ತುಮಕೂರು: 

      ಇತ್ತೀಚೆಗೆ ಕೊರೊನಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದ ಶಿರಾ ಪಟ್ಟಣದ ವೃದ್ಧನ 13 ವರ್ಷದ ಮಗನಲ್ಲಿ ಸೋಂಕು ಇರುವುದು ದೃಢವಾಗಿದೆ.

       ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಇದು ತುಮಕೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಎರಡನೇ ಖಚಿತ ಪ್ರಕರಣ ಎಂದಿದ್ದಾರೆ.

      ಇತ್ತೀಚೆಗೆ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ಶಿರಾದ 60 ವರ್ಷದ ವಯಸ್ಸಿನ 13 ವರ್ಷದ ವಯಸ್ಸಿನ ಮಗನಿಗೆ ಸೋಂಕು ತಗುಲಿದೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿರುವ ಇಂದಿರಾಗಾಂಧಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿದೆ.

      ಮೃತ ವೃದ್ಧನೊಂದಿಗೆ ಸಂಪರ್ಕದಲ್ಲಿದ್ದವರಲ್ಲಿ ನೆಗೆಟಿವ್ ಕಂಡುಬಂದಿದೆ. ಮಾ.17ರಂದು ಮೃತ ವೃದ್ಧ ತಿಪಟೂರಿಗೆ ಹೋಗಿದ್ದರು. ಹೀಗಾಗಿ ತಿಪಟೂರಿನಲ್ಲಿ 11 ಜನರ ರಕ್ತ ಮತ್ತು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 30 ಸ್ಯಾಂಪಲ್ ಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಇಬ್ಬರು ಕೋವಿಡ್-19 ಸೋಂಕಿತರೆಂದು ಗುರುತಿಸಲಾಗಿದೆ. ಇದೀಗ 13 ವರ್ಷದ ಬಾಲಕನನ್ನು ರೋಗಿ ನಂ.84ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

      ಈಗಾಗಲೇ ಶಿರಾ ಪಟ್ಟಣವನ್ನು ಸಂಪೂರ್ಣ ಲಾಕ್ ಡೌನ್ ಮಾಡಿದ್ದೇವೆ. 100 ಕ್ಕೂ ಹೆಚ್ಚು ತಂಡಗಳು ಶಿರಾದಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ದಿನನಿತ್ಯ ಸಾಮಗ್ರಿಗಳ ಕೊರತೆ ಆಗದಂತೆ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

(Visited 98 times, 1 visits today)