ತುಮಕೂರು :

ಪತ್ರಕರ್ತರು ಪತ್ರಿಕಾ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇದೆ ಎಂದು ಮಾಜಿ ಶಾಸಕ ಬಿ.ಸುರೇಶ್‍ಗೌಡ ತಿಳಿಸಿದರು.
ನಗರದ ಹೊರಪೇಟೆ ಮುಖ್ಯರಸ್ತೆಯಲ್ಲಿರುವ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಹಾಲ್‍ನಲ್ಲಿ “ಬೆಂಕಿಯ ಬಲೆ” ಕನ್ನಡ ದಿನಪತ್ರಿಕೆಯ 18 ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಕಾವ್ಯ ಮೇಳ, ಪ್ರತಿಭಾ ಪುರಸ್ಕಾರ ಹಾಗೂ ಅನಾಥ, ಬಡ, ವಿಶೇಷ ಚೇತನ ಮಕ್ಕಳಿಗೆ ಉಚಿತ ವಸ್ತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ನಡೆಸುವುದು ಅತ್ಯಂತ ಕಷ್ಟದಾಯಕ ಕೆಲಸವಾಗಿದೆ. ಆದರೂ ಸಹ ಸತ್ಯ, ವಸ್ತುನಿಷ್ಠ ಹಾಗೂ ಜನರಿಗೆ ಅಗತ್ಯವಿರುವ ಸುದ್ದಿಗಳನ್ನು ಬಿತ್ತರಿಸಲು ಪ್ರಯತ್ನಿಸಬೇಕು. ವೃತ್ತಿ ಜೀವನದಲ್ಲಿ ಕೇವಲ ನಕಾರಾತ್ಮಕ ವಿಷಯಗಳಿಗೆ ಆದ್ಯತೆ ನೀಡದೇ ಉತ್ತಮ ಕೆಲಸಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ, ದೇಶ ಕಟ್ಟುವುದರಲ್ಲಿ ಪತ್ರಿಕೋದ್ಯಮದ ಜವಾಬ್ದಾರಿಯೂ ಪ್ರಮುಖ ಪಾತ್ರ ವಹಿಸಲಿದೆ. ಸಮಾಜದಲ್ಲಿ ನಡೆಯುವ ಹೆಚ್ಚು ಹೆಚ್ಚು ವಿಚಾರಗಳನ್ನು ಜನತೆಗೆ ತಿಳಿಸುವ ಮೂಲಕ ತನ್ನದೇ ಆದ ಸ್ವಾಯತ್ತತೆಯನ್ನು ಉಳಿಸಿಕೊಂಡಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಗುಬ್ಬಿ ತಾಲ್ಲೂಕು ಬೆಟ್ಟದಹಳ್ಳಿ ಗವಿಮಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ, ಕವಿಗೋಷ್ಠಿಯಲ್ಲಿ ಅನೇಕ ಮಂದಿ ತಮ್ಮ ಕವಿತೆಗಳನ್ನು ವಾಚನ ಮಾಡಿದ್ದೀರಿ, ನಿಮ್ಮ ಕವಿತೆಗಳು ಅನೇಕರಿಗೆ ಜೀವನವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರಬೇಕು ಕವಿತೆ ಬರೆಯುವವರಿಗೆ ಹೃದಯ ಶ್ರೀಮಂತಿಕೆ ಇರಬೇಕು ಎಂದು ನುಡಿದರು.


