ಚಿಕ್ಕನಾಯಕನಹಳ್ಳಿ:
ಸುಮಾರು 25 ವರ್ಷಗಳಿಂದ ಹೊರಗುತ್ತಿಗೆ ನೌಕರನಾಗಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಣುಕಪ್ಪ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ವ್ಯಕ್ತಿಯ ಶವವನ್ನು ಪುರಸಭೆಯ ಆವರಣದಲ್ಲಿ ಇಟ್ಟು ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಮಗನಿಗೆ ನೌಕರಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು
ಮೃತ ರೇಣುಕಪ್ಪ 50 ವರ್ಷದವನಾಗಿದ್ದು ಸುಮಾರು 25 ವರ್ಷಗಳಿಂದ ಪುರಸಭೆಯ ಟ್ರ್ಯಾಕ್ಟರ್ ಚಾಲಕನಾಗಿ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿಯಲಾಗಿದೆ
ಕಳೆದ ರಾತ್ರಿ ಸುಮಾರು ಎಂಟು ಗಂಟೆ ಸಮಯದಲ್ಲಿ ಪಟ್ಟಣದ ಲಕ್ಷ್ಮಿ ನರಸಿಂಹ ಚಿತ್ರಮಂದಿರದ ಎದುರು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈತನಲ್ಲಿ ರಕ್ತಸ್ರಾವ ಹೆಚ್ಚಾಗಿ ರಾತ್ರಿಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈತನ ಶವವನ್ನು ಪುರಸಭಾ ಕಚೇರಿ ಆವರಣಕ್ಕೆ ಪುರಸಭಾ ಸಿಬ್ಬಂದಿಗಳು ಕರೆತರುವ ಮೂಲಕ ಪ್ರತಿಭಟಿಸಿದರು. ಪಟ್ಟಣದ ಸ್ವಚ್ಛತೆಗೆ 25 ವರ್ಷಗಳಿಂದ ದೇಹವನ್ನು ಸವೆಸಿದ್ದು ಯಾವುದೇ ಪರಿಹಾರ ಇಲ್ಲವಾಗಿದೆ ಈಗಾಗಲೇ ಹೊರಗುತ್ತಿಗೆ ನೌಕರರು ಆತನನ್ನು ತೆಗೆದುಹಾಕಿದ್ದು ಆತ ಇಲ್ಲಿಯವರೆಗೂ ದುಡಿದ ಸಲುವಾಗಿ ಪುರಸಭೆಯಿಂದ 10 ಲಕ್ಷ ಪರಿಹಾರ ಧನ ನೀಡಬೇಕು ಅಲ್ಲದೆ ಅವನ ಮಗನಿಗೆ ನೌಕರಿ ನೀಡುವಂತೆ ಒತ್ತಾಯಿಸಿದರು
ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಅವರೊಂದಿಗೆ ಮಾತನಾಡುತ್ತ ಈಗಾಗಲೇ ಅವರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದರು ಹೀಗಾಗಿ ಅವರನ್ನು ಕಳೆದ ಆರು ತಿಂಗಳಿಂದ ಕೆಲಸಕ್ಕೆ ನೇಮಿಸಿಕೊಳ್ಳದೆ ರಿಲೀವ್ ಮಾಡಲಾಗಿತ್ತು ಇವರ ಸಂಬಳ ಕೂಡ ಯಾವುದೇ ಬಾಕಿ ಇಲ್ಲದೆ ಎಲ್ಲವನ್ನೂ ನೀಡಲಾಗಿದೆ.
ಪಿಎಫ್ ಹಣ ಎಲ್ಲಾ ಹೊರಗುತ್ತಿಗೆ ನೌಕರರ ಹಣ ಬಾಕಿ ಇರೋದು ಸತ್ಯ ಈಗಾಗಲೇ ಬ್ಯಾಂಕಿನವರು ಒಂದಿಗೆ ಮಾತನಾಡಿದ್ದೇವೆ ಬಗೆಹರಿಸುವ ಭರವಸೆಯನ್ನು ಇಲಾಖೆಯವರು ನೀಡಿದ್ದಾರೆ ಹಾಗಾಗಿ ಅಂತಿಮ ಹಂತದಲ್ಲಿರುವುದರಿಂದ ಇನ್ನೊಂದು ತಿಂಗಳಲ್ಲಿ ಬರಬಹುದು. ಮಗನನ್ನು ಸರ್ಕಾರಿ ಹುದ್ದೆಗೆ ತೆಗೆದುಕೊಳ್ಳುವ ವಿಚಾರವಾಗಿ ಆಡಳಿತ ಮಂಡಳಿಯೊಂದಿಗೆ ಮತ್ತು ಇಲಾಖೆಗೆ ಶಿಫಾರಸ್ ಮಾಡುವ ಭರವಸೆಯನ್ನು ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ ಅವರು ಅಂತ್ಯಸಂಸ್ಕಾರಕ್ಕೆ ಹಣ ನೀಡುವುದಾಗಿ ತಿಳಿಸಿದರು. ಮೃತರ ಅಂತಿಮ ದರ್ಶನವನ್ನು ಪುರಸಭಾ ಅಧ್ಯಕ್ಷೆ ಪುಷ್ಪ ಸದಸ್ಯರಾದ ರೇಣುಕಮ್ಮ ಹೋಮ ಕೆಂಗಲ್ ದಯಾನಂದ್ ಮಂಜುನಾಥ್ ನಾಗರಾಜು ಮುಖಂಡರುಗಳಾದ ಸುಬ್ರಹ್ಮಣ್ಯ ಪರಮೇಶ ಮೊದಲಾದವರು ಹಾಜರಿದ್ದರು.

(Visited 22 times, 1 visits today)