BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾಹಿತ್ಯ ಓದು ಮತ್ತು ಬರವಣಿಗೆ ಬದುಕಿನ ದಾರಿದೀಪ: ಎಂ.ಎಸ್.ರವಿಕುಮಾರ್
  • ನ.೨೧: ಉಪಮುಖ್ಯಮಂತ್ರಿಗಳಿ0ದ “ಪ್ರಜಾಸೇವಾ ಅಭಿಯಾನ ಜನಸಭೆ”
  • ಸಂಶೋಧನೆಗೆ ಡಿಜಿಟಲ್ ಟೂಲ್ಸ್, ಸಾಫ್ಟ್ವೇರ್ ಬಳಕೆಯ ಜ್ಞಾನ ಅಗತ್ಯ
  • ಭಾರತ್ ಜೋಡೊ ಯುವ ಸಂಘಗಳ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಲು ಪ್ರಧಾನ ಕಾರ್ಯದರ್ಶಿಗಳ ಸೂಚನೆ
  • ಗಣಿಬಾಧಿತ ಪ್ರದೇಶ ಅಭಿವೃದ್ಧಿ ಅನುಮೋದಿತ ಪ್ರಸ್ತಾವನೆಗಳ CEPMIZ ಡಿಪಿಆರ್‌ಗಳನ್ನು ತ್ವರಿತವಾಗಿ ಸಲ್ಲಿಸಿ
  • ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ
  • ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ
  • ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕರೊನಾ ಸೋಂಕು ನಿವಾರಣೆ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ
Trending

ಕರೊನಾ ಸೋಂಕು ನಿವಾರಣೆ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ

By News Desk BenkiyabaleUpdated:March 17, 2020 6:43 pm

ತುಮಕೂರು:

      ಜಿಲ್ಲೆಯಲ್ಲಿ ಕರೊನಾ ವೈರಸ್ ಬಗ್ಗೆ ಭಯಬೇಡ ಮುಂಜಾಗ್ರತೆ ಇರಲಿ ಕರೊನಾ ಸೋಂಕು ತಡೆಯಲು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ ಮುನ್ನೇಚ್ಚರಿಕೆ ಕ್ರಮವಹಿಸುವಂತೆ ಸೂಚಿಸಲಾಗಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನೇದ್ದೇಸಿ ಮಾತನಾಡಿದ ಅವರು, ವಿದೇಶದಿಂದ ಜಿಲ್ಲೆಗೆ 94 ಜನ ಪ್ರಯಾಣ ಬೆಳೆಸಿದ್ದು, ಅವರಲ್ಲಿ ಮನೆಯಲ್ಲೀರಿಸಿ ತಪಾಸಣೆಗೊಳಪಡುತ್ತಿರುವವರ ಸಂಖ್ಯೆ 83, ನಿಗಾವಣೆಯಲ್ಲಿ 28 ದಿನಗಳ ಅವಧಿ ಮುಗಿಸಿರುವವರ ಸಂಖ್ಯೆ 8, ಮರಳಿ ವಿದೇಶಕ್ಕೆ ಪ್ರಯಾಣ ಮಾಡಿರುವವರ ಸಂಖ್ಯೆ 3, ರಕ್ತ ಗಂಟಲು ಮಾದರಿಗಳ ಪರೀಕ್ಷೆ ನಡೆಸಿರುವವರ ಸಂಖ್ಯೆ 8 ಇವರಲ್ಲಿ ಸೋಂಕು ಇಲ್ಲದೇ ಇರುವ ಬಗ್ಗೆ ದೃಢಪಟ್ಟಿದೆ ಎಂದು ಅವರು ವಿವರಣೆ ನೀಡಿದರು.

      ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿದಿನ ಕರೊನಾ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಹೆಚ್ಚು ಜನ ಸೇರುವ ಎಲ್ಲಾ ತರಹದ ಸನ್ನಿವೇಶಗಳಿಗೆ ನಿಷೇಧ ಹೇರಲಾಗಿದೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ 3 ಹಂತದ ತರಬೇತಿಯನ್ನು ನೀಡಲಾಗಿದೆ. ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಮುನ್ನೇಚ್ಚರಿಕಾ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್‍ಗಳನ್ನು ನೀಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಸಂಸ್ಥೆ ಸಹಜಾರದೊಂದಿಗೆ ಮನೆ-ಮನೆಗೆ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

      ವಿದೇಶದಿಂದ ಪ್ರಯಾಣ ಬೆಳೆಸಿರುವವರ ಬಗ್ಗೆ ನಿಗಾವಹಿಸಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 100 ಐಸೋಲೇಶನ್ ವಾರ್ಡ್‍ಗಳನ್ನು ಗುರಿತಿಸಲಾಗಿದೆ. ಜಿಲ್ಲೆಯಲ್ಲಿರುವ 242 ಖಾಸಗಿ ಕ್ಲಿನಿಕ್‍ಗಳಲ್ಲಿಯೂ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಶ್ರೀದೇವಿ ಮತ್ತು ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕಂಟೋನೆಂಟ್ ಐಸೋಲೇಶನ್ ವಾರ್ಡ್‍ಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೇ ಪ್ರತಿನಿತ್ಯ ಖಾಸಗಿ ಕ್ಲಿನಿಕ್‍ಗಳು ಜಿಲ್ಲಾಡಳಿತಕ್ಕೆ ವರದಿಸಲ್ಲಿಸಬೇಕು ಎಂದು ಅವರು ತಿಳಿಸಿದರು.

