ತುಮಕೂರು


ತುಮಕೂರು ಜಿಲ್ಲಾ ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ವತಿಯಿಂದ ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಸಭಾಂಗಣದಲ್ಲಿ ಪ್ರೊ. ಕೆ.ಸಿ ಶಿವನಂಜಯ್ಯನವರ ನೆನಪಿನ ವಿಶೇಷ ಉಪನ್ಯಾಸ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತರಿಗೆ ಸನ್ಮಾನ ಸಮಾರಂಭದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ತುಮಕೂರು ಪ.ಪೂ. ಶಿಕ್ಷಣ ಇಲಾಖೆ, ಉಪನಿರ್ದೇಶಕರಾದ ಗಂಗಾಧರ್ ಉದ್ಘಾಟಿಸಿದರು. ತುಮಕೂರು ವಿಶ್ವವಿದ್ಯಾನಿಲಯ, ಮಾನ್ಯ ಕುಲಸಚಿವರಾದ ಪ್ರೊ. ಕೆ. ಶಿವಚಿತ್ತಪ್ಪನವರು ಭಾರತದ ಆರ್ಥಿಕತೆಯ ಮೇಲೆ ಕರೋನಾ ವೈರಸ್ ಪರಿಣಾಮದ ವಿಷಯದ ಬಗ್ಗೆ ಉಪನ್ಯಾಸ ನಡೆಸಿಕೊಟ್ಟರು. ತುಮಕೂರು ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಎಂ. ರಾಜಯ್ಯನವರು ಅಧ್ಯಕ್ಷತೆ ವಹಿಸಿದ್ದರು.
ತುಮಕೂರು ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ. ವೀರಭದ್ರಸ್ವಾಮಿ, ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಗೌರವಾಧ್ಯಕ್ಷರಾದ ಎಸ್. ಕುಮಾರಸ್ವಾಮಿ, ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಉಪಾಧ್ಯಕ್ಷರಾದ ಎಸ್. ಷಣ್ಮುಖ, ಪ್ರಾಚಾರ್ಯರಾದ ಎಂ.ಎಸ್. ಚಿದಾನಂದ್, ನಿವೃತ್ತ ಪ್ರಾಚಾರ್ಯರಾದ ಎಸ್. ರಾಜಣ್ಣ, ನೇರಳಾಪುರ ಪ್ರಾಚಾರ್ಯರಾದ ಜಗದೀಶ್ ಪ್ರಸಾದ್, ಪ್ರಾಚಾರ್ಯರಾದ ಎಸ್. ರಾಜ್‍ಕುಮಾರ್ ಇವರುಗಳು ಮುಖ್ಯ ಅತಿಥಿಗಳಾಗಿದ್ದರು. ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಎಸ್. ಬಸವರಾಜು, ಕಾರ್ಯದರ್ಶಿ ಡಾ. ಹೆಚ್.ಎಂ. ಸದಾಶಿವಯ್ಯ, ಖಜಾಂಚಿ ಶಾಂತರಾಜು ಹಾಗೂ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 2 times, 1 visits today)