ತುಮಕೂರು


ಪ್ರಯೋಗದಾಟಗಳ ರಂಗಕೇಂದ್ರವೆಂದೇ ಪ್ರಸಿದ್ಧಿ ಇರುವ ನಾಟಕಮನೆ ತುಮಕೂರು ರಂಗತಂಡವು 29 ಅಕ್ಟೋಬರ್ 2022ನೇ ಶನಿವಾರದಂದು ಸಂಜೆ 6:30 ಗಂಟೆಗೆ ತುಮಕೂರಿನ ಅಮಾನಿಕೆರೆ ಮುಂಭಾಗದ ಕನ್ನಡ ಭವನದಲ್ಲಿ ಕೋಮಲ ಗಾಂಧಾರ ಎಂಬ ವಿನೂತನ ಪೌರಾಣಿಕ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಶಂಕರ ಶೇಷ ರಚಿತ, ಡಾ.ಮ.ಸು.ಕೃಷ್ಣಮೂರ್ತಿ ಕನ್ನಡಕ್ಕೆ ರಂಗರೂಪಗೊಳಿಸಿರುವ ಮತ್ತು ಆರ್.ರಾಮಮೂರ್ತಿರವರ ನಿರ್ದೇಶನದಲ್ಲಿ ಕೋಮಲ ಗಾಂಧಾರ ವಿನೂತನ ಪೌರಾಣಿಕ ನಾಟಕ ಮೂಡಿಬರಲಿದ್ದು, ಗಾಂಧಾರಿಯ ಬದುಕಿನ ಹಿನ್ನೆಲೆಯಲ್ಲಿ ರಚಿತವಾದ ಮಹಾಭಾರತದ ಪಾತ್ರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂಬುದನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ.ಡಿ.ಎಂ.ರವಿಕುಮಾರ್‍ರವರು ಚಾಲನೆ ನೀಡಲಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೀಲಾ ಲೇಪಾಕ್ಷರವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಉಪಾಧ್ಯಕ್ಷರಾದ ಶ್ರೀಮತಿ ಶಿವಲಿಂಗಮ್ಮ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾದ ಬಿ.ಉಮೇಶ್‍ರವರುಗಳು ಉಪಸ್ಥಿತರಿರುವರು.
ಉಚಿತ ಪ್ರವೇಶವಿರುವ ಕೋಮಲ ಗಾಂಧಾರ ವಿನೂತನ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ಯಶಸ್ವಿಗೊಳಿಸುವಂತೆ ರಂಗ ಸಂಘಟಕ ನಾಟಕಮನೆ ಮಹಾಲಿಂಗು ಮನವಿ ಮಾಡಿದ್ದಾರೆ.

(Visited 1 times, 1 visits today)