ತುಮಕೂರು


ದಂತ ಗೋಪುರದಲ್ಲಿ ನಿಂತುಕೊಂಡು ಸಾಹಿತ್ಯ ರಚನೆಯಿಂದ ಸಮಾಜಕ್ಕೆ ಉಪಯೋಗವಿಲ್ಲ. ಜನ ಪರವಾಗಿ, ಸಾಮಾಜಿಕವಾಗಿ ಚಿಂತಿಸಿ ಸಾಹಿತ್ಯ ರಚನೆ ಮಾಡಿದಾಗ ಜೀವಂತವಾಗಿರುತ್ತದೆ. ಈ ನಿಟ್ಟಿನಲ್ಲಿ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಬೆಂಗಳೂರಿನ ಎಂ.ಎಲ್.ಎ ಕಾಲೇಜಿನ ತೇಜಸ್ವಿ ಕನ್ನಡ ಸಂಶೋಧನಾ ಕೇಂದ್ರದ ನಿದೇರ್ಶಕರಾಧ ಡಾ.ಬಿ.ಎ.ಅನ್ನದಾನೇಶ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಕನ್ನಡ ವಿಭಾಗ ಮತ್ತು ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಣ ಶಿಲ್ಪಿ ಡಾ.ಹೆಚ್.ಎಂ.ಗಂಗಾಧರಯ್ಯ ಸ್ಮಾರಕ ಉಪನ್ಯಾಸ ಮಾಲೆ -6ರಲ್ಲಿ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯವರ ಜನ್ಮದಿನಾಚರಣೆಯ ಅಂಗವಾಗಿ ‘ತೇಜಸ್ವಿ ವಿಚಾರಗಳು’
ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಮೂಡಿಗರೆಯಿಂದ ವಿಶ್ವಮಟ್ಟಕ್ಕೆ ಕಾದಂಬರಿ ಕ್ಷೇತ್ರವನ್ನು ಕೊಂಡೋಯ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಒಬ್ಬ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಮೊನುಚಾದ ಮತ್ತು ಆಕರ್ಷಕ ಬರವಣಿಗೆಯನ್ನು ನೀಡಿದ್ದಾರೆ. ಅವರು ಸಾಹಿತ್ಯ ಓದುಗರಿಗೆ ಮುದ ನೀಡುತ್ತದೆ ಎಂದು ಡಾ.ಬಿ.ಎ.ಅನ್ನದಾನೇಶ ನುಡಿದರು.
ಅವರು ರಚಿಸಿದ ಕಾದಂಬರಿಗಳು ಪಠ್ಯ ಪುಸ್ತಕಗಳಾಗಿವೆ, ಅಲ್ಲದೆ ಕಿರಗೂರಿನ ಗಯ್ಯಾಳಿಗಳು ಕನ್ನಡ ಚಲನಚಿತ್ರವು ಕೂಡ ಜನಸಮುದಾಯದ ಗಮನ ಸೆಳೆದಿದೆ. ಅಂದರೆ ಸಮೂಹ ಸಾಹಿತ್ಯ ಅವರನ್ನು ಅಪ್ಪಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚಳುವಳಿಗಾರಾಗಿ, ಕೃಷಿಕರಾಗಿ, ಪರಿಸರ ಪ್ರೇಮಿಯಾಗಿ ತೇಜಸ್ವಿ ಅವರು ಅತ್ಯಲ್ಪ ಕಾಲದಲ್ಲಿಯೇ ವಿಶ್ವಮಟ್ಟಕ್ಕೆ ಕನ್ನಡ ಸಾಹಿತ್ಯವಲಯವನ್ನು ತಲುಪಿಸುವ ಕೆಲಸ ಮಾಡಿದರೂ ಬಿರಿದು -ಬಾವಲಿಗಳಿಗೆ ಕೊರಳೊಡ್ಡಲಿಲ್ಲ. ಕನ್ನಡದ ನುಡಿ ತಂತ್ರಾಂಶ ಬಳಕೆ ಮತ್ತು ಸರಳೀಕರಣದಲ್ಲಿಯೂ ಕೂಡ ತೇಜಸ್ವಿ ಅವರ ಕೊಡುಗೆ ಇದೆÉ ಎಂದು ಡಾ. ಬಿ.ಎ.ಅನ್ನದಾನೇಶರವರು ಹೇಳಿದರು.
ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ವಿಜಯಭಾಸ್ಕರ್ ಮಾತನಾಡಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸದ ಮೂಲಕ ಒಳ್ಳೆಯ ವಿಚಾರಗಳನ್ನು ನೀಡುವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪೆÇ್ರ.ರಮೇಶ್ ಮಣ್ಣೆ, ಐಕ್ಯೂಎಸಿ ಸಂಯೋಜಕರಾದ ಸೈಯ್ಯದ್ ಬಾಬು ಎಚ್.ಬಿ, ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ, ಭೋಧಕ-ಭೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

(Visited 1 times, 1 visits today)