ತುಮಕೂರು


ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ಶ್ರೀ ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ದುರ್ಬಳಕೆ ಮಾಡಿ ಸ್ಲಂಬೋರ್ಡ ಫಲಾನುಭವಿಗಳಿಗೆ ನೀಡಿದ್ದಾg.É ಇದು ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಗೆದ ದ್ರೋಹವಾಗಿದ್ದು ಇದರ ವಿರುದ್ದ ಇದೇ ಸೆಪ್ಟೆಂಬರ್ 22 ರಂದು ರಾಜ್ಯದ್ಯಾಂತ ನೈಜ ಕಟ್ಟಡ ಕಾರ್ಮಿಕರು ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
1996 ರಲ್ಲಿ ಜಾರಿಗೊಂಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾನೂನಿನ ಅಡಿಯಲ್ಲಿ ಕರ್ನಾಟಕದಲ್ಲಿ 2007 ರಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆದರೆ 2007 ರಿಂದ ಕಲ್ಯಾಣ ಮಂಡಳಿಯ ಪ್ರಮುಖ ಯೋಜನೆಯಾದ `ವಸತಿ ನಿರ್ಮಾಣಕ್ಕೆ ಸಾಲ ಅಥವಾ ಮುಗಂಡ ಹಣ ಪಾವತಿ ಯೋಜನೆ ಇದುವರೆಗೂ ಒಬ್ಬನೇ ಒಬ್ಬ ಕಟ್ಟಡ ಕಾರ್ಮಿಕನಿಗೂ ದೊರೆತಿಲ್ಲ. ಪರಿಸ್ಥಿತಿ ಹೀಗಿರುವಾಗ ಕಳೆದ ವರ್ಷದಿಂದ ವಸತಿ ಸಚಿವ ಶ್ರೀ ವಿ, ಸೋಮಣ್ಣ ಹಾಗೂ ಕಾರ್ಮಿಕ ಸಚಿವರ ಶ್ರೀ ಶಿವರಾಮ ಹೆಬ್ಬಾರ್ ಜತೆ ಸೇರಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ 76 ಕೋಟಿ ಹಣವನ್ನು `ಕೊಳಚೆ ನಿರ್ಮೂಲನಾ ಮಂಡಳಿ’ಯ 5129 `ಫಲಾನುಭವಿಗಳಿಗೆ’ ಕಬಳಿಸಿ ರಾಜ್ಯದಲ್ಲಿ ವಸತಿಗಾಗಿ ಹಂಬಲಿಸುತ್ತಿರುವ ಲಕ್ಷಾಂತರ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ.
ಕಟ್ಟಡ ಕಾರ್ಮಿಕ ಸಂಘಗಳು ಒಕ್ಕೂರಲಿನಿಂದ ವಿರೋಧಿಸಿದ್ದ ಕಾರಣ ಕಲ್ಯಾಣ ಮಂಡಳಿ ಸಭೆಯಲ್ಲಿ ಈ ಹಣ ಬಿಡುಗಡೆಯನ್ನು ತಡೆಹಿಡಿಯಲಾಗಿತ್ತು. ಆದರೆ ಈಗ ಏಕಾಏಕಿ ಕೊಳಚೆ ನಿರ್ಮೂಲನೆ ಮಂಡಳಿ ಮಾತ್ರವಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಸತಿ ಯೋಜನೆಯಡಿಯಲ್ಲಿ `ಫಲಾನುಭವಿ`ಗಳಾಗಿ ಆಯ್ಕೆಯಾದ ಎಲ್ಲರಿಗೂ ಕಲ್ಯಾಣ ಮಂಡಳಿಯಲ್ಲಿ ನಕಲಿ ಕಾರ್ಮಿಕರನ್ನು ಹೆಸರು ನೋಂದಾಯಿಸಿ ಇದರ ಲಾಭ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಮತ್ತು ಹಲವಾರು ಕಡೆಗಳಲ್ಲಿ ಕಾರ್ಮಿಕ ನಿರೀಕ್ಷಕರು ಪರಿಶೀಲನೆ ನಡೆಸದೇ ಅನುಮೋದನೆ ನೀಡುತ್ತಿರುವುದು ಅಥವಾ ಅನುಮೋದನೆ ನೀಡುವಂತೆ ಒತ್ತಾಯಗಳನ್ನು ಸ್ಥಳೀಯ ಶಾಸಕರು ಅವರ ಮೇಲೆ ಹೇರುತ್ತಿರುವ ಕಂಡು ಬಂದಿದೆ.
ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ಹಣವನ್ನು ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಅವರು ರೇಷನ್ ಕಿಟ್, ಟೂಲ್ ಕಿಟ್, ಆಂಬ್ಯೂಲೆನ್ಸ್, ದುಬಾರಿ ಕಾರು, ತಂತ್ರಾಂಶ ಖರೀದಿ, ಸುರಕ್ಷಾ ಕಿಟ್, ಮತ್ತು ಬೂಸ್ಟರ್ ಕಿಟ್‍ಗಳನ್ನು ಪಾರದರ್ಶಕತೆ ಕಾಪಾಡದೇ ಖರೀದಿಸಿ ನೂರಾರು ಕೋಟಿ ಭ್ರಷ್ಠಾಚಾರ ನಡೆಸಿದ್ದಾರೆ. ಇದಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕಾರ್ನಾಟಕ ಖರೀದಿಯಲ್ಲಿನ ಪಾರದರ್ಶಕ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ. ಇದು ಸುಪ್ರೀಂ ಕೋರ್ಟ್ ನಿರ್ದೇಶನ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ 2021 ಮಾರ್ಚ್‍ನಲ್ಲಿ ನೀಡಿರುವ ಸ್ಪಷ್ಟ ನಿರ್ದೇಶನದ ಉಲ್ಲಂಘಟನೆಯಾಗಿದೆ ಈ ಹಿನ್ನಲೆಯಲ್ಲಿ ಹಣ ನಕಲಿ ಫಲಾನುಭವಿಗಳ ಪಾಲಾಗದಂತೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಮಂಡಳಿಯೇ ಹೂಡಬೇಕು ಮತ್ತು ಇಂತಹ ನೊಂದಣಿಗೆ ಕಾರಣವಾದ ಕಾರ್ಮಿಕ ನಿರೀಕ್ಷಕರು ಡಿಇಓಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯನಾಗಿ ಐದು ವರ್ಷ ಪೂರೈಸಿದ ಸದಸ್ಯರಿಗೆ ಮಾತ್ರವೇ `ಮನೆ ನಿರ್ಮಾಣಕ್ಕೆ ಸಾಲ/ಸಹಾಯಧನ/ಮುಂಗಡ ಹಣ ಪಾವತಿ ಮಾಡುವ ಕ್ರಮ ಜಾರಿಗೆ, ಎಸ್‍ಎಸ್‍ಪಿ ಪೋರ್ಟ್‍ಲ್‍ನಲ್ಲಿ ಸಲ್ಲಿಸಿ ಬಾಕಿ ಇರುವ 60 ಸಾವಿರ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ ಹಣ ಜಮಾಮಾಡಬೇಕು ಹಾಗೂ 2022-23 ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕಾಗಿ ಎಸ್‍ಎಸ್‍ಪಿ ಪೋರ್ಟಲ್ ಮೂಲಕ ಅರ್ಜಿ ಸ್ವೀಕಾರ ಕೂಡಲೇ ಆರಂಭಿಸಬೇಕು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ನಾವು ಸಲ್ಲಿಸಲಾದ ಕೆಲ ಬದಲಾವಣೆ, ತಿದ್ದುಪಡಿಗಳನ್ನು ಅಳವಡಿಸಬೇಕು. ಮಂಡಳಿಯಿಂದ ಈಗ ಜಾರಿಯಲ್ಲಿರುವ `ಸಿಜಿಎಚ್ ಆಧಾರಿತ ವೈಧ್ಯಕೀಯ ಮರುಪಾವತಿ’ ಯೋಜನೆ ರದ್ದು ಮಾಡಿ ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ರಾಜ್ಯ ಸರ್ಕಾರದ `ಆರೋಗ್ಯ ಸಂಜೀವಿನಿ 2021′ ನಗದುರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸಬೇಕು ಮತ್ತು ಇತರೆ 13 ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯದಾದ್ಯಂತ ಸೆಪ್ಟೆಂಬರ್ 22 ನಡೆಯುವ ಪ್ರತಿಭಟನೆ “ನೈಜ ಕಟ್ಟಡ ಕಾರ್ಮಿಕರು” ಹೆಚ್ಚಿನ ಕಾರ್ಮಿಕರು ಬಾಗವಹಿಸಬೇಕೆಂದು ಜಿಲ್ಲಾಧ್ಯಕ್ಷ ಬಿ. ಉಮೇಶ, ಗೌರವಾಧ್ಯಕ್ಷರು ಟಿ.ಎಂ ಗೋವಿಂದರಾಜು ಜಿ.ಪ್ರ. ಕಾರ್ಯದರ್ಶಿ ಗಂಗಾಧರ್, ಖಜಾಂಚಿ ಇಬ್ರಾಹಿಂಖಲೀಲ್, ತಾ. ಅಧ್ಯಕ್ಷ ಶಂಕರಪ್ಪ, ತಾ. ಕಾರ್ಯದರ್ಶಿ ರವೀಶ್ ಆರ್ . ತಿಳಿಸಿದ್ದಾರೆ.

(Visited 1 times, 1 visits today)