕನ್ನಡ ಅಧ್ಯಕ್ಷರು ನಿವೇಶನದ ಬಗ್ಗೆ ಕೇಳಿಕೊಂಡಿದ್ದಾರೆ. ಅವರ ಜೊತೆ ಹಾಗೂ ನಿಮ್ಮೆಲ್ಲರ ಜೊತೆ ನಾವಿದ್ದೇವೆ ಆದಷ್ಟು ಬೇಗ ದಕ್ಷಿಣ ಕನ್ನಡ ಮಿತ್ರ ವೃಂದಕ್ಕೆ ನನ್ನ ಕಡೆಯಿಂದ ಏನು ಕೆಲಸವಾದರು ಮಾಡಿಕೊಡುತ್ತೇನೆ ಎಂದು ತಿಳಿಸಿದರು.
ಹಾಗೆ ಟೂಡ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ್ ಅವರು ಮಾತನಾಡಿ ನಾನು ಸಹ ಸಂಘದ ಸದಸ್ಯ ನಮ್ಮ ಕೈಲಾದ ಕೆಲಸವನ್ನು ನಾನು ಮಾಡಿಕೊಡುತ್ತೇನೆ ನಿಮ್ಮನ್ನು ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು
ಸ್ಪೂರ್ತಿ ಡೆವಲಪಸ್ರ್ನ ಮಾಲೀಕರಾದ ಚಿದಾನಂದ ಅವರು ಮಾತನಾಡುತ್ತಾ ನಿವೇಶನಕ್ಕಾಗಿ ನಿಮ್ಮ ಅಧ್ಯಕ್ಷರು ನಮ್ಮಲ್ಲಿ ಮೊದಲೇ ಚರ್ಚಿಸಿದ್ದಾರೆ ಈಗ ಈ ಸಭೆಯಲ್ಲಿ ಶಾಸಕರು ಹಾಗೂ ಅಧ್ಯಕ್ಷರು ಇದ್ದಾರೆ ಅವರಿಬ್ಬರ ಜೊತೆ ಚರ್ಚಿಸಿ ನಿಮ್ಮ ಸಂಘಕ್ಕೆ ನಿವೇಶನದ ಅವಶ್ಯಕತೆ ಇರುವುದು ಎದ್ದು ಕಾಣಿಸುತ್ತಿದೆ ಅದನ್ನು ಹೇಗೆ ಮಾಡಿಕೊಂಡು ಹೋಗಬಹುದು ಎಂಬ ಬಗ್ಗೆ ಚರ್ಚಿಸಿ ನಿಮ್ಮ ಅಧ್ಯಕ್ಷರು ತಿಳಿಸುತ್ತೇನೆ ಯಾವಾಗಲೂ ನಿಮ್ಮ ಎಂದು ಹುರಿದುಂಬಿಸಿದರು.
ಧರ್ಮಸ್ಥಳ ಗ್ರಾಮ ಅಭಿವೃದ್ದಿ ಯೋಜನೆಯ ನಿರ್ದೇಶಕರಾದ ದಯಾಶೀಲವರು ಮಾತನಾಡಿ ಸಂಘವನ್ನ ಯಾಕೆ ಹುಟ್ಟು ಹಾಕಿದ್ದಾರೆ ಸಂಘವನ್ನ ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನು ಸಂಕ್ಷಿಪ್ತವಾಗಿ ಸದಸ್ಯರಿಗೆ ತಿಳಿಸಿದರು.
ಸಂಘದ ಅಧ್ಯಕ್ಷರು ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಘದ ಅಭಿವೃದ್ಧಿಗಾಗಿ ಶ್ರಮಿಸೋಣ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದು ತಾವೆಲ್ಲರೂ ಸಂಘವನ್ನು ಮುನ್ನಡೆಸಲು ಧೈರ್ಯ ತುಂಬಿ ಎಂದು ಸದಸ್ಯರಲ್ಲಿ ಮನವಿ ಮಾಡಿಕೊಂಡರು
ನಿವೇಶನದ ಬಗ್ಗೆ ಮಾತನಾಡಿ ಇನ್ನು ಕೆಲವೇ ದಿನಗಳಲ್ಲಿ ಶ್ರೀ ಕೃಷ್ಣನ ಆಶೀರ್ವಾದದಂತೆ ಸಂಘದ
ಹೆಸರಿನಲ್ಲಿ ನಿವೇಶನ ಆಗಬಹುದು ಎಂಬ ಭರವಸೆಯನ್ನು ಸದಸ್ಯರಿಗೆ ತಿಳಿಸಿದರು.

(Visited 1 times, 1 visits today)