ತತ್ವಭರಿತ, ಸತ್ವಭರಿತ ಪದಗಳನ್ನು ಬಳಸಿದರೆ ಚಂದಸ್ಸು ತಾನಾಗಿಯೇ ಬರುತ್ತದೆ. ಇದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಾಹಿತಿ ಹಾಗೂ ಮಹಿಳಾ ಹೋರಾಟಗಾರ್ತಿ ಡಾ.ಬಿ.ಸಿ.ಶೈಲಾನಾಗರಾಜ್ ಮಾತನಾಡಿ, ಪತ್ರಕರ್ತರು ಅವಸರದ ಸಾಹಿತಿಗಳು, ಅವಸರವಾಗಿ ಉತ್ತಮವಾಗಿ ಜನರಿಗೆ ವಿಷಯವನ್ನು ತಲುಪಿಸುವಂತಹ ಕಾರ್ಯ ಅವಸರ ಅವಸರವಾಗಿಯೇ ಮಾಡುತ್ತಾರೆ ಎಂದರು.
ಪತ್ರಕರ್ತರ ಕೆಲಸ ಸವಾಲಿನ ಕೆಲಸ, ಸಾಮಾಜಿಕವಾಗಿ ನ್ಯಾಯವನ್ನು ಕೊಡಿಸುವ ಜವಾಬ್ದಾರಿಯನ್ನು ಪತ್ರಕರ್ತರು ಹೊಂದಿರುತ್ತಾರೆ, ಇಂತಹುದರಲ್ಲಿ ಬೆಂಕಿಯಬಲೆ ಪತ್ರಿಕೆ ಪ್ರತಿ ವರ್ಷದಂತೆ ಈ ಭಾರಿಯೂ ವಾರ್ಷಿಕೋತ್ಸವದ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿರುವ ಪತ್ರಿಕೆಯ ಸಂಪಾದಕ ಧನಂಜಯ ಅವರ ವೈಖರಿ ಮೆಚ್ಚುವಂತಹದ್ದು ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಜ್ಞಾನಕ್ಕಿಂತ ಶಕ್ತಿಶಾಲಿ ಅಸ್ತ್ರ ಇನ್ನೊಂದು ಇರುವುದಿಲ್ಲ. ಹಾಗಾಗಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹೊಸತನ್ನು ತಿಳಿಯಲು ಯತ್ನಿಸಬೇಕು. ತಾವು ಮಾಡುವ ಸುದ್ದಿಗಳು ಸತ್ಯ ಮತ್ತು ನಿಷ್ಪಕ್ಷಪಾತತೆಯಿಂದ ಕೂಡಿರುವಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಹಾಗೂ ನಾಟಕಕಾರ ಎ.ಎನ್.ರಮೇಶ್‍ಗುಬ್ಬಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಕವಿಗಳನ್ನು ಕೇವಲ ಪ್ರೇಕ್ಷಕರನ್ನಾಗಿ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು. ಕವಿಗೋಷ್ಠಿಯಲ್ಲಿ 330 ಕವಿತೆಗಳು ಬಂದಿದ್ದು, ಅದರಲ್ಲಿ 30 ಕವಿತೆಗಳನ್ನು ಆಯ್ಕೆ ಮಾಡಲಾಗಿತ್ತು, 30 ಕವಿತೆಗಳನ್ನು ಉತ್ತಮವಾಗಿ ಕವಿತೆ ರಚಿಸಿ, ವಾಚಿಸಿದ ಐವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸ್ಮರಣಿಕೆ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಿ.ನಿ.ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಕಾರ್ಯದರ್ಶಿ ರಂಗಧಾಮಯ್ಯ, ನೂತನ ನಿರ್ದೇಶಕರಾದ ಟಿ.ಎಸ್.ಕೃಷ್ಣಮೂರ್ತಿ, ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ ಕೊರಟಗೆರೆ ನರಸಿಂಹಮೂರ್ತಿ, ತುರುವೇಕೆರೆ ನಂದೀಶ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬೆಂಕಿಯ ಬಲೆ ಪತ್ರಿಕೆ ಸಂಪಾದಕ ಎ.ಎನ್.ಧನಂಜಯ, ಕಾಳಿದಾಸ ವಿದ್ಯಾವಧ್ಕ ಸಂಘದ ನೂತನ ಅಧ್ಯಕ್ಷ ಮೈಲಪ್ಪ, ನಾರಾಯಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.

(Visited 21 times, 1 visits today)