ಗುಬ್ಬಿ


ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಇಂಜಿನಿಯರ್ ಗಳು ಕೇವಲ ದುಡ್ಡು ಮಾಡುವ ಕೆಲಸ ಮಾಡುತ್ತಾ ಇದ್ದಾರೆ ಎಂದು ಕಿಡಿಕಾರಿದ ಶಾಸಕ ಎಸ್ ಆರ್ ಶ್ರೀನಿವಾಸ್.
ತಾಲೂಕಿನ ಬೆಣಚಿಗೆರೆ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮನೆ ಮನೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಮಾತನಾಡಿದ ಅವರು ಹಿಂದಿನ ಬಾರಿ ಈ ಯೋಜನೆಯಡಿ 60 ಕಾಮಗಾರಿಗಳನ್ನು ಮುಗಿದಿದ್ದು, 70 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು ತಾಲೂಕಿನಲ್ಲಿ ಗ್ರಾಮೀಣಾ ಪ್ರದೇಶದಲ್ಲಿ 22 ಕೋಟಿ ಹಣದಿಂದ ಸಿಸಿ ರಸ್ತೆ ಕಾಮಗಾರಿಗಳನ್ನು ಹಂತ ಹಂತವಾಗಿ ಮುಗಿಸುತ್ತಾ ಇದ್ದು, ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ 25 ಕೋಟಿ ಹಣವನ್ನು ಈಗಾಗಲೇ ಟೆಂಡರ್ ಪ್ರಕ್ರಿಯೆ ಗೆ ನೀಡಿದ್ದು, ಪಟ್ಟಣದ ಒಳಚರಂಡಿ ವ್ಯವಸ್ಥೆಗು ಈಗಾಗಲೇ ಹಣ ಬಿಡುಗಡೆಯಾಗಿದ್ದು, ಕೆಲವು ಕಾನೂನು ತೊಡಕುಗಳ ಗಳಿಂದ ಕಾಮಗಾರಿಯು ಸ್ಥಗಿತವಾಗಿದೆ ಎಂದ ಅವರು ಫಲಾನುಭವಿಗೆ ಹಣ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಯು ಪೂರ್ಣವಾಗಲಿದೆ ಎಂದು ತಿಳಿಸಿದರು.
ಪಟ್ಟಣದ ರಸ್ತೆಯ ಅಭಿವೃದ್ಧಿಗೆ ಹೆಚ್ಚು ಹೊತ್ತನ್ನು ನೀಡಿ ಎಂ.ಜಿ.ರಸ್ತೆಯಿಂದ ರೈಲ್ವೆ ಅಂಡರ್ ಪಾಸ್ ವರೆವಿಗೂ ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ನಿಗದಿ ಮಾಡಲಾಗಿದ್ದು, ಮಳೆಯು ನಿಂತ ಬಳಿಕ ಕಾಮಗಾರಿಯನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಇಂಜಿನಿಯರ್ ಹಾಳಾದ ರಸ್ತೆಗಳನ್ನು ಸರಿಯಾಗಿ ಅಳತೆ ಮಾಡದೇ ಕಾಟಾಚಾರಕ್ಕೆ ಅಂದಾಜು ಪಟ್ಟಿಯನ್ನು ಮಾಡಿ ಪ್ರತಿ ಗ್ರಾಮಗಳಲ್ಲೂ ರಸ್ತೆಯನ್ನು ಉಳಿಸಿಕೊಳ್ಳುತ್ತಿದ್ದರೆ ಎಂಬುದು ಗ್ರಾಮಸ್ಥರ ಆಕ್ರೋಶದಿಂದ ಗೊತ್ತಾಗುತ್ತಿದೆ ಎಂದ ಅವರು ನಿಟ್ಟೂರು ಗ್ರಾಮ ಪಂಚಾಯಿತಿಗೆ ಬರುವ ಮಸಿಯಮ್ಮನ ಹಟ್ಟಿ ರಸ್ತೆಯನ್ನು ಡಾಂಬರೀಕರಣಕ್ಕೆ ಹಣ ನೀಡಿದ್ದು ಕೇವಲ ಒಂದು ತಿಂಗಳಲ್ಲಿಯೇ ರಸ್ತೆಯು ಹಾಳಾಗಿ ಗುದ್ದುಗೆದಾರರಿಗೆ ಹಣ ಪಾವತಿಸದಂತೆ ತಡೆಹಿಡಿದಿದ್ದು ಇನ್ನೂ ಮುಂದಾದರೂ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಎಚ್ಚರಿಕೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಯಾ ಆರಂಭಿಸುವುದು ಸಹಜ, ಎಲ್ಲರೂ ಸಹ ಕುಣಿಯುತ್ತಾರೆ ಅವರಿಗೆ ಬೇಕಾದ ರೀತಿಯಲ್ಲಿ ಕುಣಿಯುತ್ತಾರೆ ಜನ ಈ ಎಲ್ಲಾವನ್ನು ವೀಕ್ಷಿಸುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಂಜೇಗೌಡ, ಗುತ್ತಿಗೆದಾರ ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

(Visited 1 times, 1 visits today)