ಗುಬ್ಬಿ

ಗುಬ್ಬಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರು ಕಾಣೆಯಾಗಿದ್ದು, ಸುಮಾರು 8 ತಿಂಗಳುಗಳಿಂದ ಯಾವುದೇ ಅಭಿವೃದ್ದಿ ಕಾರ್ಯವು ಹಾಗೂ ಬಂದಂತಹ ಹಣವು ಹಿಂತಿರುಗಿ ಹೋಗುವಂತಾಗಿರುವುದು ಗುಬ್ಬಿ ಪಟ್ಟಣದ ಜನತೆಯ ದುರಾದೃಷ್ಠವೇ ಸರಿ.
ಪಟ್ಟಣ ಪಂಚಾಯ್ತಿಯ ಚುನಾವಣೆ ನಡೆದು ಹೆಚ್ಚಿನ ಸದಸ್ಯರನ್ನು ಜೆ.ಡಿ.ಎಸ್ ಹೊಂದಿದರೂ ಸಹ ಮೀಸಲಾತಿಯಿಂದಾಗಿ ಕೇವಲ ಕೆಲವೇ ಸದಸ್ಯರನ್ನು ಹೊಂದಂತಹ ಬಿ.ಜೆ.ಪಿ ಸದಸ್ಯ ಅಣ್ಣಪ್ಪಸ್ವಾಮಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷಗಾದೆಗೆ ಏರಿದ್ದು ತಾನು ಅಧಿಕಾರ ಸ್ವೀಕರಿಸಿದ ನಂತರ ಮೂರು ತಿಂಗಳು ಯಾವುದೇ ಸಭೆಗಳಲ್ಲಿ ಯಾವುದೇ ಕಾರ್ಯಗಳು ಕಾರ್ಯಗತವಾಗದೇ ಕೇವಲ ನಾಮಕಾವಸ್ಥೆಯ ಅಧ್ಯಕ್ಷನಾಗಿ ಉಳಿದಿರುವುದು ವಿಪರ್ಯಾಸವೇ ಸರಿ.
ಮೊನ್ನೆ ನಡೆದಂತಹ ಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿದ್ದಂತಹ ತಾಲ್ಲೂಕಿನ ಶಾಸಕ ಎಸ್.ಆರ್.ಶ್ರೀನಿವಾಸ್‍ರವರು ಅಧ್ಯಕ್ಷನಿಗೆ ಯಾವ ಖಾಯಿಲೆ ಇದೆಯೋ ಅಥವಾ ಯಾವ ನರ್ಸಿಂಗ್ ಹೋಂಗೆ ಸೇರಿದ್ದಾರೋ ಒಂದು ತಿಳಿಯದಂತಾಗಿದೆ. ನಾನು ಕಷ್ಟಪಟ್ಟು ಪಟ್ಟಣದ ಅಭಿವೃದ್ದಿಗೆ ತಂದಂತಹ ಹಣವು ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಪಟ್ಟಣ ಪಂಚಾಯ್ತಿಯ ಸದಸ್ಯರ ಅನುಮೋದನೆಗೆ ಅಧ್ಯಕ್ಷರೇ ಇಲ್ಲದ ಕಾರಣ ಅನುಮೋದನೆ ಕಷ್ಟವಾಗಿದ್ದು ಇದನ್ನು ಅರಿತು ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಉಪಾಧ್ಯಕ್ಷರ ಅನುಮತಿ ಮೇರೆಗೆ ಸಭೆಯನ್ನು ಕರೆದು ಒಪ್ಪಿಗೆ ಪಡೆದು ಪಟ್ಟಣದ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡಬೇಕೆಂದು ತಿಳಿಸಿದ್ದರೂ ಸಹ ಇಲ್ಲಿಯವರೆಗೂ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರಾಗಲೀ ಅಥವಾ ಉಪಾಧ್ಯಕ್ಷರಾಗಲೀ ಹಾಲಿ ಇರುವ ಸದಸ್ಯರುಗಳಾಗಲೀ ಯಾವುದೇ ಪ್ರಕ್ರಿಯೆ ನೀಡದೆ ನಿಷ್ಕ್ರಿಯವಾಗಿರುವುದು ದುರಂತವೇ ಸರಿ.
