ಕೆರೆ ಹೂಳೆತ್ತುವುದರಿಂದ ಸರ್ಕಾರದ ಹಣ ಪೋಲು!


ಚಿಕ್ಕನಾಯಕನಹಳ್ಳಿ:


ಕೆರೆ ಏರಿ ಸುಭದ್ರತೆ ಮಾಡಿದರೆ ಮಾತ್ರ ನೀರು ಶೇಖರಣೆ ಅವಕಾಶವಾಗುತ್ತದೆ ಕೇವಲ ಹೂಳೆತ್ತುವುದು ರಿಂದ ಸರ್ಕಾರದ ಹಣ ಪೋಲಾಗುತ್ತದೆ ಎಂದು ಸದಸ್ಯ ಸಿ.ಡಿ ಸುರೇಶ್ ಆಗ್ರಹಿಸಿದರು. ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ಪುಷ್ಪ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ವಿಶೇಷ ಸಭೆಯಲ್ಲಿ ಅವರು ಸಲಹೆ ನೀಡಿದರು.
15ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುಧಾನ ಕ್ರಿಯಾ ಯೋಜನೆಯ 155 ಲಕ್ಷ ಅನುದಾನದಲ್ಲಿ ಕುಡಿಯುವ ನೀರು ಕಾಮಗಾರಿಗೆ ಹಾಗೂ ಘನತ್ಯಾಜ್ಯ ವಸ್ತು ವಿಲೇವಾರಿ ನಿರ್ವಾಣ ಕಾಮಗಾರಿಗೆ ಮೀಸಲಿರಿಸಿದ್ದ 93 ಲಕ್ಷ ರೂಗಳನ್ನು ಸಚಿವರು ಕೆರೆಯ ಹೂಳೆತ್ತಿ ರಿವಿಟ್ಮೆಂಟ್ ನಾವು ಮಾಡುತ್ತೇವೆ ನೀವು ನೀರು ಶೇಖರಿಸುವ ಕಾರ್ಯವನ್ನು ಮಾಡಿ ಎಂದು ಸಭೆಗೆ ಸೂಚಿಸಿದರು.
ಇದಕ್ಕೆ ಸಹಮತಿಸದೇ ಕೆಲವು ಸದಸ್ಯರಾದ ಸಿಡಿ ಸುರೇಶ್ ಮಾತನಾಡುತ್ತಾ ಹೂಳ್ ಎತ್ತುವುದಾದರೆ ಕೇವಲ ಹತ್ತರಿಂದ ಹದಿನೈದು ಲಕ್ಷದಲ್ಲಿ ಕಾಮಗಾರಿ ಮುಗಿಸಬಹುದು ಆದರೆ ಏರಿಯಾ ಭದ್ರತೆ ಹಾಗೂ ಅದರ ಸುರಕ್ಷತೆ ಜೊತೆಗೆ ಸುತ್ತಮುತ್ತಲಿನ ಗಿಡಗಳನ್ನು ತೆಗೆಯುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ ಇದರ ಜೊತೆಯಲ್ಲಿಯೇ ಹೂಳ್ ಎತ್ತುವ ಮೂಲಕ ಸರ್ಕಾರದ ಹಣವನ್ನು ಪೋಲಾಗದಂತೆ ನೋಡಿಕೊಳ್ಳಬಹುದು ಕೇವಲ ಹೂಳೆತ್ತುವುದು ಅವಕಾಶ ನೀಡಿದರೆ ಇಟ್ಟಿಗೆ ಫ್ಯಾಕ್ಟರಿ ಯವರೇ ಅವರದೇ ಹಣದಲ್ಲಿ ಹೂಳ್ ಎತ್ತಿಕೊಳ್ಳುತ್ತಾರೆ ಎಂದರು.
ಇದಕ್ಕೆ ಕೆಲವು ಸದಸ್ಯರು ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ನಾಮಿನಿ ಸದಸ್ಯ ಮಿಲ್ಟ್ರಿ ಶಿವಣ್ಣ ಮಾತನಾಡುತ್ತಾ ಕಳೆದ 20 ವರ್ಷಗಳಿಂದಲೂ ಖಾಸಗಿ ಬಸ್ ಸ್ಟ್ಯಾಂಡ್ ನಲ್ಲಿ ನಿರ್ಮಾಣವಾಗಿರುವ ಪುರಸಭಾ ಮಳಿಗೆಗಳು ಮರು ಟೆಂಡರ್ ಆಗದೆ ಹಳೆ ಮಾಲೀಕರುಗಳು ಬೇರೆಯವರಿಗೆ ಮರು ಗುತ್ತಿಗೆ ಮೂಲಕ ಲಕ್ಷಾಂತರ ರೂಪಾಯಿಗಳಿಗೆ ಅಂಗಡಿ ಮಳಿಗೆಗಳನ್ನು ಒಪ್ಪಂದ ಕರಾರು ಮಾಡಿಕೊಳ್ಳುವ ಮೂಲಕ ಪುರಸಭೆಗೆ ಸಿಗಬೇಕಾದ ಲಕ್ಷಾಂತರ ರೂಪಾಯಿಗಳನ್ನು ಬಂಡವಾಳಶಾಹಿಗಳು ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು. ಪಟ್ಟಣದ ತುಂಬೆಲ್ಲ ಗುಂಡಿ ಬಿದ್ದ ರಸ್ತೆಗಳು ಜನರು ಸಂಚಾರ ಮಾಡಲು ಆಗುತ್ತಿಲ್ಲ ಎಂದು ಸಚಿವರಲ್ಲಿ ಯುಜಿಡಿ ಒಳಚರಂಡಿ ಕಾಮಗಾರಿಯನ್ನು ಆರಂಭಿಸುವಂತೆ ಸಚಿವರಲ್ಲಿ ಮನವಿ ಮಾಡಿದರು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿ ಜೂನ್ 30ರಂದು ಕಾಮಗಾರಿಗೆ ಶಂಕುಸ್ಥಾಪನೆ ಸ್ಥಾಪನೆ ಮಾಡಲಾಗುವುದು ಎಂದರು.
155 ಲಕ್ಷ ಅನುದಾನದಲ್ಲಿ ನಿರ್ಬಂಧಿತ ಅನುದಾನ ಮೀಸಲಿಟ್ಟಿದೆ 60ರಷ್ಟು ಮೌಲ್ಯದ 93 ಲಕ್ಷಗಳನ್ನು ಕುಡಿಯುವ ನೀರು ಕಾಮಗಾರಿಗೆ ಬಳಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಕ್ತನಿಧಿ ಶೇಕಡ 40ರಷ್ಟು ಅನುದಾನದ 62 ಲಕ್ಷ ರೂಗಳನ್ನು ಚರಂಡಿಗೆ ಬೆಸ್ಕಾಂ ಮೂಲಕ ಕಂಬಗಳು ಹಾಕಿಸುವುದು ಹಾಗೂ ಅವುಗಳ ನಿರ್ವಹಣೆಗೆ ಒತ್ತು ನೀಡುವುದು ಸಿಸಿ ರಸ್ತೆ ಹಾಗೂ ಸ್ಮಶಾನದ ಕಾಂಪೌಂಡ್ ನಿರ್ಮಾಣಕ್ಕೆ ಅಗತ್ಯಕ್ಕನುಗುಣವಾಗಿ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು. ಮಂದಿ ಮನೆ ನಿರ್ಮಾಣಕ್ಕೆ ಮುಂದಾಗಿ 70ರಿಂದ 80 ಮಂದಿ ಮನೆ ಕಟ್ಟಿಕೊಂಡಿದ್ದರು ಅವರುಗಳಿಗೆ ಕೇಂದ್ರ ಸರ್ಕಾರದ ಹಣ ಬಂದಿಲ್ಲ ಸಚಿವರಲ್ಲಿ ಸದಸ್ಯರು ಶ್ಯಾಮ್ ರೇಣುಕ ಪ್ರಸಾದ್ ರೇಣುಕಮ್ಮ ಟಿಂಬರ್ ಮಲ್ಲೇಶ್ ರತ್ನಮ್ಮ ಲಕ್ಷ್ಮಿಪಾಂಡುರಂಗಯ್ಯ ಆಗ್ರಹಿಸಿದರು.
ಇದಕ್ಕೆ ಸಚಿವರು ಗುರಿ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದಾಗ ಅಧಿಕಾರಿ ಕಕ್ಕಾಬಿಕ್ಕಿಯಾದರು ಇದಕ್ಕೆ ನಾನು ಏನೂ ಮಾಡಲಾಗದು ಎಂದು ಕೈಚೆಲ್ಲಿ ಸಚಿವರು ಕುಳಿತರು. ಎರಡನೇ ವಾರ್ಡಿನ ಸದಸ್ಯ ರತ್ನಮ್ಮ ಮಾತನಾಡುತ್ತಾ ನಮ್ಮ ವಾರ್ಡ್ ನಲ್ಲಿ ಯಾರು ಬೇಕಾದರೂ ನಲ್ಲಿ ಹಾಕಬಹುದು ಆತರ ಸ್ಥಿತಿ ನಿರ್ಮಾಣವಾಗಿದೆ ಅಧಿಕಾರಿಗಳು ಸಂಬಂಧಪಟ್ಟವರು ಈ ತರಹದ ಸಮಸ್ಯೆ ಉದ್ಭವ ಮಾಡುತ್ತಿದ್ದಾರೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಲಕ್ಷ್ಮೀ ಪಾಂಡುರಂಗಯ್ಯ ಮುಖ್ಯಾಧಿಕಾರಿ ಶ್ರೀನಿವಾಸ್ ಸದಸ್ಯರುಗಳಾದ ದಾಕ್ಷಾಯಣಮ್ಮ ರಾಜಶೇಖರ್ ಆಫೀಸ್ ಉಲ್ಲಾಖಾನ್ ಬಾಬು ಸಿಟಿ ಸುರೇಶ್ ತಿಪ್ಪೇಸ್ವಾಮಿ ರೇಣುಕಮ್ಮ ರಾಜಮ್ಮ ದಾಕ್ಷಾಯಣಮ್ಮ ಟಿಂಬರ್ ಮಲ್ಲೇಶ್ ಉಮಾ ಮತ್ತಿತರೇ ಸದಸ್ಯರು ಉಪಸ್ಥಿತರಿದ್ದರು.

(Visited 20 times, 1 visits today)

Related posts