ತುಮಕೂರು:   

      ಜಿಲ್ಲೆಯಲ್ಲಿ ಗುರುವಾರ 14 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ ಎಂದು ಡಿ.ಹೆಚ್.ಓ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ನಿನ್ನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 1, ತುರುವೇಕೆರೆ-1 ತಿಪಟೂರು-3, ಹಾಗೂ ತುಮಕೂರು-9 ಸೇರಿ ಒಟ್ಟು 14 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.

ತಾಲ್ಲೂಕುವಾರು ಸೋಂಕಿತರ ವಿವರ :

ತುಮಕೂರು – 9

      ಮಹಾಲಕ್ಷ್ಮಿ ನಗರದ 30 ವರ್ಷದ ಗಂಡು, 28 ವರ್ಷದ ಹೆಣ್ಣು, ಬಿ ಜಿ ಪಾಳ್ಯ ಪ್ರಸನ್ನಕುಮಾರ ಬಡಾವಣೆಯ 47 ವರ್ಷದ ಗಂಡು, ಶೆಟ್ಟಿಹಳ್ಳಿ ಗೇಟ್ ಬಳಿಯ 46 ವರ್ಷದ ಗಂಡು, ದೇವನೂರು ಚರ್ಚ್ ಬಳಿಯ 64 ವರ್ಷದ ಗಂಡು, ಸಪ್ತಗಿರಿ ಬಡಾವಣೆಯ 47 ವರ್ಷದ ಗಂಡು, 40 ವರ್ಷದ ಗಂಡು, ಎಸ್ಐಟಿ 13ನೇ ಕ್ರಾಸ್ 64 ವರ್ಷದ ಗಂಡು, ಸದಾಶಿವನಗರದ 35 ವರ್ಷದ ಗಂಡು ಸೋಂಕು ದೃಡಪಟ್ಟಿದೆ.

ತಿಪಟೂರು – 03

      ಕೆಆರ್ ಬಡಾವಣೆಯ 50 ವರ್ಷದ ಗಂಡು, ರಾಮಚಂದ್ರಾಪುರದ 52 ವರ್ಷದ ಗಂಡು, ಅರಸು ನಗರದ 48 ವರ್ಷದ ಗಂಡು ಸೋಂಕು ಕಾಣಿಸಿಕೊಂಡಿದೆ.

ಚಿಕ್ಕನಾಯಕನಹಳ್ಳಿ – 01

      ಶೆಟ್ಟಿಕೆರೆಯ 54 ವರ್ಷದ ಗಂಡಿಗೆ ಸೋಂಕು ಪಾಸಿಟಿವ್ ಬಂದಿದೆ.

ತುರುವೇಕೆರೆ -01

      ದಬ್ಬೇಘಟ್ಟ ದ 23 ವರ್ಷದ ಹೆಣ್ಣು ಸೋಂಕು ದೃಡವಾಗಿದೆ.

      ನಿನ್ನೆ ಆಸ್ಪತ್ರೆಯಿಂದ 17 ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 85 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 223 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 11 ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಡಿ.ಹೆಚ್.ಓ. ಡಾ||ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 52 times, 1 visits today)