15ನೇ ಹಣಕಾಸು ಯೋಜನೆಯಡಿಯಲ್ಲಿ 22-23ನೇ ಸಾಲಿಗೆ ಟೆಂಡರ್‍ಗೆ ಅನುಮೋದನೆ ನೀಡಬೇಕಗಿದ್ದು ಎಸ್.ಪಿ.ಸಿ ಮುಕ್ತನಿಧಿ ಯೋಜನೆಯಡಿ 23-24ನೇ ಸಾಲಿಗೆ ಅನುಮೋದನೆ ನೀಡಲು ಸಭೆಯನ್ನು ಕರೆಯದೆ ಅಭಿವೃದ್ದಿ ಕುಂಠಿತವಾಗಿದ್ದು ಹಾಗೂ ಅಂಗನವಾಡಿಗಳಿಗೆ ನಿವೇಶನ ನೀಡಲು ಸಭೆಯಲ್ಲಿ ಅನುಮೋದನೆ ಬೇಕಾಗಿದ್ದು ಈಗಾಗಲೇ ಬಿದ್ದಂತಹ ಮಳೆಯಿಂದ ಪಟ್ಟಣದ ಅಂಗನವಾಡಿ ಕೇಂದ್ರಗಳಲ್ಲಿ ಪೋಷಕರು ಮಕ್ಕಳನ್ನು ಕಳುಹಿಸುವಲ್ಲಿ ವಿಫಲರಾಗಿದ್ದಾರೆ. ಗುಬ್ಬಿ ಪಟ್ಟಣ ಪಂಚಾಯ್ತಿಗೆ ಸಂಬಂಧಿಸಿದಂತಹ ವಾರ್ಷಿಕ ನಿರ್ವಹಣಾ ಟೆಂಡರ್ ಅನುಮೋದನೆಯು ಸಹ ಈ ಅಧ್ಯಕ್ಷರ ಗೈರುಹಾಜರಿಯಿಂದ ನಿಂತಿದ್ದು ಮತ್ತು ಪಟ್ಟಣದ ಸ್ಮಶಾನಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಹ ಸಭೆಯ ಅನುಮತಿ ದೊರಕಬೇಕಾಗಿದ್ದು ಈ ಎಲ್ಲಾ ಕಾಮಗಾರಿಗಳನ್ನು ಅಧ್ಯಕ್ಷರ ಮುಖಾಂತರ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕಾಗಿದ್ದು ಇದನ್ನು ಆಢಳಿತ ನಡೆಸುತ್ತಿರುವ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸದಸ್ಯರು ಹಾಗೂ ಅಧ್ಯಕ್ಷರ ನಡುವಿನ ತಿಕ್ಕಾಟ
ಅಧ್ಯಕ್ಷರು 8 ತಿಂಗಳಿÀನಿಂದ ಕಾಣೆಯಾಗಿರುವ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ದೊರಕದೆ ಇರುವುದು ಒಂದೆಡೆಯಾದರೆ ಉಪಾಧ್ಯಕ್ಷರ ಸಮ್ಮುಖದಲ್ಲಿ ಸಭೆಯನ್ನು ಕರೆದು ಈ ಎಲ್ಲಾ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ದೊರಕಿಸಿಕೊಟ್ಟಲ್ಲಿ ಪಟ್ಟಣವು ಸ್ವಲ್ಪ ಮಟ್ಟಿಗೆ ಮುಂದುವರಿದಂತಾಗುತ್ತದೆ.
ಮೂರು ಬಾರಿ ಗೆದ್ದಂತಹ ಪಟ್ಟಣ ಪಂಚಾಯ್ತಿಯ ಸದಸ್ಯ ಸಿ.ಮೋಹನ್‍ರವರು ಮಾತನಾಡಿ ನನ್ನ ಸದಸ್ಯತ್ವದ ಅವಧಿಯಲ್ಲಿ ಇಂತಹ ಕೆಟ್ಟ ಭ್ರಷ್ಟ ಅಧ್ಯಕ್ಷನನ್ನು ನಾನು ನೋಡಿಲ್ಲ. ಪಟ್ಟಣ ಅಭಿವೃದ್ದಿಗೆ ಪೂರಕವಾದ ಸಭೆಯನ್ನು ನಡೆಸಿ ಅನುಮೋದನೆ ನೀಡಲು ಸಹ ಅಧ್ಯಕ್ಷರು ಸಿಗುತ್ತಿಲ್ಲ. ಇದರಿಂದ ಇವರ ಭಾವಚಿತ್ರವನ್ನು ಪೋಲಿಸರಿಗೆ ನೀಡಿ ಹುಡುಕಿಸುವಂತಹ ಸ್ಥಿತಿ ಬಂದಿದೆ.

(Visited 1 times, 1 visits today)