      ಜ್ವರ, ನೆಗಡಿ, ಕೆಮ್ಮು, ತಲೆನೋವು, ಉಸಿರಾಟದ ತೊಂದರೆ ಹಾಗೂ ಭೇದಿಯಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಅವರು ಸೂಚನೆ ನೀಡಿದರು. ಅಂತಹ ಸೋಂಕು ಕಂಡುಬಂದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವರದಿ ಮಾಡುವಂತೆ ಅವರು ತಿಳಿಸಿದರು.

      ವಿದೇಶದಿಂದ ಬರುವವರು ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟರೆ ಅವರ ವರದಿಯನ್ನು ಸಹ ಜಿಲ್ಲಾ ಕಂಟ್ರೋಲ್ ರೋಂ ಗೆ ಮಾಹಿತಿ ನೀಡುವಂತೆ ಖಾಸಗಿ ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

      ಜನದಟ್ಟಣೆ ಸೇರುವ ಸಂತೆ, ಜಾತ್ರೆ, ಶಾಲಾ-ಕಾಲೇಜು, ಸಿನಿಮಾ ಮಂದಿರ, ಪಬ್, ಕ್ಲಬ್‍ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನಹರಿಸಿ ಪದೇ ಪದೇ ಕಣ್ಣು, ಮೂಗು ಬಾಯಿಗಳನ್ನು ಮುಟ್ಟಿಕೊಳ್ಳಬಾರದು. ಮತ್ತು ನೆಗಡಿ, ಕೆಮ್ಮು ಇರುವ ವ್ಯಕ್ತಿಗಳಿಂದ ದೂರ ಉಳಿಯುವುದು ಸೂಕ್ತ ಎಂದು ಅವರು ಸೂಚನೆ ನೀಡಿದ್ದಾರೆ.

      ಯಾವುದೇ ಒಬ್ಬ ವ್ಯಕ್ತಿ ಕೆಮ್ಮು, ಜ್ವರದಿಂದ ಬಳುತ್ತಿದ್ದರೆ, ಶಂಕಿತ ವ್ಯಕ್ತಿಯೆಂದು ಗುರುತಿಸಿ ಅವರ ರಕ್ತ ಮತ್ತು ಗಂಟಲು ಸ್ರಾವದ ಪರೀಕ್ಷೆಯ ನಂತರ ದೃಢಪಟ್ಟರೇ ಮಾತ್ರ ಸೋಂಕಿತ ವ್ಯಕ್ತಿಯೆಂದು ಪರಿಗಣಿಸಲಾಗುವುದೆಂದು ಅವರು ತಿಳಿಸಿದರು.

      ಮುಖ್ಯವಾಗಿ ಕರೊನಾ ವೈರಸ್ ಬಗ್ಗೆ ಭಯಪಡದೇ ವೈಯಕ್ತಿಕ ಮತ್ತು ನಾವು ವಾಸಿಸುವ ಸುತ್ತಮುತ್ತ ಸ್ವಚ್ಚತೆಯ ಬಗ್ಗೆ ಗಮನಹರಿಸಬೇಕೆಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಡಿಹೆಚ್‍ಓ ಡಾ|| ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

(Visited 16 times, 1 visits today)
Previous Articleಮನೆ-ಮನೆಗೆ ಭೇಟಿ ನೀಡಿ ಕೊರೊನಾ ಬಗ್ಗೆ ಅರಿವು ಮೂಡಿಸಲಾಗುವುದು – ಡೀಸಿ
Next Article ಕೊರೋನಾ ಭೀತಿ ಹಿನ್ನೆಲೆ ತುಮಕೂರು ಪಾಲಿಕೆಯಲ್ಲಿ ತುರ್ತುಸಭೆ
News Desk Benkiyabale

Related Posts

ಸಾಹಿತ್ಯ ಓದು ಮತ್ತು ಬರವಣಿಗೆ ಬದುಕಿನ ದಾರಿದೀಪ: ಎಂ.ಎಸ್.ರವಿಕುಮಾರ್

November 17, 2026 5:31 pm news

ನ.೨೧: ಉಪಮುಖ್ಯಮಂತ್ರಿಗಳಿ0ದ “ಪ್ರಜಾಸೇವಾ ಅಭಿಯಾನ ಜನಸಭೆ”

