ತುಮಕೂರು


ಪ್ರಯೋಗದಾಟಗಳ ರಂಗಕೇಂದ್ರ ನಾಟಕಮನೆ ತುಮಕೂರು ರಂಗತಂಡವು 2022ನೇ ಅಕ್ಟೋಬರ್ 08ನೇ ಶನಿವಾರದಂದು ಸಂಜೆ 6:30 ಗಂಟೆಗೆ ಅಮಾನಿಕೆರೆ ಮುಂಭಾಗದ ಕನ್ನಡ ಭವನದಲ್ಲಿ ಕೃಷ್ಣ-ಸಂಧಾನ ಎಂಬ ಹಾಸ್ಯ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ನಾಟಕಮನೆ ಕಲಾವಿದರು ಅಭಿನಯಿಸುವ ಕೃಷ್ಣ ಸಂಧಾನ ನಾಟಕವನ್ನು ಆಡಿಸುವ ಪ್ರಸಂಗದಲ್ಲಿ ಉಂಟಾಗಬಹುದಾದ ಔಚಿತ್ಯ ಚಿತ್ರಣ ಈ ನಾಟಕದ ವಸ್ತುವಾಗಿದೆ. ಗ್ರಾಮಾಂತರ ಪ್ರದೇಶದಿಂದ ಬಂದಿರುವ ನಾಟಕಕಾರರು ಅನೇಕ ಗ್ರಾಮಗಳಲ್ಲಿ ನಡೆದಿರುವ ನಾಟಕಗಳ ತಾಲೀಮನ್ನು ಕೂಲಂಕಷವಾಗಿ ಗಮನಿಸಿ ಸಹಜ, ಸುಂದರವಾಗಿ ಈ ನಾಟಕವನ್ನು ರಚಿಸಿದ್ದಾರೆ.
ನಾಟಕ ಪ್ರದರ್ಶನಕ್ಕೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಶ್ರೀ ಕೆ.ಎಸ್.ಸಿದ್ದಲಿಂಗಪ್ಪ ಚಾಲನೆ ನೀಡಲಿದ್ದಾರೆ. ರಂಗನಿರ್ದೇಶಕ ಮೆಳೇಹಳ್ಳಿ ದೇವರಾಜು, ಮೂಡಲಪಾಯ ಯಕ್ಷಗಾನ ಕಲಾವಿದರಾದ ಎಮ್.ಪಿ.ಪುಟ್ಟಸ್ವಾಮಯ್ಯ, ರಂಗನಿರ್ದೇಶಕ ನವೀನ್ ಭೂಮಿ, ಉಪನ್ಯಾಸಕರಾದ ಶ್ರೀ ನಾಗರಾಜರಾವ್ ರವರುಗಳು ಉಪಸ್ಥಿತರಿರುವರು.
ಉಚಿತ ಪ್ರವೇಶವಿರುವ ಕೃಷ್ಣ ಸಂಧಾನ ಹಾಸ್ಯ ನಾಟಕ ಪ್ರದರ್ಶನಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ಯಶಸ್ವಿಗೊಳಿಸುವಂತೆ ರಂಗ ಸಂಘಟಕ ನಾಟಕಮನೆ ಮಹಾಲಿಂಗು ಮನವಿ ಮಾಡಿದ್ದಾರೆ.

(Visited 1 times, 1 visits today)