ತುಮಕೂರು:

      ತುಮಕೂರು ಜಿಲ್ಲೆ ಕಲ್ಪತರು ನಾಡಲ್ಲಿ ಕೊರೋನಾ ರಣಕೇಕೆ ಆಕುತ್ತಿದ್ದು, ಬುಧವಾರ 4 ಕೊರೋನಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಜನರನ್ನು ಭಯಭೀತರನ್ನಾಗಿ ಮಾಡಿದೆ.

      ಇದೀಗ ಬಂದಿರುವ 4 ಸೋಂಕಿತರ ಪೈಕಿ ಇಬ್ಬರು ಮಹಿಳೆಯರು ಇಬ್ಬರು ಮಕ್ಕಳು ಎಂದು ತಿಳಿದುಬಂದಿದ್ದು, ತುರುವೇಕೆರೆ ತಾಲೂಕಿನ ಮಲ್ಲಘಟ್ಟ ಮೂಲದವರಲ್ಲಿ 3 ಸೋಂಕಿತರು. ಕೊರಟಗೆರೆ ಮೂಲದವರಲ್ಲಿ ಒಬ್ಬರು ಸೋಂಕಿತರು ಎಂದು ತಿಳಿದುಬಂದಿದ್ದು, ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಮುಂಬೈ ಸೋಂಕು ತಗುಲಿರುವ ವಿಷಯ ತಿಳಿದುಬಂದಿದೆ.

      ಬುಧವಾರ ವರದಿ ಬಂದಿರುವ ಎಲ್ಲರೂ ಬಹಳಷ್ಟು ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿದ್ದವರು. ಮುಂಬೈನಿಂದ ಕಾರಿನಲ್ಲಿ ಬಂದ 6 ಜನರಲ್ಲಿ ನಾಲ್ವರಿಗೆ ಕೋವಿಡ್-19 ಪಾಸಿಟೀವ್ ಪತ್ತೆಯಾಗಿದೆ. ಕಾರಿನಲ್ಲಿ ಆಗಮಿಸಿದ 6 ಜನರನ್ನ ಕ್ವಾರೆಂಟೈನ್ ಮಾಡಿ ತಪಾಸಣೆಗೆ ಒಳಪಡಿಸಲಾಗಿತ್ತು. ತಪಾಸಣೆ ವೇಳೆ 4 ಜನರಲ್ಲಿ ಸೋಂಕು ದೃಢಪಟ್ಟಿದೆ. ಉಳಿದ ಇಬ್ಬರು ಕ್ವಾರೆಂಟೈನ್‍ನಲ್ಲಿ ಇರುತ್ತಾರೆ.

      ಸೋಂಕಿತರಾದ 4 ಜನರನ್ನು ತುಮಕೂರು ಜಿಲ್ಲೆ ಕೋವಿಡ್ – 19 ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 15 ಜನರಿಗೆ ಕೊವೀಡ್-19 ಪಾಸಿಟೀವ್ ಬಂದಿದ್ದು, ಬಹುತೇಕ ಸೋಂಕಿತರು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದಲೇ ಆಗಮಿಸಿದವರಾಗಿರುತ್ತಾರೆ.

      ದೆಹಲಿ, ಗುಜರಾತ್, ಅಹಮದಬಾ, ಪಾದರಾಯನಪುರ, ನಂತರ ಇದೀಗ ಮುಂಬೈನಿಂದ ಆಗಮಿಸಿದರಲ್ಲಿ ಸೋಂಕು ದೃಢಪಟ್ಟಿರುತ್ತದೆ. ಜಿಲ್ಲೆಯ 15 ಕೋವಿಡ್-19 ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದು, 5 ಜನರು ಗುಣಮುಖರಾಗಿರುತ್ತಾರೆ. ಇನ್ನುಳಿದ 8 ಜನರು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಶ್‍ಕುಮಾರ್ ತಿಳಿಸಿರುತ್ತಾರೆ.

(Visited 4 times, 1 visits today)