November 17, 2026 5:30 pm news

ಸಂಶೋಧನೆಗೆ ಡಿಜಿಟಲ್ ಟೂಲ್ಸ್, ಸಾಫ್ಟ್ವೇರ್ ಬಳಕೆಯ ಜ್ಞಾನ ಅಗತ್ಯ

November 17, 2026 5:28 pm news
ತಾಜಾ ಸುದ್ಧಿಗಳು
news

ಸಾಹಿತ್ಯ ಓದು ಮತ್ತು ಬರವಣಿಗೆ ಬದುಕಿನ ದಾರಿದೀಪ: ಎಂ.ಎಸ್.ರವಿಕುಮಾರ್

November 17, 2026 5:31 pm
news

ನ.೨೧: ಉಪಮುಖ್ಯಮಂತ್ರಿಗಳಿ0ದ “ಪ್ರಜಾಸೇವಾ ಅಭಿಯಾನ ಜನಸಭೆ”

November 17, 2026 5:30 pm
news

ಸಂಶೋಧನೆಗೆ ಡಿಜಿಟಲ್ ಟೂಲ್ಸ್, ಸಾಫ್ಟ್ವೇರ್ ಬಳಕೆಯ ಜ್ಞಾನ ಅಗತ್ಯ

November 17, 2026 5:28 pm
Trending

ಭಾರತ್ ಜೋಡೊ ಯುವ ಸಂಘಗಳ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಲು ಪ್ರಧಾನ ಕಾರ್ಯದರ್ಶಿಗಳ ಸೂಚನೆ

November 17, 2026 5:26 pm
news

ಗಣಿಬಾಧಿತ ಪ್ರದೇಶ ಅಭಿವೃದ್ಧಿ ಅನುಮೋದಿತ ಪ್ರಸ್ತಾವನೆಗಳ CEPMIZ ಡಿಪಿಆರ್‌ಗಳನ್ನು ತ್ವರಿತವಾಗಿ ಸಲ್ಲಿಸಿ

November 17, 2026 5:22 pm
news

ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ

November 16, 2026 5:26 pm
Our Youtube Channel
Our Picks

ಸಾಹಿತ್ಯ ಓದು ಮತ್ತು ಬರವಣಿಗೆ ಬದುಕಿನ ದಾರಿದೀಪ: ಎಂ.ಎಸ್.ರವಿಕುಮಾರ್

November 17, 2026 5:31 pm

ನ.೨೧: ಉಪಮುಖ್ಯಮಂತ್ರಿಗಳಿ0ದ “ಪ್ರಜಾಸೇವಾ ಅಭಿಯಾನ ಜನಸಭೆ”

November 17, 2026 5:30 pm

ಸಂಶೋಧನೆಗೆ ಡಿಜಿಟಲ್ ಟೂಲ್ಸ್, ಸಾಫ್ಟ್ವೇರ್ ಬಳಕೆಯ ಜ್ಞಾನ ಅಗತ್ಯ

November 17, 2026 5:28 pm

ಭಾರತ್ ಜೋಡೊ ಯುವ ಸಂಘಗಳ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಲು ಪ್ರಧಾನ ಕಾರ್ಯದರ್ಶಿಗಳ ಸೂಚನೆ

November 17, 2026 5:26 pm

ಗಣಿಬಾಧಿತ ಪ್ರದೇಶ ಅಭಿವೃದ್ಧಿ ಅನುಮೋದಿತ ಪ್ರಸ್ತಾವನೆಗಳ CEPMIZ ಡಿಪಿಆರ್‌ಗಳನ್ನು ತ್ವರಿತವಾಗಿ ಸಲ್ಲಿಸಿ

November 17, 2026 5:22 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಾಹಿತ್ಯ ಓದು ಮತ್ತು ಬರವಣಿಗೆ ಬದುಕಿನ ದಾರಿದೀಪ: ಎಂ.ಎಸ್.ರವಿಕುಮಾರ್

By News Desk BenkiyabaleNovember 17, 2026 5:31 pm

ಹುಳಿಯಾರು: ಗೋಷ್ಠಿಗಳು ಮತ್ತು ಸಮ್ಮೇಳನಗಳು ಕೇವಲ ಸಂಖ್ಯೆಗಾಗಿ ನಡೆಯುವುದಿಲ್ಲ. ಬದಲಾಗಿ, ಇಂದಿನ ಕಾಲಘಟ್ಟದಲ್ಲಿ ನಾವು ಚಿಂತನೆ ನಡೆಸಬೇಕಾದ ಬಹುತೇಕ ಪ್ರಮುಖ…

ನ.೨೧: ಉಪಮುಖ್ಯಮಂತ್ರಿಗಳಿ0ದ “ಪ್ರಜಾಸೇವಾ ಅಭಿಯಾನ ಜನಸಭೆ”

November 17, 2026 5:30 pm

ಸಂಶೋಧನೆಗೆ ಡಿಜಿಟಲ್ ಟೂಲ್ಸ್, ಸಾಫ್ಟ್ವೇರ್ ಬಳಕೆಯ ಜ್ಞಾನ ಅಗತ್ಯ

November 17, 2026 5:28 pm

ಭಾರತ್ ಜೋಡೊ ಯುವ ಸಂಘಗಳ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಲು ಪ್ರಧಾನ ಕಾರ್ಯದರ್ಶಿಗಳ ಸೂಚನೆ

November 17, 2026 5:26 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.