ತುಮಕೂರು: 

      ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರು ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ, ಕೆ. ರಾಕೇಶ್‍ಕುಮಾರ್ ಅವರು ತಿಳಿಸಿದರು.

      ಗುಜರಾತ್ ರಾಜ್ಯದಿಂದ ಮೇ 5ರಂದು ಪಾವಗಡ ತಾಲ್ಲೂಕಿಗೆ ಆಗಮಿಸಿದ್ದ 13 ಜನರ ಪೈಕಿ 3ಮಂದಿಗೆ ಸೋಂಕು ದೃಢಪಟ್ಟಿತ್ತು ಆದರೆ ಇದೀಗ 12ದಿನದ ಮಾದರಿ ಪರೀಕ್ಷೆಯಲ್ಲಿ 22ವರ್ಷದ ಪಿ-1970, ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿದೆ ಹಾಗೂ ಮಹಾರಾಷ್ಟ್ರದ ನಾಂದೇಡ್‍ನಿಂದ ಮೇ19ರಂದು ತಿಪಟೂರು ತಾಲ್ಲೂಕಿಗೆ ಬಂದಿರುವ 50ವರ್ಷದ ಟ್ರಕ್ ಚಾಲಕರಾಗಿದ್ದ ಪಿ-1971 ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ, ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರೆಂಟೈನ್‍ನಲ್ಲಿ ಇಡಲು ಕ್ರಮವಹಿಸಲಾಗಿದೆ. ತಿಪಟೂರಿನ ಗಾಂಧಿನಗರವನ್ನು ಹೊಸದಾಗಿ ಕಂಟೈನ್ಮ್‍ಂಟ್ ಜೋನ್ ಆಗಿ ಘೋಷಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

      ಈ ಇಂದೆ ದಾಖಲಾಗಿದ್ದ ಸೋಂಕಿತ ಪ್ರಕರಣಗಳಾದ ಪಿ-1688 ಕೇಸ್‍ನ ಪ್ರಾಥಮಿಕ ಸಂಪರ್ಕ 5ಮಂದಿಯನ್ನು ಮತ್ತು ಹೆಬ್ಬೂರು ಪ್ರಕರಣದ ಪಿ-1685 ಕೇಸ್‍ನ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರೆಂಟೈನ್ ಮಾಡಲಾಗಿದೆ ಎಂದು ಅವರು ಹೇಳಿದರು.

      ತುಮಕೂರು ಜಿಲ್ಲೆಗೆ ಹೊರ ರಾಜ್ಯಗಳಿಂದ ಬರುವ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಡಲಾಗಿದ್ದು ಎಲ್ಲಾ ನಾಗರಿಕರು ಹೊರ ರಾಜ್ಯಗಳಿಂದ ಬರುವ ವ್ಯಕ್ತಿಗಳ ಬಗ್ಗೆ ತುರ್ತಾಗಿ ಜಿಲ್ಲಾಡಳಿತಕ್ಕೆ ಹಾಗೂ ತಾಲ್ಲೂಕಾಡಳಿತಕ್ಕೆ ಮಾಹಿತಿ ನೀಡಬೇಕೆಂದು ಅವರು ವಿನಂತಿ ಮಾಡಿದರು.

(Visited 16 times, 1 visits today)