ತುಮಕೂರು


ಯುವಜನಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮದೈಹಿಕಆರೋಗ್ಯ ಹಾಗೂ ಆರೋಗ್ಯಕರ ಮನಸ್ಥಿತಿ ಬೆಳೆಸಿಕೊಳ್ಳಬೇಕು.ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರಕ್ರೀಡೆಗೆ ಹೆಚ್ಚು ಒತ್ತು ನೀಡಿದ್ದು, ಇಂದು ನಮ್ಮ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆಎಂದುರಾಜ್ಯರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನಗರದ ಸರ್ಕಾರಿಜ್ಯೂನಿಯರ್‍ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದಕಬಡ್ಡಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಭವಿಷ್ಯರೂಪಿಸಬೇಕಾದಯುವಜನರುದೇಶಾಭಿಮಾನ ಬೆಳೆಸಿಕೊಂಡು ದೇಶವನ್ನು ಮುನ್ನಡೆಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು.ಇಂದು ಬಿಜೆಪಿ ಸರ್ಕಾರಕ್ರೀಡೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ.ಜನರಿಂದಕಣ್ಮರೆಯಾಗುತ್ತಿರುವ ದೇಸಿ ಕ್ರೀಡೆಗಳನ್ನು ಉಳಿಸಿ, ಬೆಳೆಸಬೇಕು. ಕಬಡ್ಡಿಯಂತಹಗ್ರಾಮೀಣ ದೇಸಿ ಕ್ರೀಡೆಗೆಒತ್ತು ನೀಡಬೇಕುಎಂದು ಹೇಳಿದರು.
ಬೆಳಿಗ್ಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಗಮಿಸಿ ಪಂದ್ಯಾವಳಿಗೆ ಶುಭಕೋರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕರವಿಶಂಕರ್, ಟೂಡಾಅಧ್ಯಕ್ಷಚಂದ್ರಶೇಖರ್, ಮಾಜಿಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಸದಸ್ಯ ಸತ್ಯಮಂಗಲ ಜಗದೀಶ್, ರೈತ ಮೋರ್ಚಾರಾಜ್ಯಉಪಾಧ್ಯಕ್ಷೆ ಮಂಜುಳ, ಜಿಲ್ಲಾ ಬಿಜೆಪಿ ರೈತ ಮೋರ್ಚಾಅಧ್ಯಕ್ಷ ಶಿವಶಂಕರ್ ಬಾಬು, ನಗರ ಪಾಲಿಕೆ ಸದಸ್ಯರಾದ ಸಿ.ಎಸ್.ರಮೇಶ್, ಮಂಜುನಾಥ್, ಜಿಲ್ಲಾ ಬಿಜೆಪಿ ಯುವ ಮೋರ್ಚಾಅಧ್ಯಕ್ಷಯಶಸ್ಸ್, ನಗರಅಧ್ಯಕ್ಷ ಹನುಮಂತರಾಜು, ಜಿಲ್ಲಾ ವಕ್ಫ್ ಬೋರ್ಡ್‍ಉಪಾಧ್ಯಕ್ಷ ಶಬ್ಬೀರ್‍ಅಹ್ಮದ್, ಮುಖಂಡರಾದಚಂದ್ರಶೇಖರ್‍ಇತರರು ಭಾಗವಹಿಸಿದ್ದರು.
ಜಿಲ್ಲೆಯ ವಿವಿಧÀ ತಾಲ್ಲೂಕುಗಳಿಂದ ಕಬಡ್ಡಿ ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ಹತ್ತು ಸಾವಿರರೂ. ಹಾಗೂ ದ್ವಿತೀಯ ಬಹುಮಾನಐದು ಸಾವಿರರೂ. ನಗದು, ಸ್ಮರಣಿಕೆ ವಿತರಿಸಿಲಾಯಿತು.

(Visited 1 times, 1 visits today)