ತುಮಕೂರು:

      ಅಯೋಧ್ಯೆಯಲ್ಲಿ ಪುಟ್ಟ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸದ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಪ್ರಭು ಶ್ರೀ ರಾಮಚಂದ್ರನನ್ನು ಪೂಜಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ 1992ರ ಅಯೋದ್ಯೇಯ ಕರ ಸೇವೆಯಲ್ಲಿ ಭಾಗವಹಿಸಿದ ತುಮಕೂರು ನಗರದ ಹೆಚ್.ಕೆ.ಶಿವಣ್ಣ (ಕಾಂಡಿಮೇಂಟ್ಸ್ ಶಿವಣ್ಣ) ಅವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಶಿವಣ್ಣನವರು ಅಂದಿನ ಬಾಬ್ರಿ ಮಸೀದಿ ಕೆಡುವ ಹೋರಾಟದಲ್ಲಿ ಆನೇಕ ಜನ ತುಮಕೂರಿನಿಂದ ಭಾಗವಹಿಸಿದ್ದರು. ಸ್ವಯಂ ಪ್ರೇರಿತವಾಗಿ ಆ ಸಮಯದಲ್ಲಿ ರಾಮಭಕ್ತರು ಭಾಗವಹಿಸಿದ್ದರು. ಆ ಕ್ಷಣಗಳನ್ನು ನೆನಪಿಸಿಕೊಂಡರೆ ಇಂದಿಗೂ ರೋಮಾಂಚನಗಾಗುತ್ತದೆ. ಬಾಬ್ರಿ ಮಸೀದಿ ಕೆಡವಿನ ಗುರುತಿಗಾಗಿ 4 ಇಟ್ಟಿಗೆಗಳನ್ನು ಅಲ್ಲಿಂದ ತಂದಿರುವೆ ಇಂದಿಗೂ ಅದನ್ನು ಇಟ್ಟಿರುವೆ. ಇವತ್ತು ಅದರ ಭೂಮಿ ಪೂಜೆ ಆಗುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು.

      ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ಇವತ್ತಿನ ಭೂಮಿ ಪೂಜೆಯ ಕಾರ್ಯ ಇಡೀ ದೇಶಕ್ಕೆ ಅಲ್ಲ ವಿಶ್ವವೇ ಇದರ ಸಂಭ್ರಮದಲ್ಲಿ ಭಾಗಿಯಾಗಿದೆ. ಅಮೇರಿಕಾದ ನ್ಯೂಯರ್ಕ್‍ನ ಸಿಟಿಯಲ್ಲಿಯೂ ಈ ಸಂಭ್ರಮಾಚರಣೆ ಮಾಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಕರಸೇವೆಯಲ್ಲಿ ಭಾಗವಹಿಸಿದ ತುಮಕೂರಿನ ಪ್ರಮುಖರನ್ನು ನೆನೆದು ಅವರಿಗೆ ನಮನಗಳನ್ನು ತಿಳಿಸಿದರು.

      ರಾಜ್ಯ ಉಪಾಧ್ಯಕ್ಷರಾದ ಎಂ.ಬಿ.ನಂದೀಶ್‍ರವರು ಮಾತನಾಡಿ ರಾಮ, ರಾಮ ಮಂದಿರ ಬಿಜೆಪಿಯ ಜೀವಾಳವಾಗಿದೆ. ಸಮಯ 40 ವರ್ಷಗಳ ಕಾನೂನು ಸಂಘರ್ಷ ಹಾಗೂ 1992ರಲ್ಲಿ ಲಾಲ್‍ಕೃಷ್ಣಅಡ್ವಾಣಿಜೀ ರವರ ರಾಮಯಾತ್ರೆ 1992 ಡಿಸೆಂಬರ್ 6ರ ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿದ ಕರಸೇವಕರ ಹೋರಾಟ ಹಲವಾರು ರಾಮಭಕ್ತರ ಬಲಿದಾನ ಇಂದು ಸಾರ್ಥಕವಾಗುತ್ತಿದೆ ಎಂದರು.

      ಜಿಲ್ಲಾಧ್ಯಕ್ಷರಾದ ಬಿ.ಸುರೇಶ್‍ಗೌಡ ಅವರು ಮಾತನಾಡಿ ಈಡೀ ಹಿಂದುಗಳ ಸಮಾಜ ಭಾರತೀಯರ ಅತ್ಯಂತ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಸುಮಾರು 500 ವರ್ಷಗಳ ಕನಸು ನನಸಾಗುತ್ತಿದೆ. ಎಲ್ಲಾ ಕಾರ್ಯಕರ್ತರನ್ನು ದೀಪಾವಳಿಗೂ ಮಿಗಿಲಾಗಿದ ಹಬ್ಬವನ್ನಾಗಿ ಅನುಸರಿಬೇಕು ರಾಷ್ಟ್ರ ನಿರ್ಮಾಣ ಕಾರ್ಯಕದಲ್ಲಿ ಬಿಜೆಪಿಗೆ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಭು ಶ್ರೀರಾಮಚಂದ್ರನ ಕೃಪೆ ಇರಲಿ ಎಂದರು.ಈ ಸಮಯದಲ್ಲಿ ಹರಕೆ ಮಾಡುವೆ ಎಂದರು. ಸಮಾರಂಭದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್, ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಸಿ.ಎನ್.ರಮೇಶ್ ನಗರಾಧ್ಯಕ್ಷ ಟಿ.ಹೆಚ್.ಹನುಮಂತರಾಜು, ಮುಖಂಡರುಗಳಾದ ಪಾಲಿಕೆ ಸದಸ್ಯರು, ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

(Visited 10 times, 1 visits today)