ಅ.24ರ ಚುನಾವಣಾ ತರಬೇತಿಗೆ ಹಾಜರಿ ಕಡ್ಡಾಯ – ಡೀಸಿ ಸೂಚನೆ

 ತುಮಕೂರು :

      ಶಿರಾ ವಿಧಾನಸಭಾ ಉಪ ಚುನಾವಣೆಯ ಚುನಾವಣಾ ತರಬೇತಿಗೆ ಗೈರು ಹಾಜರಾಗಿರುವ ಪಿಆರ್‍ಓ ಹಾಗೂ ಎಪಿಆರ್‍ಓ ಅಧಿಕಾರಿಗಳಿಗೆ ಅಕ್ಟೋಬರ್ 24ರಂದು ತುಮಕೂರು ನಗರದ ಸಿದ್ದಗಂಗಾ ಮಹಿಳಾ ಪದವಿ/ಪದವಿಪೂರ್ವ ಕಾಲೇಜಿನಲ್ಲಿ ತರಬೇತಿಯನ್ನು ಹಮ್ಮಿಕೊಂಡಿದ್ದು, ಕಡ್ಡಾಯವಾಗಿ ತರಬೇತಿಗೆ ಹಾಜರಾಗುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ: ಕೆ. ರಾಕೇಶ್ ಕುಮಾರ್ ಸೂಚಿಸಿದ್ದಾರೆ.

       ಅಕ್ಟೋಬರ್ 21ರಂದು ನಡೆದ ತರಬೇತಿಗೆ ಕೆಲ ಪಿಆರ್‍ಓ ಹಾಗೂ ಎಪಿಆರ್‍ಓಗಳು ಗೈರು ಹಾಜರಾಗಿದ್ದು, ತಮ್ಮ ಗೈರು ಹಾಜರಿಗೆ ಲಿಖಿತ ವಿವರಣೆಯೊಂದಿಗೆ ಕಡ್ಡಾಯವಾಗಿ ಅಂದಿನ(ಅಕ್ಟೋಬರ್ 24) ತರಬೇತಿಗೆ ಹಾಜರಾಗುವಂತೆ ನಿರ್ದೇಶನ ನೀಡಿದ್ದಾರೆ. ತಪ್ಪಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 

(Visited 3 times, 1 visits today)

Related posts

Leave a Comment